ಮಣಿಪಾಲ: ಬಸ್ಸು, ಸ್ಕೂಟರ್ ಡಿಕ್ಕಿ – ತಂದೆ ಮತ್ತು ಮಗಳು ಗಂಭೀರ ಗಾಯ

Spread the love

ಮಣಿಪಾಲ: ಬಸ್ಸು, ಸ್ಕೂಟರ್ ಡಿಕ್ಕಿ – ತಂದೆ ಮತ್ತು ಮಗಳು ಗಂಭೀರ ಗಾಯ

ಮಣಿಪಾಲ: ಬಸ್ಸು ಮತ್ತು ದ್ವಿಚಕ್ರ ವಾಹನದ ನಡುವೆ ಅಫಘಾತ ಸಂಭವಿಸಿ ತಂದೆ ಮತ್ತು ಮಗಳು ಗಾಯಗೊಂಡ ಘಟನೆ ಮಣಿಪಾಲ ಟೈಗರ್ ಸರ್ಕಲ್ ಬಳಿ ಶನಿವಾರ ಸಂಜೆ ನಡೆದಿದೆ.

ಗಾಯಗೊಂಡವರನ್ನು ಅಂಜಾರು ನಿವಾಸಿ ರಮೇಶ್ ಜಿ ಪ್ರಭು (69) ಮತ್ತು ಅವರ ಮಗಳು ಶ್ರೀದೇವಿ (42) ಎಂದು ಗುರುತಿಸಲಾಗಿದೆ. ಇಬ್ಬರೂ ಕೂಡ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸ್ ಮಾಹಿತಿಗಳ ಪ್ರಕಾರ ಸ್ಕೂಟರ್ ಸವಾರರು ಕೆಎಮ್ ಸಿ ಕ್ವಾಟ್ರಸ್ ನಿಂದ ಮೋರ್ಚರಿ ರಸ್ತೆಯಾಗಿ ಟೈಗರ್ ಸರ್ಕಲ್ ಬೈಪಾಸ್ ಬಳಿ ಬರುವಾಗ ಅದೇ ದಾರಿಯಲ್ಲಿ ಹಿಂದಿನಿಂದ ಬಂದ ಬಸ್ಸು ಟೈಗರ್ ಸರ್ಕಲ್ ಬಳಿ ಯೂಟರ್ನ್ ಮಾಡಿಕೊಂಡು ಉಡುಪಿ ನಿಲ್ದಾಣಕ್ಕೆ ಸಾಗುವ ಸಮಯದಲ್ಲಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದು ಇದರ ಪರಿಣಾಮ ಇಬ್ಬರೂ ರಸ್ತೆಗೆ ಬಿದ್ದಿದ್ದು ಗಂಭೀರ ಗಾಯಗಳಾಗಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಕ್ಕೆ ಮಣಿಪಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love