ಮಡಿವಾಳ ಪೊಲೀಸರಿಂದ ರೂ. 1.85 ಕೋಟಿ ಮೌಲ್ಯದ ಮಾದಕ ವಸ್ತು ವಶ – ನಾಲ್ವರ ಬಂಧನ

Spread the love

ಮಡಿವಾಳ ಪೊಲೀಸರಿಂದ ರೂ. 1.85 ಕೋಟಿ ಮೌಲ್ಯದ ಮಾದಕ ವಸ್ತು ವಶ – ನಾಲ್ವರ ಬಂಧನ

ಬೆಂಗಳೂರು: ಮಾದಕ ವಸ್ತುಗಳಾದ ಹ್ಯಾಪ್ ಆಯಿಲ್ ಮತ್ತು ಗಾಂಜಾವನ್ನು ವಹಿವಾಟು ಮಾಡುತ್ತಿದ್ದ ನಾಲ್ಕು ಜನ ಆರೋಪಿಗಳನ್ನು ಮಡಿವಾಳ ಪೊಲೀಸರು ಬಂಧಿಸಿ ಅವರಿಂದ ರೂ 1,85,90,000/- ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಅನೀಸ್ ಬಿನ್ ಮಮ್ಮು, (29), ಲೋಕೇರ್‌ ಬಿನ್ ವೆಂಕಟೇಶ್ (35), ಮೋಹನ್‌ಕುಮಾರ್ @ ಆಗ ಬಿನ್ ಲೇ ಶಿವ (23), ಜಬಿ ಬಿನ್ ಬಾಬುಸಾಬ್ (24) ಎಂದು ಗುರುತಿಸಲಾಗಿದೆ.

ಮಡಿವಾಳ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸುನೀಲ್ ವೈ, ನಾಯ್ಕ ರವರು ದಿನಾಂಕ:03-07-2021 ರಂದು ಬೆಳಿಗ್ಗೆ ಹಳೆಯ ಪ್ರಕರಣದಲ್ಲಿ ತನಿಖೆಯಲ್ಲಿರುವಾಗ ಠಾಣಾ ಸರಹದ್ದಿನ ಜೋಗಿ ಕಾಲೋನಿ ಪಾರ್ಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಂದು ಬಿಳಿ ಬಣ್ಣದ AP-31-C-666 MAHENDRA XYLO ಕಾರ್ ನಿಲ್ಲಿಸಿಕೊಂಡು ಐದು ಜನರು ಸಂಶಯಾಸ್ಪದವಾಗಿ ನಿಂತುಕೊಂಡು ಮಾದಕ ವಸ್ತುಗಳಾದ ಹ್ಯಾಷ್ ಆಯಿಲ್ 3.3 ಲೀಟರ್ ಮತ್ತು 4 ಕೆ.ಜಿ ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ನಿಂತಿದ್ದ ಸಮಯದಲ್ಲಿ ಅವರ ಮೇಲೆ ದಾಳಿ ಮಾಡಿದಾಗ ಒಬ್ಬ ಆಸಾಮಿಯು ತಪ್ಪಿಸಿಕೊಂಡು ಓಡಿಹೋಗಿದ್ದು, ಉಳಿದ 4 ಜನ ಆಸಾಮಿಗಳನ್ನು ವಶಕ್ಕೆ ತೆಗೆದುಕೊಂಡು ಅವರುಗಳ ವಶದಲ್ಲಿದ್ದ ಸುಮಾರು 1,85,90,000/-ರೂಗಳು ಬೆಲೆಬಾಳುವ ಹ್ಯಾಷ್ ಆಯಿಲ್ ಮತ್ತು 4 ಕೆ.ಜಿ ಗಾಂಜ ಎಂಬ ಮಾದಕ ವಸ್ತುಗಳನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಮಹೇಂದ್ರ ಝಲೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ, ಅನೀಸ್ ಎಂಬ ಆರೋಪಿಯು ಹ್ಯಾಪ್ ಆಯಿಲ್ 3.3 ಲೀಟರ್ ಮತ್ತು 4 ಕೆ.ಜಿ ಗಾಂಜಾವನ್ನು ವಿಶಾಖಪಟ್ಟಣದಿಂದ ತಂದು ಮಡಿವಾಳ: ಪೊಲೀಸ್ ಠಾಣಾ ವ್ಯಾಪ್ತಿಯ ಜೋಗಿ ಕಾಲೋನಿಯ ಪಾರ್ಕ್ ಬಳಿ ಮಾರಾಟ ಮಾಡಲು ಯತ್ನಿಸಿದ್ದರು ̤

ಈ ಪ್ರಕರಣದ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಆಗೋಯ ವಿಭಾಗದ  ಉಪ ಪೊಲೀಸ್ ಕಮೀಷನರ್‌ರವರಾದ   ಶ್ರೀನಾಥ ಮಹದೇವ ಜೋಷಿ ರವರ ನಿರ್ದೇಶನದಲ್ಲಿ, ಮಡಿವಾಳ ಉಪ ವಿಭಾಗದ   ಸಹಾಯಕ ಪೊಲೀಸ್ ಕಮೀಷನರ್  ಸುಧೀರ್ ಎಂ. ಹೆಗಡೆ ರವರುಗಳ ಮಾರ್ಗದರ್ಶನದಲ್ಲಿ ಮಡಿವಾಳ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್  ಸುನೀಲ್ ವೈ.ನಾಯಕ್ ರವರ ನೇತೃತ್ವದ ತಂಡ ಮ.ಪಿ.ಎಸ್.ಐ ರವರಾದ ಕು ಭೀಮಕ್ಕೆ ಕರ್ಕಿಹಳ್ಳಿ ಮತ್ತು ಸಿಬ್ಬಂದಿಯವರುಗಳಾದ ಶ್ರೀ. ರೇವಣ್ಣ, ಎ.ಎಸ್.ಐ,  ವಿಜಯಕುಮಾರ್, ಹೆಚ್.ಸಿ ,  ಚಂದನ್ ಎಸ್. ಗೌಡ ಹೆಚ್.ಸಿ ,  ಸುರೇಶ್.ಎ.ಪಿ ಹೆಚ್.ಸಿ , ಶ್ರೀ. ಪ್ರಕಾಶ್ ಹೆಚ್.ಎ ಹೆಚ್ ಸಿ , ಶ್ರೀ.ಮುನಿರಾಜು ಪಿ.ಸಿ , ಶ್ರೀ.ಹೇಮಂತನಾಯ್ಕ.ಬಿ ಶ್ರೀ.ಪ್ರವೀಣ್ ಕಾಮನೂರ್ ಪಿ.ಸಿ , ಶ್ರೀ.ಕಿರಣ್ ಕುಮಾರ್, ಪಿ.ಸಿ  ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

 


Spread the love