ಮಣಿಪಾಲ: ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ ಮೇಲೆ ಪೊಲೀಸರ ದಾಳಿ, ಇಬ್ಬರ ಬಂಧನ

Spread the love

ಮಣಿಪಾಲ: ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ ಮೇಲೆ ಪೊಲೀಸರ ದಾಳಿ, ಇಬ್ಬರ ಬಂಧನ

ಮಣಿಪಾಲ: ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಗೆ ಮಣಿಪಾಲ ಪೊಲೀಸ್ ಇನ್ಸ್ ಪೆಕ್ಟರ್ ದೇವರಾಜ್ ಟಿವಿ ನೇತೃತ್ವದಲ್ಲಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ 5 ಮಂದಿ ಮಹಿಳೆಯರನ್ನು ರಕ್ಷಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಬಂದಿತ ಆರೋಪಿಗಳನ್ನು ಉಚ್ಚಿಲ ನಿವಾಸಿ ಅಬಿದುಲ್ಲಾ ಮತ್ತು ಅಂಬಲಪಾಡಿ ನಿವಾಸಿ ಚಂದ್ರಹಾಸ ಎಂದು ಗುರುತಿಸಲಾಗಿದ್ದು ಪ್ರಮುಖ ಆರೋಪಿ ದಾಳಿ ವೇಳೆ ತಪ್ಪಿಸಿಕೊಂಡಿದ್ದಾನೆ. ರಕ್ಷಿಸಿದ ಮಹಿಳೆಯರು ಬೆಂಗಳೂರು ಮತ್ತು ಮುಂಬೈ ಗೆ ಸೇರಿದವರಾಗಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಮಣಿಪಾಲ ಠಾಣಾ ಇನ್ಸ್ ಪೆಕ್ಟರ್ ದೇವರಾಜ್ ಟಿವಿ ಅವರು ತಮ್ಮ ತಂಡದೊಂದಿಗೆ ಮಣಪಾಲ ವಿದ್ಯಾರತ್ನ ನಗರದಲ್ಲಿನ ಮನೆಯೊಂದರ ಮೇಲೆ ದಾಳಿ ನಡೆಸಿದ್ದು, ಅನೈತಿಕ ಚುಟುವಟಿಕೆ ನಡೆಸಲು ಬಂದ ವ್ಯಕ್ತಿಗಳಿಂದ ಹಣವನ್ನು ಸಂಗ್ರಹಿಸಿ ಕೊಠಡಿಗಳನ್ನು ಒದಗಿಸಿದ್ದ ಅಬಿದುಲ್ಲಾ ಮತ್ತು ಚಂದ್ರಹಾಸ ಅವರನ್ನು ವಶಕ್ಕೆ ಪಡೆದಿದ್ದಾರೆ ಈ ವೇಳೆ ಪ್ರಮುಖ ಆರೋಪಿ ಖಾಲಿದ್ ಪರಾರಿಯಾಗಿದ್ದಾನೆ.

ದಾಳಿಯ ವೇಳೆ 4 ಮೊಬೈಲ್ ಫೋನ್, ರೂ 10000 ನಗದು, ಕಾರು ಮತ್ತು 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ  ಅಕ್ಷಯ್ ಮಚಿಂದ್ರ ಹಾಕೆ (ಐ.ಪಿ.ಎಸ್‌) ರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ  ಸಿದ್ದಲಿಂಗಪ್ಪ ಟಿ, (ಕೆ ಎಸ್ ಪಿ ಎಸ್) ದಿನಕರ ಕೆ.ಪಿ ಡಿ.ವೈ.ಎಸ್ಪಿ ಉಡುಪಿ ರವರ ನಿರ್ದೇಶನದಂತೆ ಬ್ರಹ್ಮಾವರ ಸಿ.ಪಿ.ಐ   ದಿವಾಕರ್‌ ಹಾಗೂ ದೇವರಾಜ ಟಿ.ವಿ ಪೊಲೀಸ್‌ ನಿರೀಕ್ಷಕರು ಮಣಿಪಾಲ ಠಾಣೆ ರವರ ನೇತೃತ್ವದಲ್ಲಿ ಅಬ್ದುಲ್‌ ಖಾದರ್ ಪಿ.ಎಸ್.ಐ ಮಣಿಪಾಲ ಠಾಣೆ , ಹೆಚ್‌ ಸಿ ಸುಕುಮಾರ್‌ ಶೆಟ್ಟಿ, ಹೆಚ್ ಸಿ ಇಮ್ರಾನ್‌, ಹೆಚ್‌ ಸಿ ಸುರೇಶ್‌ ಕುಮಾರ್‌, ಮ.ಹೆಚ್‌ಸಿ ಜ್ಯೋತಿ ನಾಯಕ್, ಪಿ ಸಿ ಅರುಣ, ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ.


Spread the love