ಮಣಿಪಾಲ ಆರೋಗ್ಯಕಾರ್ಡ್ 2023ರ ನೋಂದಾವಣೆ ಪ್ರಕ್ರಿಯೆಗೆ ಚಾಲನೆ

Spread the love

ಮಣಿಪಾಲ ಆರೋಗ್ಯಕಾರ್ಡ್ 2023ರ ನೋಂದಾವಣೆ ಪ್ರಕ್ರಿಯೆಗೆ ಚಾಲನೆ

ಮಂಗಳೂರು: “ಈ ವರ್ಷನಮ್ಮಸಂಸ್ಥಾಪಕ ಹಾಗೂ ದಾರ್ಶನಿಕನಾಯಕರಾದ ಡಾ.ಟಿ.ಎಂ.ಎ ಪೈ ಅವರ125ನೇ ಜನ್ಮದಿನಾಚರಣೆಯನ್ನುಆಚರಿಸುತ್ತಿರುವ ಸಂದರ್ಭದಲ್ಲಿಅವರಉದಾತ್ತಕಾರ್ಯವನ್ನು ಸ್ಮರಿಸುವುದು ನಮ್ಮಕರ್ತವ್ಯ ಮತ್ತುಜವಾಬ್ದಾರಿಯಾಗಿದೆ. ಆರೋಗ್ಯಸೇವೆಯನ್ನು ಸಮಾಜಕ್ಕೆ ಸುಲಭವಾಗಿಕೈಗೆಟಕುವಂತೆ ಮಾಡಿದ ಸ್ಪೂರ್ತಿದಾಯಕಹಾಗೂ ಅಪರೂಪದ ನಾಯಕಡಾ. ಟಿ.ಎಂ.ಎ. ಪೈ” ಎಂದುಮಂಗಳೂರಿನ ಕಸ್ತೂರ್ಬಾ ಮೆಡಿಕಲ್‍ಕಾಲೇಜಿನಡೀನ್‍ಡಾ. ಬಿ ಉನ್ನಿಕೃಷ್ಣನ್ ಹೇಳಿದರು.

ಅವರು ನಗರದ ದಿ ಓಷ್ಯನ್ ಪರ್ಲ್‍ನಲ್ಲಿ ಆಯೋಜಿಸಿದ್ದ ಮಣಿಪಾಲ್‍ಆರೋಗ್ಯಕಾರ್ಡ್– 2023ರ ಯೋಜನೆಯ ಬಗ್ಗೆ ಪತ್ರಿಕಾ ಗೋಷ್ಠಿಯಲ್ಲಿಮಾತನಾಡುತ್ತಾ”ಮಣಿಪಾಲ್‍ಆರೋಗ್ಯ ಕಾರ್ಡ್-2023 ನೋಂದಣಿಆರಂಭವಾಗಿದೆÉಎಂದು ಘೋಷಿಸಲು ನನಗೆ ಅಪಾರ ಸಂತೋಷವಾಗುತ್ತಿದೆ. ಗುಣಮಟ್ಟದಆರೋಗ್ಯ ಸೇವೆಯನ್ನು ಸಾರ್ವಜನಿಕರಿಗೆಕೈಗೆಟಕುವಂತೆ ಮಾಡುವಉದ್ದೇಶದಿಂದಮಣಿಪಾಲ್‍ಆರೋಗ್ಯಕಾರ್ಡನ್ನು ಪ್ರಾರಂಭಿಸಲಾಗಿದೆ, ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ, ಯಾರಾದರೂ ಸದಸ್ಯರಾಗಬಹುದು ಮತ್ತು ಪ್ರಯೋಜನಗಳನ್ನು ಪಡೆಯಬಹುದು. ಸಾಮಾಜಿಕಜವಾಬ್ದಾರಿಯ ಭಾಗವಾಗಿ ಮಣಿಪಾಲ ಆರೋಗ್ಯಕಾರ್ಡನ್ನು 2000 ಇಸವಿಯಲ್ಲ್ಲಿ ಪ್ರಾರಂಭಿಸಲಾಯಿತು. ಗುಣಮಟ್ಟದಆರೋಗ್ಯ ಸೇವೆಪ್ರತಿ ವರ್ಗದಜನರಿಗೆರಿಯಾಯಿತಿದರದಲ್ಲಿ ಲಭ್ಯವಾಗಬೇಕುಎಂಬುದುಈ ಯೋಜನೆಯಉದ್ದೇಶವಾಗಿತ್ತು. ಆರಂಭದಲ್ಲಿ, ಈ ಯೋಜನೆಯು ಅವಿಭಜಿತದಕ್ಷಿಣಕನ್ನಡಜಿಲ್ಲೆಯಲ್ಲಿಆರಂಭವಾಗಿತದನಂತರಇತರ ಜಿಲ್ಲೆಗಳಿಗೆ ವಿಸ್ತರಿಸಲಾಯಿತು” ಎಂದು ಹೇಳಿದರು.

