
ಮಣಿಪಾಲ: ಪೋಕ್ಸೋ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಮಣಿಪಾಲ: ಪೋಕ್ಸೋ ಪ್ರಕರಣದಲ್ಲಿ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ನೇಪಾಳದ ಸುಧುರ್ ಪಶ್ಚಿಮ ರಾಜ್ಯದ ಕಾಂಚನಪುರ ಜಿಲ್ಲೆಯ ನಿವಾಸಿ ಜಿತೇಂದ್ರ ಶಾರ್ಕಿ (26) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿ ಕಳೆದ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಸುಮಾರು 16 ಬಾರಿ ವಾರಂಟ್ ಹಾಗೂ 3 ಬಾರಿ ಅಟ್ಯಾಚ್ ಮೆಂಟ್ ವಾರಂಟ್ ಹೊರಡಿಸಿದೆ. ಸತತ ಒಂದು ವಾರಗಳ ಕಾಲ ಭಾರತ-ನೇಪಾಳ ಗಡಿಯಲ್ಲಿ ಕಾರ್ಯಾಚರಣೆಯನ್ನು ನಡೆಸಿ ಆರೋಪಿ ಜಿತೆಂತ್ರ ಶಾರ್ಕಿಯನ್ನು ಉತ್ತರಾಖಂಡ ರಾಜ್ಯದ ಬನ್ ಬಸಾ ಪೊಲೀಸ್ ಠಾಣಾ ವ್ಯಾಪ್ತಿಯ ಗಡಿಕೋಟ್ ಎಂಬಲ್ಲಿ ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬಂಧನ ಕಾರ್ಯಾಚಣೆಯು ಉಡುಪಿ ಜಿಲ್ಲಾ ಎಸ್ಪಿ ಅಕ್ಷಯ್ ಮಚ್ಚೀಂದ್ರ ಹಾಕೆ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ, ಡಿವೈಎಸ್ಪಿ ದಿನಕರ ಕೆಪಿ, ಮಣಿಪಾಲ ಪೊಲೀಸ್ ಠಾಣಾ ನೀರಿಕ್ಷಕರಾದ ದೇವರಾಜ್ ಟಿವಿ ನಿರ್ದೇಶನದಂತೆ ಮಣಿಪಾಲ ಪಿಎಸ್ ಐ ಅಬ್ದುಲ್ ಖಾದರ್, ಪ್ರೊಬೇಶನರಿ ಪಿಎಸ್ ಐ ನಿಧಿ ಬಿ ಎನ್ ಮತ್ತು ಪ್ರೋಸೆಸ್ ಕರ್ತವ್ಯದ ಹೆಚ್ ಸಿ ಥೋಮ್ಸನ್, ಎಸ್ಪಿ ಕಚೇರಿಯ ದಿನೇಶ್ ಭಾಗಿಯಾಗಿದ್ದರು.