ಮಣಿಪಾಲ ಪೊಲೀಸರ ಭಾರಿ ಕಾರ್ಯಾಚರಣೆ – 43 ಗಾಂಜಾ ವ್ಯಸನಿ ವಿದ್ಯಾರ್ಥಿಗಳ ವಿರುದ್ದ ಪ್ರಕರಣ ದಾಖಲು

Spread the love

ಮಣಿಪಾಲ ಪೊಲೀಸರ ಭಾರಿ ಕಾರ್ಯಾಚರಣೆ – 43 ಗಾಂಜಾ ವ್ಯಸನಿ ವಿದ್ಯಾರ್ಥಿಗಳ ವಿರುದ್ದ ಪ್ರಕರಣ ದಾಖಲು

ಉಡುಪಿ: ಶಿಕ್ಷಣ ನಗರ ಮಣಿಪಾಲದಲ್ಲಿ ಪೊಲೀಸರು ಮಾದಕ ದ್ರವ್ಯದ ವಿರುದ್ದ ಕಾರ್ಯಾಚರಣೆಗೆ ಇಳಿದಿದ್ದು ಸಪ್ಟೆಂಬರ್ 27 ರಿಂದ ಅಕ್ಟೋಬರ್ 1 ರ ಅವಧಿಯಲ್ಲಿ ಒಟ್ಟು 43 ವಿದ್ಯಾರ್ಥಿಗಳ ವಿರುದ್ದ ಗಾಂಜಾ ಸೇವನೆ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ ದಾಕಲಾದ ವಿದ್ಯಾರ್ಥಿಗಳನ್ನು ಕೇರಳದ ಕೋಝಿಕ್ಕೂಡು ನಿವಾಸಿ ದಿಲಬರ್ ಶಾಕೀರ್ (22), ನಿತಿನ್ ಪಿ (21), ಪಾಲಕ್ಕಾಸ್ ನಿವಾಸಿ ಶಬೀಬ್ (21), ಕೇರಳದ ಪತ್ತನಾಮಿತ್ತ ನಿವಾಸಿ ಚೆರಿಯನ್ ಅಬ್ರಾಹಾಂ (21), ಕಣ್ನೂರು ನಿವಾಸಿ ಜೊಯೆಲ್ ಜಾನ್ಸನ್ (21), ಮ್ಯಾಥ್ಯು ಕೆ ಬೇಬಿ (21), ಉತ್ತಾರಖಂಡ ನಿವಾಸಿ ಯಶ್ ಶರ್ಮಾ (19), ಮಂಗಳೂರು ನಿವಾಸಿ ಪ್ರಥಮೇಶ್ ಪೈ (20), ಗುಜರಾತ್ ವಡೋದರ ನಿವಾಸಿ ರೋಹನ್ ಕ್ಯಾನಿ (20), ಮಹಾರಾಷ್ಟ್ರ ನಿವಾಸಿ ಯಶ್ ಮಯೂರ್ ದೋಶಿ (20), ಚತ್ತೀಸ್ ಘಡ ನಿವಾಸಿ ಇಶ್ರಿತ್ ತಿಬ್ಡೆವಾಲ್ (20), ಹೈದರಾಬಾದ್ ನಿವಾಸಿ ಸಿದ್ದಿ ಸುಹಾಸ್ ಕೊಮ್ಮುರಿ (20), ಪ್ರಣೀತ್ ನರಪರಾಜು (21), ನಾಗಪುರ ನಿವಾಸಿ ಎಕಾನಶ್ ಅಗರ್ವಾಲ್ (21), ಬಿಹಾರದ ಆದರ್ಶ ಮೋಹನ್ (21), ಮಹಾರಾಷ್ಟ್ರದ ವೇದಾಂತ್ ಶೆಟ್ಟಿ (20), ರಿಶಬ್ಜೋತ್ ಸಿಂಗ್ ಸಂಧು (21), ಪಾಟ್ನಾದ ಶಿವೇಂದ್ರ ಕುಮಾರ್ (20), ಕುಶಾಲ್ ಗುಪ್ತಾ (21), ಉತ್ತರ ಪ್ರದೇಶದ ಪ್ರಾಂಜಾಲ್ ಕುಮಾರ್ (21), ಹೈದರಾಬಾದ್ ನಿವಾಸಿ ನಿಪುಣ್ ಶ್ರೀವಾತ್ಸವ (20), ಜಮ್ಮು ಕಾಶ್ಮೀರ್ ಸಾಹೀಲ್ ಬಶೀರ್ (20), ತೆಲಂಗಾಣದ ಪವನ್ ಪ್ರೀತಮ್ (21), ಕಾಶ್ಮೀರದ ಮುರಾದ್ (22), ದೆಹಲಿಯ ಆರ್ಯನ್ (22), ಜಾರ್ಖಂಡ್ ನ ಆಯುಶ್ ಕುಮಾರ್ (21), ಹರ್ಶ ಕುಮಾರ್ (21), ಬೆಂಗಳೂರು ಆರ್ ಟಿ ನಗರದ ಮೊಹಮ್ಮದ್ ಹಸನ್ ರಝಾನ್ (21), ಕೊಲ್ಕೊತ್ತದ ಯಶ್ ಚಾಹಲ್ (21), ನೊಯ್ಡಾದ ಆಕಾಶ್ ಅಗರ್ವಾಲ್, ಹೈದರಾಬಾದ್ ಅರ್ಮಾನ್ ಗಂಧರ್ವ ಕೊಟ್ಟಾಯಿ ಕುಮಾರ್ (21), ಉತ್ತರಪ್ರದೇಶ ನಿವಾಸಿ ಅನನ್ಯ ಗರ್ಗ್ (21), ಬೆಂಗಳೂರು ನಿವಾಸಿ ಪ್ರಧ್ಯುಮ್ನ, ಬಿಹಾರ್ ನಿವಾಸಿ ಮೊಹ್ಮದ್ ಅಬ್ದುಲ್ಲಾ ವಫಿ (21), ಹರ್ಯಾಣ ನಿವಾಸಿ ಆರ್ಯನ್ (19), ಗುಜರಾತ್ ನಿವಾಸಿ ನಿತ್ಯಮ್ (19), ಬೆಂಗಳೂರಿನ ಧ್ರುವ್ ಮಿಲಿಂದ್ ಪರಬ್ (20), ಕೇರಳದ ಸಚಿನ್ ಎಸ್ ಪೈ (21), ಬೆಂಗಳೂರಿನ ಆಕಾಶ್ ಪಿ (21), ಹೈದರಬಾದ್ ನಿವಾಸಿ ವೆಂಕಟ ಗಣೇಶ್ ಕಸ್ತೂರಿ (21), ಮಂಗಳೂರಿನ ಅಕ್ಷಯ್ (21), ಕೇರಳದ ಕೇವಿನ್ ಪೀಟರ್ (21) ಮತ್ತು ಆಂದ್ರಪ್ರದೇಶದ ಸರ್ಫರಾಜ್ ಅಹ್ಮದ್ (21) ಎಂದು ಗುರುತಿಸಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ್‌ ಎಮ್‌. ಎಚ್‌., ಐಪಿಎಸ್‌ ಇವರ ನಿರ್ದೇಶನದಲ್ಲಿ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ  ಸಿದ್ದಲಿಂಗಪ್ಪ ಎಸ್‌. ಟಿ. ಹಾಗೂ ಪೊಲೀಸ್‌ ಉಪಾಧೀಕ್ಷಕರಾದ   ಸುಧಾಕರ ನಾಯಕ್‌ ಇವರ ಮಾರ್ಗದರ್ಶನದಲ್ಲಿ ಸಪ್ಟೆಂಬರ್ 27 ರಿಂದ ಅಕ್ಟೋಬರ್ 1 ರ ವರಗೆ ಮಣಿಪಾಲ ಹಾಗೂ ಆಸುಪಾಸಿನ ವಿದ್ಯಾರ್ಥಿಗಳ ಮಾದಕ ದ್ರವ್ಯ ಸೇವನೆ ಬಗ್ಗೆ ಮಣಿಪಾಲ ಪೊಲೀಸ್‌ ನಿರೀಕ್ಷಕರಾದ ಮಂಜುನಾಥ, ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ ವಂದಲ್ಲಿ ಹಾಗೂ ಸಿಬ್ಬಂದಿಗಳು ಸಾಮೂಹಿಕ ಕಾರ್ಯಾಚರಣೆಯಲ್ಲಿ ಸುಮಾರು 150 ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಸೇವೆನೆ ಕುರಿತಾಗಿ ಪರೀಕ್ಷೆಗೆ ಒಳಪಡಿಸಲಾಗಿತ್ತು

ಇವುಗಳಲ್ಲಿ ಅನುಮಾನಾಸ್ಪದವಾಗಿರುವ ಸುಮಾರು 75 ವಿದ್ಯಾರ್ಥಿಗಳ ಮಾದರಿಗಳನ್ನು ಫಾರೆನ್ಸಿಕ್‌ ವಿಭಾಗಕ್ಕೆ ತಜ್ಞರ ವರದಿಗಾಗಿ ಸಲ್ಲಿಸಲಾಗಿದ್ದು, ಅವುಗಳಲ್ಲಿ ಸುಮಾರು 43 ವಿದ್ಯಾರ್ಥಿಗಳ ಮಾದರಿಯಲ್ಲಿ ಪಾಸಿಟಿವ್‌ ವರದಿ ಬಂದಿದ್ದು, ಅವರುಗಳ ಮೇಲೆ ಗಾಂಜಾ ಸೇವನೆ ಮಾಡಿರುವ ಅಪರಾಧದ ಬಗ್ಗೆ ಮೊಕದ್ದಮೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love