ಮಣಿಪುರ ಗಲಭೆ ಪ್ರಕರಣ: ಕೇಂದ್ರ ಸರಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿ – ಮನಪಾ ಸದಸ್ಯ ವಿನಯ್ ರಾಜ್

Spread the love

ಮಣಿಪುರ ಗಲಭೆ ಪ್ರಕರಣ: ಕೇಂದ್ರ ಸರಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿ – ಮನಪಾ ಸದಸ್ಯ ವಿನಯ್ ರಾಜ್

ಮಂಗಳೂರು: ಮಣಿಪುರದಲ್ಲಿ ಜನಾಂಗೀಯ ಗಲಭೆ ಆರಂಭವಾಗಿ ನಾಲ್ಕು ತಿಂಗಳಾದರೂ ಕೂಡ ಅದನ್ನು ನಿಯಂತ್ರಣ ಮಾಡುವ ಕೆಲಸವನ್ನು ಕೇಂದ್ರ ಅಲ್ಲಿನ ರಾಜ್ಯ ಸರಕಾರಗಳು ಮಾಡಿಲ್ಲ ಇದು ಸಂಪೂರ್ಣ ಕಾನೂನು ವ್ಯವಸ್ಥೆ ಪಿಲತೆಗೆ ಸಾಕ್ಷಿ ಎಂದು ಮನಪಾ ಸದಸ್ಯ ಎ.ಸಿ.ವಿನಯ್ ರಾಜ್ ಹೇಳಿದ್ದಾರೆ.

ಶುಕ್ರವಾರ ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಪುರ ಗಲಭೆ ಸರಕಾರ ಪ್ರಾಯೋಜಿತವಾಗಿ ಪೊಲೀಸರ ಸಮ್ಮುಖದಲ್ಲಿ ನಡೆಯುತ್ತಿದೆ. ಇಲ್ಲಿನ ಕಾನೂನು ವ್ಯವಸ್ಥೆಗಳೇ ಕೆಟ್ಟು ಹೋಗಿದೆ. ಪ್ರಧಾನಿ ಮಂತ್ರಿ ಮನಸ್ಸು ಮಾಡಿದ್ದರೆ ಅದನ್ನು ಮೊದಲೇ ನಿಯಂತ್ರಣ ಮಾಡಬಹುದಿತ್ತು. ಅವರು ದೇಶ- ವಿದೇಶ ಸುತ್ತಾಟ, ಕರ್ನಾಟಕದಲ್ಲಿ ಚುನಾವಣಾ ರ್ಯಾಲಿಯಲ್ಲಿಯೇ ತಲ್ಲೀನರಾದರು ಎಂದು ಆರೋಪಿಸಿದರು.

ಅಮೆರಿಕದಲ್ಲಿ ಹೋಗಿ ದೇಶದ ಮಹಿಳೆಯರ ಬಗ್ಗೆ ಭಾಷಣ ಮಾಡುವ ಕೆಲಸವನ್ನು ಮಾತ್ರ ಮಾಡುತ್ತಾ ಹೋದರೂ ಮಣಿಪುರದ ಗಲಭೆ ನಿಯಂತ್ರಣ ಮಾಡುವ ಬದಲು ಅಲ್ಲಿನ ಇಂಟರ್ನೆಟ್, ಸಾಮಾಜಿಕ ಜಾಲತಾಣಗಳಿಗೆ ಕಡಿವಾಣ ಹಾಕುವ ಕೆಲಸವನ್ನು ಮಾಡಿದರು ಎಂದರು.

ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಎಚ್ಚರಿಕೆ ಕೊಟ್ಟಾಗ ಮಾತ್ರ ಪ್ರಧಾನಿ ಮೋದಿ ಮಾತನಾಡಿ ರಾಜ್ಯದ ಮುಖ್ಯಮಂತ್ರಿಗಳಿಗೆ ಮಹಿಳೆಯರ ರಕ್ಷಣೆಯ ಕುರಿತಾದ ಕಾನೂನುಗಳನ್ನು ಸುಭದ್ರ ಮಾಡಿ ಎನ್ನುವ ಮಾತುಗಳನ್ನು ಹೇಳಿದ್ದಾರೆ. ಆದರೆ ಬಿಲ್ಕಿಸ್ ಬಾನು, ಹಾಸ್ ಉಸಾವೋ ಪ್ರಕರಣ, ಬ್ರಿಜ್ ಭೂಷಣ್ ನಂತಹ ಪ್ರಕರಣಗಳು ಕಾಣಿಸಿಕೊಂಡಾಗಲೇ ಮಹಿಳೆಯರ ಮೇಲಿನ ಗೌರವದಿಂದ ಅವರಿಗೆ ರಕ್ಷಣೆ ನೀಡುವ ಕಾರ್ಯವನ್ನು ಮಾಡಬಹುದಿತ್ತು. ಮಣಿಪುರ ಘಟನೆಯನ್ನು ನಿಯಂತ್ರಣ ಮಾಡುವ ಎಲ್ಲ ಸಾಧ್ಯತೆಗಳು ಇತ್ತು ಆದರೆ ಪ್ರಧಾನಿ, ಗೃಹಸಚಿವರು ಇಂತಹ ಕೆಲಸವನ್ನು ಮಾಡೇ ಇಲ್ಲ. ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ ಸೇರಿದಂತೆ ಕೇಂದ್ರದ ಯಾವ ಸಚಿವರು ಕೂಡ ಈ ಕುರಿತು ಮಾತನಾಡುತ್ತಿಲ್ಲ ರಾಷ್ಟ್ರಪತಿ ದೌಪದಿ ಮುರ್ಮು ಕೂಡ ಕೇಂದ್ರವನ್ನು ಕೇಳುವ ಕೆಲಸವನ್ನು ಮಾಡಿಲ್ಲ ಮಾನವ ಆಯೋಗ, ಮಹಿಳಾ ಆಯೋಗಗಳು ಸ್ವಾತಂತ್ರ್ಯವಾದ ಸಂಸ್ಥೆಗಳು ಕೂಡ ಕೇಂದ್ರದ ಮುಲಾಜಿಗೆ ಬಿದ್ದು ಶಕ್ತಿ ಗುಂದಿವೆ ಎಂದು ವಿನಯ್ ರಾಜ್ ಆರೋಪಿಸಿದರು


Spread the love