ಮಡಿವಾಳ ಮಾಚಿದೇವರು ಇಂದಿಗೂ ಪ್ರಸ್ತುತರು: ಕರುಣಾಕರ

Spread the love

ಮಡಿವಾಳ ಮಾಚಿದೇವರು ಇಂದಿಗೂ ಪ್ರಸ್ತುತರು: ಕರುಣಾಕರ

ಮಂಗಳೂರು: ಮಹಾನ್ ತಪಸ್ವಿಗಳಾದ ಮಡಿವಾಳ ಮಾಚಿದೇವರು ಆದರ್ಶ ಸಮಾಜ ಕಟ್ಟುವಲ್ಲಿ ಪರಿಶ್ರಮ ಪಟ್ಟ ವ್ಯಕ್ತಿತ್ವವುಳ್ಳವರಾಗಿದ್ದರು, ಇಂದಿಗೂ ಅವರು ಪ್ರಸ್ತುತರು ಮಂಗಳೂರಿನ ಎಕ್ಸ್‍ಪರ್ಟ್ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಕರುಣಾಕರ ಬಲ್ಕೂರು ಅವರು ಅಭಿಪ್ರಾಯಪಟ್ಟರು.

ಅವರು ಫೆ.1ರ ಬುಧವಾರ ನಗರದ ತುಳು ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ(ರಿ)ದ ಸಹಕಾರದಲ್ಲಿ ಆಯೋಜಿಸಲಾಗಿದ್ದ ಮಡಿವಾಳ ಮಾಚಿದೇವರ ಜಯಂತಿಯಲ್ಲಿ ಉಪನ್ಯಾಸ ನೀಡಿದರು.

ಜಾತಿ, ಅಸಮಾನತೆ, ಸಾಮಾಜಿಕ ನ್ಯಾಯ ಪರಿಪಾಲನೆಯಾಗದಂತ ಕಠಿಣ ಸಮಯದಲ್ಲಿ ತಮ್ಮ ಸಮಾಜೋದ್ದಾರಕ ಚಿಂತನೆಗಳನ್ನು ನೇರವಾಗಿ ಹೇಳುವ ಮೂಲಕ ಜಾತಿಗಿಂತ ವೃತ್ತಿ ಮುಖ್ಯ ಎಂಬ ಅವರ ಆಶಯ ಪ್ರೇರಣಾದಾಯಕವಾದದ್ದು, ಬಸವಣ್ಣನವರ ಚಿಂತನೆ ಹಾಗೂ ಅವರ ಅನುಭವಕ್ಕೆ ಮರುಳಾಗಿ ಅಂದಿನ ಕಲ್ಯಾಣಕ್ಕೆ ಬಂದವರು, ಧರ್ಮ, ಸಾಹಿತ್ಯ, ಸಮಾಜವನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದರು. ಸರಳ ಭಾμÉಯಲ್ಲಿ ವಚನ ರಚನೆಯ ಮೂಲಕ ಅಂದು ಸಮಾಜದಲ್ಲಿ ಬೇರೂರಿದ್ದ ಅನಿಷ್ಠ ಪದ್ಧತಿಗಳು, ಅಸಮಾನತೆಯನ್ನು ಹೋಗಲಾಡಿಸಲು ಯತ್ನಿಸಿದರು. ಜೀವನ-ಬದುಕು-ಕರ್ಮದ ಬಗ್ಗೆ ನೇರವಾಗಿ ಹೇಳಿದವರು, ಕಲಿ ದೇವರ ದೇವ ಅಂಕಿತನಾಮವನ್ನು ಬಳಸಿ ವಚನ ರಚಿಸಿದರು, ತಮ್ಮ ಜೀವಿತಕಾಲದಲ್ಲೇ ಸಮಾಜದೊಂದಿಗೆ ಬದುಕುವ ರೀತಿಯನ್ನು ತಿಳಿಸಿಕೊಟ್ಟರು ಅವರ ಆದರ್ಶಗಳು ಸಾರ್ವಕಾಲಿಕ ಪ್ರೇರಣೆಯಾಗಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ(ರಿ)ದ ಅಧ್ಯಕ್ಷರಾದ ವಿಶ್ವನಾಥ ವಿ. ಕಾಟಿಪಳ್ಳ ಅವರು ಮಾತನಾಡಿ, ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವರಹಿಪ್ಪರಗಿಯಲ್ಲಿ ಕ್ರಿ.ಶ.1,120ರಲ್ಲಿ ಜನಿಸಿದ ಮಡಿವಾಳ ಮಾಚಿದೇವರು, ತಮ್ಮ ಗುರುಗಳಾದ ಮಲ್ಲಿಕಾರ್ಜುನ ಸ್ವಾಮಿಗಳ ಮಾರ್ಗದರ್ಶನದಲ್ಲಿ ಮುನ್ನಡೆದರು, ಅರಸ ಮೇಲಲ್ಲ ಅಗಸ ಕೀಳಲ್ಲ ಎನ್ನುವಂತೆ ತಮ್ಮ ವೃತ್ತಿಯ ಮಹತ್ವವನ್ನು ಸಾರಿ ನುಡಿದಂತೆ ನಡೆದ ಮಹಾನುಭಾವರು ಎಂದರು.

ಜಿಲ್ಲಾ ಮಡಿವಾಳರ ಸಂಘದ ಕಾರ್ಯದರ್ಶಿ ಅಶ್ವತ್ಥ ಪೊಳಲಿ ವೇದಿಕೆಯಲ್ಲಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು. ಸಮಾಜದ ಬಾಂಧವರು, ಸಾರ್ವಜನಿಕರು ಉಪಸ್ಥಿತರಿದ್ದರು.


Spread the love