ದುರ್ಗಾ ಸಂಜೀವನಿ ಮಣಿಪಾಲ್‍ಆಸ್ಪತ್ರೆ, ಕಟೀಲುಇಲ್ಲಿನ ಮುಖ್ಯ ಆಡಳಿತಾಧಿಕಾರಿಯಾಗಿರುವ ಡಾ.ಶಿವಾನಂದ ಪ್ರಭುಯೋಜನೆಯ ಪ್ರಯೋಜನಗಳನ್ನು ವಿವರಿಸಿ ಮಾತನಾಡುತ್ತಾ“ಈ ಯೋಜನೆಯುಒಂದು ವರ್ಷ ಮತ್ತುಎರಡು ವರ್ಷದಅವಧಿಯನ್ನು ಹೊಂದಿದ್ದು ಈ ಆರೋಗ್ಯಕಾರ್ಡ್ ಹೊಂದಿರುವವರು ಮಣಿಪಾಲ್ ಸಮೂಹ ಆಸ್ಪತ್ರೆಗಳಾದ ಕೆ.ಎಂ.ಸಿ. ಆಸ್ಪತ್ರೆಅತ್ತಾವರ, ಕೆ.ಎಂ.ಸಿ. ಆಸ್ಪತ್ರೆಜ್ಯೋತಿ ವೃತ್ತ, ದುರ್ಗಾ ಸಂಜೀವನಿ ಮಣಿಪಾಲ್‍ಆಸ್ಪತ್ರೆಕಟೀಲು, ಕಸ್ತೂರ್ಬಾಆಸ್ಪತ್ರೆ ಮಣಿಪಾಲ, ಡಾ. ಟಿಎಂಎ ಪೈ ಆಸ್ಪತ್ರೆಉಡುಪಿ, ಡಾ. ಟಿಎಂಎ ಪೈ ರೋಟರಿಆಸ್ಪತ್ರೆ ಕಾರ್ಕಳ, ಹಾಗೂ ಮಣಿಪಾಲ್‍ಆಸ್ಪತ್ರೆ ಗೋವಾಗಳಲ್ಲಿ ರಿಯಾಯಿತಿ ಸೌಲಭ್ಯಗಳನ್ನು ಪಡೆಯಬಹುದು. ಈ ಕಾರ್ಡ್‍ನ ಸೌಲಭ್ಯಗಳು ದಂತಚಿಕಿತ್ಸೆಗೂಅನ್ವಯವಾಗಲಿದ್ದುಕಾರ್ಡುದಾರರು ಮಣಿಪಾಲ್‍ಕಾಲೇಜ್‍ಆಫ್‍ಡೆಂಟಲ್ ಸಾಯನ್ಸಸ್ ಮಂಗಳೂರು ಮತ್ತು ಮಣಿಪಾಲದಲ್ಲಿರಿಯಾಯಿತಿಸೌಲಭ್ಯಗಳನ್ನು ಪಡೆಯಬಹುದು” ಎಂದು ತಿಳಿಸಿದರು.

