ಮಟಪಾಡಿ ಶ್ರೀನಿಕೇತನ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ

Spread the love

ಮಟಪಾಡಿ ಶ್ರೀನಿಕೇತನ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ  ಉಚಿತ ಟ್ಯಾಬ್ ವಿತರಣೆ

ಉಡುಪಿ: ರೋಟರಿ ಮತ್ತು ಪಬ್ಲಿಕ್ ಟಿವಿ ಸಂಸ್ಥೆಯ ಜ್ಞಾನದೀವಿಗೆ ಕಾರ್ಯಕ್ರಮದಡಿ ರಾಜ್ಯಾದ್ಯಂತ ಉಚಿತವಾಗಿ ಟ್ಯಾಬ್ ಹಂಚಿಕೆ ಮಾಡಲಾಗುತ್ತಿದ್ದು, ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಮಟಪಾಡಿ ಶ್ರೀನಿಕೇತನ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂದು ಉಚಿತ ಟ್ಯಾಬ್ ಗಳನ್ನು ವಿತರಿಸಲಾಯಿತು.

ಹತ್ತನೇ ತರಗತಿಯ 28 ಮಕ್ಕಳ ಬಳಕೆಗೆ 14 ಟ್ಯಾಬ್ ಗಳನ್ನು ಹಂಚಿಕೆ ಮಾಡಲಾಗಿದ್ದು, ಕೊರೋನ ಬ್ಯಾಚ್ ಆಗಿರುವುದರಿಂದ ವಿದ್ಯಾರ್ಥಿಗಳ ಬಳಕೆಗೆ ಈ ಟ್ಯಾಬ್ ಗಳು ಬಳಕೆಯಾಗಲಿವೆ.

ರೋಟರಿ ಸಂಸ್ಥೆಯ ಉಪ ಗವರ್ನರ್ ಜೊನ್2 ದೇವದಾಸ ಶೆಟ್ಟಿಗಾರ್, ಬ್ರಹ್ಮಾವರ ತಾಲೂಕು ಶಿಕ್ಷಣ ಇಲಾಖೆಯ ಸಂಯೋಜಕ ಪ್ರಕಾಶ ಉಡುಪಿ ರೋಟರಿ ಅಧ್ಯಕ್ಷ ರಾಧಿಕಾ ಲಕ್ಷ್ಮೀನಾರಾಯಣ, ಕಾರ್ಯದರ್ಶಿ ದೀಪಾ ಭಂಡಾರಿ, ಗುರುರಾಜ್ ಭಟ್, ದಿನೇಶ್ ಭಂಡಾರಿ ಲಕ್ಷ್ಮೀನಾರಾಯಣ ಬಿ ವಿ ರಾಮಚಂದ್ರ ಉಪಾಧ್ಯಾಯ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಶೋಕ್ ಕುಮಾರ್ ಶೆಟ್ಟಿ, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು,

ಶಾಲಾ ಶಿಕ್ಷಕ ದಿನಕರ ಶೆಟ್ಟಿ ಬೈಕಾಡಿ ಕಾರ್ಯಕ್ರಮವನ್ನು ನಿರೂಪಿಸಿದ್ದರು. ರೋಟರಿ ಸಂಸ್ಥೆಯ ಸದಸ್ಯರು, ಉಪಸ್ಥಿತರಿದ್ದರು.


Spread the love