ಮಣ್ಣಗುಡ್ಡ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ 

Spread the love

ಮಣ್ಣಗುಡ್ಡ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ 

ಮಣ್ಣಗುಡ್ಡ ವಾರ್ಡಿನ ವ್ಯಾಪ್ತಿಯಲ್ಲಿರುವ ಗುಂಡುರಾವ್ ಲೇನ್, ಹರಿದಾಸ್ ಲೇನ್, ಕಾಂತರಾಜ್ ಲೇನ್ ಮತ್ತು ಬರ್ಕೆ ಬ್ರಿಡ್ಜ್ ಪರಿಸರದಲ್ಲಿ  ಕಾಂಗ್ರೆಸ್ ಪಕ್ಷದ ವತಿಯಿಂದ ಬಿರುಸಿನ ಪ್ರಚಾರ ಕಾರ್ಯ ನಡೆಯಿತು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜೆ. ಆರ್. ಲೋಬೊ ರವರು ಮನೆ ಮನೆಗೆ ತೆರಳಿ ವಿಜ್ಞಾಪನೆ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷರು, ಮಾಜಿ ಎಂಎಲ್ ಸಿ ಐವನ್ ಡಿಸೋಜಾ, ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಮಮತಾ ಗಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ,,ಪಕ್ಷದ ಪ್ರಮುಖರಾದ ವಾರ್ಡ್ ಅಧ್ಯಕ್ಷ ನಿರಂಜನ್, ಸುರೇಖಾ ನಿರಂಜನ್,ಪದ್ಮನಾಭ ಅಮೀನ್,ರಮಾನಂದ ಪೂಜಾರಿ, ಸಮರ್ಥ ಭಟ್, ಯೋಗೇಶ್ ನಾಯಕ, ಪ್ರೇಮ್ ನಾಥ್ ಬಲ್ಲಾಳ್ ಭಾಗ್,ರವೀಂದ್ರ, ವಿನೋದ್, ಸಂತೋಷ, ರಶ್ಮಿ, ಚಂದ್ರಕಲಾ, ಶಾನ್ ಡಿಸೋಜಾ,ರೋಷನ್, ಭೂಷಣ್, ಪೂರ್ಣಿಮ, ಲಕ್ಷ್ಮೀ ನಾರಾಯಣ, ರೋಹನ್,ಐವನ್ ಲೋಬೊ, ಜಯರಾಜ್ ಮೊದಲಾದವರು ಉಪಸ್ಥಿತರಿದ್ದರು.


Spread the love