ಕೆ.ಎಂ.ಸಿ.ಆಸ್ಪತ್ರೆಅತ್ತಾವರದ ಉಪ ವೈದ್ಯಕೀಯಅಧೀಕ್ಷಕರಾದಡಾ. ದೀಪಕ್ ಮಡಿ ಮಣಿಪಾಲ ಆರೋಗ್ಯಕಾರ್ಡ್‍ನಪ್ರಯೋಜನಗಳನ್ನು ವಿವರಿಸುತ್ತಾ, “ಮಣಿಪಾಲ ಆರೋಗ್ಯಕಾರ್ಡ್ ಹೊಂದಿರುವವರುಎಲ್ಲಾತಜ್ಞಅಥವಾ ಸೂಪರ್ ಸ್ಪೆಷಲಿಸ್ಟ್ ವೈದ್ಯರ ಹೊರರೋಗಿ ಸಮಾಲೋಚನೆ ಮೇಲೆ 25% ರಿಂದ 50%ರ ವರೆಗೆರಿಯಾಯಿತಿ, ಪ್ರಯೋಗಾಲಯ ಪರೀಕ್ಷೆಗಳ ಮೇಲೆ 20% ರಿಯಾಯಿತಿ, ರೇಡಿಯಾಲಜಿ ಪರೀಕ್ಷೆಗಳಾದ ಸಿಟಿ. ಎಮ್.ಆರ್.ಐ, ಅಲ್ಟ್ರಾ ಸೌಂಡ್, ಎಕ್ಸ್‍ರೇ ಹಾಗೂ ಇನ್ನಿತರ ಪರೀಕ್ಷೆಗಳ ಮೇಲೆ 20% ರಿಯಾಯಿತಿ, ಆಸ್ಪತ್ರೆಯಔಷಧಾಲಯದಿಂದ ಖರೀದಿಸಿದ ಔಷಧಿಗಳ ಮೇಲೆ 10%ರವರೆಗೆರಿಯಾಯಿತಿಯುಇರುತ್ತದೆ. ಒಳರೋಗಿಯಾಗಿ ದಾಖಲಾದಲ್ಲಿ (ಕನ್ಸ್ಯುಮೇಬಲ್ಸ್ ಮತ್ತು ಪ್ಯಾಕೇಜ್ಗಳನ್ನು ಹೊರತುಪಡಿಸಿ) ಬಿಲ್ಲಿನಲ್ಲಿ 25% ವರೆಗೆರಿಯಾಯಿತಿ ಸಿಗುತ್ತದೆ. ಈ ಯೋಜನೆಗೆ ಸೇರಲು ವಯಸ್ಸಿನ ಮಿತಿಯಿಲ್ಲದಕಾರಣ, ಈ ಯೋಜನೆಯು ಹಿರಿಯ ನಾಗರಿಕರಿಗೆ ವರದಾನವಾಗಲಿದ್ದುಕೈಗೆಟಕುವಿಕೆಯೊಂದಿಗೆಗುಣಮಟ್ಟದಆರೋಗ್ಯವನ್ನು ಪಡೆಯಲು ಸಹಾಯ ಮಾಡಿದೆ.” ಎಂದು ತಿಳಿಸಿದರು.

ಕೆ.ಎಂ.ಸಿ.ಆಸ್ಪತ್ರೆಮಂಗಳೂರಿನ ಮುಖ್ಯ ಆಡಳಿತ ವ್ಯವಸ್ಥಾಪಕರಾದ ಶ್ರೀ ರವಿರಾಜ್‍ಕಾರ್ಡಿನ ಸದಸ್ಯತ್ವ ಶುಲ್ಕದ ಬಗ್ಗೆ ಮಾತನಾಡುತ್ತಾ, “ಒಂದು ವರ್ಷದಯೋಜನೆಯಲ್ಲಿಕಾರ್ಡಿನ ಸದಸ್ಯತ್ವವುಒಬ್ಬರಿಗೆರೂ. 300/ – ಕೌಟಂಬಿಕಯೋಜನೆಅಂದರೆಕಾರ್ಡುದಾರ, ಅವರ ಸಂಗಾತಿಮತ್ತು25 ವರ್ಷದ ಒಳಗಿನ ಮಕ್ಕಳಿಗೆ ರೂ. 600/- ಮತ್ತುಕುಟುಂಬ ಪ್ಲಸ್‍ಯೋಜನೆಅಂದರೆಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳು ಮತ್ತು 4 ಪೆÇೀಷಕರು (ತಂದೆ, ತಾಯಿ, ಅತ್ತೆ ಮತ್ತು ಮಾವ) ರೂ. 750/-.ಎರಡು ವರ್ಷದಯೋಜನೆಯಲ್ಲಿಒಬ್ಬರಿಗೆರೂ. 500/-, ಕುಟುಂಬಕ್ಕೆರೂ. 800/- ಮತ್ತುಕೌಟಂಬಿಕ ಪ್ರಸ್‍ಯೋಜನೆಗೆರೂ. 950/- ಆಗಿರುತ್ತದೆ” ಎಂದು ವಿವರಿಸಿದರು.

