ಮಣ್ಣಿನ ಸಂರಕ್ಷಣೆಗಾಗಿ ಜಾಗೃತಿ ಜಾಥಾ

Spread the love

ಮಣ್ಣಿನ ಸಂರಕ್ಷಣೆಗಾಗಿ ಜಾಗೃತಿ ಜಾಥಾ

ಇಶಾ ಫೌಂಡೇಶನ್ ವತಿಯಿಂದ ಮಣ್ಣು ಉಳಿಸಿ ಅಭಿಯಾನದ ಪ್ರಯುಕ್ತ ಕೋಲ್ಕತ್ತಾ ನಗರದ 17ನೇ ವಯಸ್ಸಿನ ಯುವಕ ಸಾಹಿಲ್ ಝಾ, ದೇಶಾದ್ಯಂತ ಸೈಕಲ್ ಜಾಥಾ ನಡೆಸುವ ಉದ್ದೇಶದಿಂದ ಮಂಗಳೂರಿಗೆ ದಿನಾಂಕ 15.9.2022ರಂದು ಆಗಮಿಸಿದ್ದು, ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದ ಬಳಿ ಬಂದಾಗ ಮಾಜಿ ಶಾಸಕ ಜೆ. ಆರ್. ಲೋಬೊ ಮತ್ತು ಕಾಂಗ್ರೆಸ್ ನಾಯಕರು ಅವನನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸಾಹಿಲ್ ಝಾ ಮಾತನಾಡುತ್ತ, ಮಣ್ಣಿನ ಸಂರಕ್ಷಣೆಗಾಗಿ ನಾನು ಕಳೆದ ಮೇ ತಿಂಗಳಿಂದ ಜಾಥಾ ಆರಂಭಿಸಿದ್ದೇನೆ. ಈ ಜಾಥಾ ಎರಡು ವರ್ಷಗಳ ಕಾಲ ಇರಲಿದ್ದು, ಸುಮಾರು 25,000ಕಿಲೋಮೀಟರ್ ನಷ್ಟು ಹಮ್ಮಿಕೊಳ್ಳಲು ನಿರ್ಧರಿಸಿದ್ದೇನೆ. ಮಣ್ಣು ಅರೋಗ್ಯವಾಗಿದ್ದರೆ ನಾವೆಲ್ಲರೂ ಅರೋಗ್ಯವಾಗಿರಬಹುದು. ಮಣ್ಣಿನಲ್ಲಿ ಉತ್ಪತ್ತಿಯಾಗುವ ಆಹಾರ ಉತ್ಪನ್ನಗಳನ್ನು ತಿಂದು ಬದುಕುವ ಎಲ್ಲರೂ ಮಣ್ಣಿನ ಸಂರಕ್ಷಣೆಗೆ ನಿಲ್ಲಬಹುದು. ಈಗಾಗಲೇ ಜಾರ್ಕಂಡ್, ಮಧ್ಯಪ್ರದೇಶ, ಒರಿಸ್ಸಾ, ತೆಲಂಗಾಣ, ತಮಿಳು ನಾಡು, ಅಂದ್ರ ಪ್ರದೇಶ, ಕೇರಳ ರಾಜ್ಯಗಳನ್ನು ಸಂಚರಿಸಿ ಮಂಗಳೂರಿಗೆ ಆಗಮಿಸಿದ್ದೇನೆ. ದಾರಿಯುದ್ಧಕ್ಕೂ ಅನೇಕ ಶಾಲೆ, ಕಾಲೇಜುಗಳನ್ನು,ಎನ್ ಜಿ ಓ ಗಳನ್ನು, ರಾಜಕೀಯ ನಾಯಕರನ್ನು ಭೇಟಿ ಮಾಡಿದ್ದೇನೆ ಎಂದರು.
ಮಾಜಿ ಶಾಸಕ ಜೆ. ಆರ್. ಲೋಬೊ ಈ ಸಂದರ್ಭದಲ್ಲಿ, ಕೇವಲ 17ನೇ ವಯಸಿನಲ್ಲಿ ಸಾಹಿಲ್ ಝಾ ರವರ ಸಾಧನೆಯನ್ನು ಕೊಂಡಾಡಿ, ಮಣ್ಣಿನ ಸಂರಕ್ಷಣೆಗಾಗಿ ನಡೆಸುವ ಜಾಥಾ ಯಶಸ್ವೀಯಾಗಲಿ, ಅವರ ಧೈರ್ಯ, ಸ್ಟೈರ್ಯ, ಮಣ್ಣಿನ ಬಗ್ಗೆ ಇರುವಂತಹ ಅಭಿರುಚಿ, ಕಾಳಜಿಯ ಬಗ್ಗೆ ಮಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ಸಾಹುಲ್ ಹಮೀದ್, ಲಾರೆನ್ಸ್ ಡಿಸೋಜಾ, ಅಬ್ದುಲ್ ಸಲಿಂ, ಟಿ. ಕೆ. ಸುಧೀರ್, ಶಬ್ಬೀರ್ ಎಸ್, ಉದಯ್ ಕುಂದರ್, ಭುವನ್ ಕರ್ಕೇರ, ಶಾಂತಲಾ ಗಟ್ಟಿ, ಚಂದ್ರಕಲಾ ಜೋಗಿ, ಶಶಿಕಲಾ ಪದ್ಮನಾಭ, ನಿತ್ಯಾನಂದ ಶೆಟ್ಟಿ, ಆಸೀಫ್ ಬೆಂಗ್ರೆ, ಅಶ್ರಫ್ ಅಬೂಬಕರ್, ರೋಬಿನ್ ಪ್ರೀತಮ್, ಅಲ್ವಿನ್ ಡಿಸೋಜಾ, ನೆಲ್ಸನ್ ಮೊಂತೇರೊ, ಫಯಾಜ್ ಅಮ್ಮೆಮಾರ್, ಶಾನ್ ಡಿಸೋಜಾ, ಅಶ್ವಿನ್ ಪೂಜಾರಿ, ಕಲಂದರ್ ಮೊದಲಾದವರು ಉಪಸ್ಥಿತರಿದ್ದರು.
ಜಾಥಾ ಸಂಯೋಜಕರು-ದಿನಕರ್ ಪೂಜಾರಿ -9632095189

Spread the love

Leave a Reply

Please enter your comment!
Please enter your name here