ಮಣಿಪಾಲ: ಜುಗಾರಿ ಆಟದಲ್ಲಿ ನಿರತರಾಗಿದ್ದ 21 ಮಂದಿ ಬಂಧನ – ರೂ. 1.37 ಲಕ್ಷ ನಗದು, 7 ವಾಹನ ವಶಕ್ಕೆ

Spread the love

ಮಣಿಪಾಲ: ಜುಗಾರಿ ಆಟದಲ್ಲಿ ನಿರತರಾಗಿದ್ದ 21 ಮಂದಿ ಬಂಧನ – ರೂ. 1.37 ಲಕ್ಷ ನಗದು, 7 ವಾಹನ ವಶಕ್ಕೆ

ಮಣಿಪಾಲ: ಇಸ್ಪೀಟ್ ಜುಗಾರಿ ಆಟದಲ್ಲಿ ನಿರತರಾಗಿದ್ದ 21 ಮಂದಿಯನ್ನು ಮಣಿಪಾಲ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬಂಧಿತರನ್ನು ಅನಿಲ , ವಿಶ್ವನಾಥ, ದೀಕ್ಷಿತ್, ಜೀವರಾಜ್, ವರುಣ್, ರವಿಚಂದ್ರ ನಾಯ್ಕ್,ದಿನೇಶ, ಗಣೇಶ, ಅನೀಶ, ಸತೀಶ್, ಅನಿಲ್, ಸತೀಶ್, ರಮೇಶ, ಸುಧಾಕರ್, ಹರೀಶ, ನಿತೇಶ್, ಪ್ರಶಾಂತ, ಜ್ಞಾನೇಶ, ಶಿವಶೆಟ್ಟಿ, ಸಲೀಂ, ಕರುಣಾಕರ್ ಎಂದು ಗುರುತಿಸಲಾಗಿದೆ.

ಹೆರ್ಗಾ ಗ್ರಾಮದ ಪರ್ಕಳ ಸಂಧ್ಯಾ ಹೊಟೇಲ್ ಕಟ್ಟಡದ 1 ನೇ ಮಹಡಿಯ ಕೋಣೆಯಲ್ಲಿ ಹಣವನ್ನು ಪಣವನ್ನಾಗಿಟ್ಟು ಕೊಂಡು ಇಸ್ಪೀಟು ಜುಗಾರಿ ಆಟ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ಮಾಡಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಜುಗಾರಿ ಆಟಕ್ಕೆ ಬಳಸಿದ 208 ಇಸ್ಪೀಟ್ ಎಲೆ, ಹಾಗೂ ನಗದು ರೂಪಾಯಿ 1,37,800/- ಮತ್ತು 7 ವಾಹನಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love