Home Mangalorean News Kannada News ಮಣಿಪಾಲ: ರಸ್ತೆ ದಾಟುತ್ತಿದ್ದ ಮಹಿಳೆ ಬಸ್ಸಿನಡಿ ಬಿದ್ದು ಮೃತ್ಯು

ಮಣಿಪಾಲ: ರಸ್ತೆ ದಾಟುತ್ತಿದ್ದ ಮಹಿಳೆ ಬಸ್ಸಿನಡಿ ಬಿದ್ದು ಮೃತ್ಯು

Spread the love

ಮಣಿಪಾಲ: ರಸ್ತೆ ದಾಟುತ್ತಿದ್ದ ಮಹಿಳೆ  ಬಸ್ಸಿನಡಿ ಬಿದ್ದು ಮೃತ್ಯು

ಉಡುಪಿ: ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರು ಬಸ್ ನಡಿಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಮಣಿಪಾಲ ಈಶ್ವರನಗರದ ಎಂಐಟಿ ಕಾಲೇಜು ಮುಂಭಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ಸಂಭವಿಸಿದೆ.

ಮೃತರನ್ನು ವಿನೋದ ಸಿಸ್ಟರ್ (65) ಎಂದು ಗುರುತಿಸಲಾಗಿದೆ.

ಅವರು ತನ್ನ ಮಗಳ ಮಕ್ಕಳನ್ನು ಶಾಲಾ ಬಸ್ ನಿಂದ ಇಳಿಸಿ ಮನೆ ಬಿಟ್ಟು ಬಳಿಕ ಉಪ್ಪೂರು ಕಡೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಬಸ್ ನ ಚಕ್ರದಡಿಗೆ ಸಿಲುಕಿದ ಮಹಿಳೆಯ ದೇಹ ಛಿದ್ರ ಛಿದ್ರಗೊಂಡಿದೆ.
ಸ್ಥಳಕ್ಕೆ ಮಣಿಪಾಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


Spread the love

Exit mobile version