ಮಣಿಪಾಲ: ಪಿಜಿಯಲ್ಲಿ ಉಳಿದುಕೊಳ್ಳಲು ಇಷ್ಟಪಡದ ಮೆಕ್ಯಾನಿಕ್ ಡಿಪ್ಲೋಮಾ ವಿದ್ಯಾರ್ಥಿ ಆತ್ಮಹತ್ಯೆ

Spread the love

ಮಣಿಪಾಲ: ಪಿಜಿಯಲ್ಲಿ ಉಳಿದುಕೊಳ್ಳಲು ಇಷ್ಟಪಡದ ಮೆಕ್ಯಾನಿಕ್ ಡಿಪ್ಲೋಮಾ ವಿದ್ಯಾರ್ಥಿ ಆತ್ಮಹತ್ಯೆ

ಮಣಿಪಾಲ: ಪಿಜಿಯಲ್ಲಿ ಉಳಿದುಕೊಳ್ಳಲು ಇಷ್ಟಪಡದ ಮೆಕ್ಯಾನಿಕ್ ಡಿಪ್ಲೋಮಾ ವಿದ್ಯಾರ್ಥಿಯೋರ್ವ ನೇಣಿಗೆ ಶರಣಾಗಿದ್ದಾನೆ ಎನ್ನಲಾದ ಘಟನೆ ಸೋಮವಾರ ಮಣಿಪಾಲದಲ್ಲಿ ನಡೆದಿದೆ.

ಮೃತರನ್ನು ಬೈಂದೂರು ಕಳವಾಡಿಯ ಸುನೀಲ್ ಕುಮಾರ್(18) ಎಂದು ಗುರುತಿಸಲಾಗಿದೆ.

ಇವರು ಮಣಿಪಾಲದ ಈಶ್ವರನಗರದಲ್ಲಿರುವ ಪಾಲಿಟೆಕ್ನಿಕ್‌ನಲ್ಲಿ ಒಂದನೆ ವರ್ಷದ ಮೆಕ್ಯಾನಿಕ್ ಡಿಪ್ಲೋಮಾ ವ್ಯಾಸಂಗ ಮಾಡಿ ಕೊಂಡಿದ್ದರು. ಒಂದು ತಿಂಗಳ ಹಿಂದೆ ಕಾಲೇಜು ಪ್ರಾರಂಭವಾದ ಕಾರಣ ಸುನೀಲ್ ಕುಮಾರ್ ಪಿಜಿಯಲ್ಲಿ ವಾಸವಾಗಿದ್ದರು. ಆದರೆ ಅವರಿಗೆ ಪಿಜಿ ಯಲ್ಲಿ ಉಳಿದುಕೊಳ್ಳಲು ಇಷ್ಟ ಇರಲಿಲ್ಲ ಎನ್ನಲಾಗಿದೆ.

ಮುಂದಿನ ವರ್ಷ ಹಾಸ್ಟೆಲ್ ಸಿಗುತ್ತದೆ, ಅಲ್ಲಿಯವರೆಗೂ ಪಿಜಿಯಲ್ಲಿ ಇರುವಂತೆ ತಂದೆತಾಯಿ ಸಮಾಧಾನಪಡಿಸಿದ್ದರು. ಆದರೆ ಸುನೀಲ್ ಇದೇ ಚಿಂತೆ ಯಿಂದ ಮನನೊಂದು ಪಿಜಿಯ ಕೋಣೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love