“ಕಳೆದ 22 ವರ್ಷಗಳಲ್ಲಿ, ಸಾಮಾಜಿಕ ಕಾಳಜಿಯೊಂದಿಗೆ ನಾವು ಲಕ್ಷಾಂತರಜನರಿಗೆಉತ್ತಮಗುಣಮಟ್ಟದಆರೋಗ್ಯ ಸೇವೆಗಳನ್ನು ರಿಯಾಯಿತಿದರದಲ್ಲಿಒದಗಿಸುತ್ತಿದ್ದೇವೆ ಮತ್ತು ವರ್ಷದಿಂದ ವರ್ಷಕ್ಕೆ ಸದಸ್ಯರ ನೋಂದಣಿ ಹೆಚ್ಚಾಗುತ್ತಿರುವುದು ಮಣಿಪಾಲ ಆರೋಗ್ಯಕಾರ್ಡ್‍ನಜನಪ್ರಿಯತೆಯನ್ನುತೋರಿಸುತ್ತದೆ”Éಎಂದು ಹೇಳಿದರು.

ಆಸ್ಪತ್ರೆಗಳ ರಿಯಾಯಿತಿ ಮಾದರಿಗಳನ್ನು ತಿಳಿಯಲು ಮತ್ತು ಹೆಚ್ಚಿನ ವಿವರಗಳನ್ನು www.manipalhealthcard.com ಗೆ ಲಾಗ್‍ಇನ್‍ಆಗುವುದರ ಮೂಲಕ ತಿಳಿದುಕೊಳ್ಳಬಹುದು.ಸಾರ್ವಜನಿಕರು ಮಣಿಪಾಲ್ ಹೆಲ್ತ್‍ಕಾರ್ಡ್‍ನೊಂದಣಿಯನ್ನು ಕೆಎಂಸಿ ಆಸ್ಪತ್ರೆಅತ್ತಾವರ, ಕೆಎಂಸಿ ಆಸ್ಪತ್ರೆಡಾ.ಬಿ.ಆರ್. ಅಂಬೇಡ್ಕರ್ ವೃತ್ತ ಮತ್ತುದುರ್ಗಾಸಂಜೀವನಿ ಮಣಿಪಾಲ ಆಸ್ಪತ್ರೆಕಟೀಲಿನಲ್ಲಿರುವ ಕೌಂಟರ್‍ಗಳಲ್ಲಿಮತ್ತುದಕ್ಷಿಣಕನ್ನಡಜಿಲ್ಲೆ ಹಾಗೂ ಉತ್ತರ ಕೇರಳದಾದ್ಯಂತ ಇರುವ ನಮ್ಮಅಧಿಕೃತ ಪ್ರತಿನಿಧಿಗಳ ಮೂಲಕ ಮಾಡಿಕೊಳ್ಳಬಹುದು.

ಮಣಿಪಾಲ ಆರೋಗ್ಯಕಾರ್ಡಿನ ಬಗ್ಗೆ ಹಾಗೂ ಜಿಲ್ಲೆಯಾದ್ಯಂತಇರುವ ನಮ್ಮಅಧಿಕೃತ ಪ್ರತಿನಿಧಿಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿದೂರವಾಣಿ 0824-2285214, 7022078002 ಗೆ ಕರೆ ಮಾಡಬಹುದು.


Spread the love