ಮಟಪಾಡಿ: ಭಾರಿ ಗಾಳಿ ಮಳೆ – ದೇವಸ್ಥಾನ, ಮನೆ ಮೇಲೆ ಮರ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ

Spread the love

ಮಟಪಾಡಿ: ಭಾರಿ ಗಾಳಿ ಮಳೆ – ದೇವಸ್ಥಾನ, ಮನೆ ಮೇಲೆ ಮರ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ

ಉಡುಪಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಗಾಳಿಮಳೆಯಾಗುತ್ತಿದ್ದು ಬುಧವಾರ ಸುರಿದ ಭಾರಿ ಗಾಳಿ ಮಳೆಗೆ ಮಟಪಾಡಿ ಗ್ರಾಮದ ಚಿತ್ತಾರಿ‌ ನಂದಿಕೇಶ್ವರ ದೇವಸ್ಥಾನದ  ಮೇಲೆ ಮನೆಯೊಂದರ ಮೇಳೆ ಮರ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಬುಧವಾರ ಭಾರಿ ಗಾಳಿ ಮಳೆಯ ಪರಿಣಾಮ ಬ್ರಹ್ಮಾವರ ತಾಲೂಕಿನ ಮಟಪಾಡಿ ಗ್ರಾಮದ ಚಿತ್ತಾರಿ‌ ನಂದಿಕೇಶ್ವರ ದೇವಸ್ಥಾನದ ಸಮೀಪ ದ ದೈವಸ್ಥಾನದ ಮೇಲೆ 150 ವರ್ಷದ ಹಳೆಯ ಮರ ಉರುಳಿ ಬಿದ್ದಿದೆ. ಅಲ್ಲದೆ ಅಲ್ಲಿಯೇ ಸಮೀಪದ ಮಹಾಬಲ ನಾಯರಿಯವರ ಮನೆಯ ಮೇಲೆ ಮರ ಬಿದ್ದು, ಮನೆಯ ಛಾವಣಿ ಮತ್ತು ಬಚಲು ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಮುದ್ದುಜತ್ತನ್ ಅವರ ಹಲಸಿನ ಮರ ಗಾಳಿಮಳೆಗೆ ಬಿದ್ದಿದೆ ಘಟನೆಯಿಂದ ಅಂದಾಜು ರೂ 6 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ಸ್ಥಳೀಯ ಗ್ರಾಮ ಪಂಚಾಯತ್‌ ಅಧಿಕಾರಿಗಳು ಅಧಿಕಾರಿಗಳು ಗ್ರಾ.ಪಂ ಅಧ್ಯಕ್ಷರು ಮತ್ತು ಪಂಚಾಯತ ಸದಸ್ಯರು ಭೇಟಿ ನೀಡಿದ್ದಾರೆ.


Spread the love