
ಮಣ್ಣಿನಡಿ ಸಿಲುಕಿ ಕಾರ್ಮಿಕ ಮೃತ್ಯು – ಗುತ್ತಿಗೆದಾರರ ವಿರುದ್ದ ಪ್ರಕರಣ ದಾಖಲು
ಸುರತ್ಕಲ್ ಬಳಿಯ ಚೇಳ್ಯಾರು ಎಂಬಲ್ಲಿ ರೈಲು ಹಳಿ ಬದಿ ಗುಡ್ಡ ಕುಸಿದು ಉತ್ತರ ಕರ್ನಾಟಕ ಮೂಲದ ಕಾರ್ಮಿಕ ಓಬಳೇಶಪ್ಪ ಎಂಬವರು ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ.
ಈ ಹಿಂದೆ ರೈಲು ಹಳಿ ಕುಸಿತವಾದ ಬದಿಯಲ್ಲೇ ಕಂಬಿಯನ್ನು ನೇರ ವಾಡುವ ಕೆಲಸ ಮಾಡುತ್ತಿದ್ದರು. ರೈಲು ಹಳಿಯ ಬಳಿ ಕೆಳಭಾಗದಲ್ಲಿ ಅಗೆಯುತ್ತಿದ್ದಾಗ ಮೇಲ್ಬಾಗದ ಹಳಿಯಲ್ಲಿ ರೈಲು ವೇಗವಾಗಿ ಬಂದಿದ್ದು ಈ ವೇಳೆ ಭೂಮಿ ಕಂಪಿಸಿ ಗುಡ್ಡ ಕುಸಿದಿದ್ದು ಇದರಿಂದ ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದರು.
ಓಬಳೇಶಪ್ಪ, ಗೋವಿಂದಪ್ಪ ತಿಮ್ಮಪ್ಪ, ಈರಣ್ಣ, ಸಂಜೀವ ಮತ್ತು ರೇಖಾ ಮಣ್ಣಿನಡಿ ಸಿಲುಕಿ ಗಾಯಗೊಂಡಿದ್ದಾರೆ. ಓಬಳೇಶಪ್ಪ ಮತ್ತು ಗೋವಿಂದಪ್ಪ ಮೇಳೆ ಭಾರಿ ಪ್ರಮಾಣದ ಮಣ್ಣು ಬಿದ್ದು ಉಸಿರು ಕಟ್ಟಿದ್ದು ಕೂಡಲೇ ಅವರನ್ನು ಮಣ್ಣಿನಿಂದ ತೆಗೆದು ಹತ್ತಿರದ ಆಸ್ಪತ್ರೆಗೆ ಒಯ್ಯಲಾಗಿದ್ದು, ಓಬಳೇಶಪ್ಪ ಮೃತಪಟ್ಟಿದ್ದಾರೆ.
ಗುತ್ತಿಗೆದಾರರಾದ ಮೋಹನ್ ಹಾಗೂ ನಾಗರಾಜ್ ಅವರು ಕಾರ್ಮಿಕರನ್ನು ನಿಯೋಜನೆ ಮಾಡಿದ್ದರು ಎಂದು ಕಾರ್ಮಿಕ ಕಿಟ್ಟರಾಜ ಎಂಬವರು ಸುರತ್ಕಲ್ ಠಾಣೆಗೆ ದೂರು ನೀಡಿದ್ದಾರೆ.