ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಬಿ.ಎಲ್.ಎ ಗಳ ನೇಮಕಾತಿ ಮತ್ತು ಅವರ ಕರ್ತವ್ಯ, ನಿರ್ವಹಣೆ ಕುರಿತು ಸಭೆ 

Spread the love

ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಬಿ.ಎಲ್.ಎ ಗಳ ನೇಮಕಾತಿ ಮತ್ತು ಅವರ ಕರ್ತವ್ಯ, ನಿರ್ವಹಣೆ ಕುರಿತು ಸಭೆ 

ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಬಿ.ಎಲ್.ಎ ಗಳ ನೇಮಕಾತಿ ಮತ್ತು ಅವರ ಕರ್ತವ್ಯ, ನಿರ್ವಹಣೆ ಕುರಿತು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ, ಬ್ಲಾಕ್ ಉಸ್ತುವಾರಿಗಳ ಸಭೆ ಸೋಮವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಉಪಾಧ್ಯಕ್ಷ, ದ.ಕ. ಜಿಲ್ಲಾ ಮತದಾರ ಪರಿಷ್ಕರಣಾ ಕೆಪಿಸಿಸಿ ಉಸ್ತುವಾರಿ ಮಂಜುನಾಥ ಭಂಡಾರಿ, ಮತದಾರರ ಪಟ್ಟಿಯ ಪರಿಷ್ಕರಣೆಯು ಅತ್ಯಂತ ಮಹತ್ವವಾಗಿದ್ದು, ಹೊಸದಾಗಿ ಮತದಾರರನ್ನು ಸೇರಿಸಲು, ಕೈಬಿಟ್ಟಿರುವ ಹೆಸರುಗಳನ್ನು ಪತ್ತೆ ಹಚ್ಚಿ ಸೇರಿಸುವುದು, ಮತದಾರರ ವಿವರಗಳ ಪರಿಶೀಲನೆ ಮತ್ತು ದೃಢೀಕರಣ, ಮೃತ ವ್ಯಕ್ತಿಗಳನ್ನು ಗುರುತಿಸುವುದು, ಶಾಶ್ವತವಾಗಿ ಸ್ಥಳಾಂತರಗೊಂಡಿರುವ ಮತ್ತು ಪುನರಾವರ್ತನೆಯಾದ, ಹಾಲಿ ಇರುವ ಮತದಾರರ ವಿವರಗಳನ್ನು ಪರಿಶೀಲಿಸುವುದು, ಸೇರ್ಪಡೆಗೆ ಅರ್ಹರಾದವರನ್ನು ಗುರುತಿಸುವ ಕಾರ್ಯದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಬಿ.ಎಲ್.ಎಗಳು ಮುತುವರ್ಜಿ ವಹಿಸಿ ಕ್ರಮವಹಿಸಬೇಕು ಎಂದು ಸೂಚಿಸಿದರು.

ಕಾಂಗ್ರೆಸ್ ಮತ ಹೆಚ್ಚಿರುವ ಪ್ರದೇಶದಲ್ಲಿ ಮತದಾರರ ಹೆಸರುಗಳನ್ನು ಸಾರಾಸಗಟವಾಗಿ ತೆಗೆದು ಹಾಕುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ನಿಟ್ಟಿನಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಪ್ರತಿಯೊಂದು ಬೂತ್ ಗಳಲ್ಲಿ ಪಕ್ಷದ ಬಿಎಲ್ ಎಗಳನ್ನು ನೇಮಿಸಲು ಕ್ರಮಕೈಗೊಳ್ಳಬೇಕು. ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ ಕೆಪಿಸಿಸಿ ಅಧ್ಯಕ್ಷರಿಂದ ಅಧಿಕೃತಗೊಂಡವರಿಂದ ಪ್ರಸ್ತಾಪಿಸಲ್ಪಟ್ಟು ನೇಮಕಗೊಂಡ ಬೂತ್ ಲೆವೆಲ್ ಏಜೆಂಟರುಗಳು ತಮ್ಮ ತಮ್ಮ ಬೂತ್ ಸಮಿತಿಯ ಸದಸ್ಯರುಗಳು ಮತ್ತು ಸಹ ಕಾರ್ಯಕರ್ತರೊಂದಿಗೆ ಪ್ರತಿಯೊಂದು ವಿಧಾನ ಸಭಾ ಕ್ಷೇತ್ರದ ಬಿ.ಎಲ್.ಎಗಳ ನಿರ್ವಹಣೆಗಾಗಿ ನೇಮಿಸಲ್ಪಟ್ಟ ಸಮಿತಿಯ ನಿರ್ದೇಶನದಲ್ಲಿ ಅವರಿಗೆ ವಹಿಸಲಾಗಿರುವ ಬೂತ್ ವ್ಯಾಪ್ತಿಯ ಪ್ರದೇಶಲ್ಲಿ ಸಂಚರಿಸಿ ಮತದಾರರ ನೋಂದಾವಣೆಯ ವಿಚಾರದಲ್ಲಿ ಆಗಿರುವ ಲೋಪಗಳ ಬಗ್ಗೆ ಬರುವ ದೂರುಗಳನ್ನು ಸಂಗ್ರಹಿಸಿ ಅವುಗಳನ್ನು ಸರಿಪಡಿಸಲು ಬಿ.ಎಲ್.ಒ ಅಥವಾ ಇ.ಆರ್.ಒ ಗಳಿಗೆ ಸಲ್ಲಿಸಿ ಆ ಬಗ್ಗೆ ಅವರು ಸೂಕ್ತ ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಮಾಜಿ ಶಾಸಕರಾದ ಮೊಯ್ದೀನ್ ಬಾವ, ಜೆ.ಆರ್.ಲೋಬೊ, ಐವನ್ ಡಿಸೋಜಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಕೆಪಿಸಿಸಿ ಸದಸ್ಯರಾದ ಎಂ.ಎಸ್.ಮೊಹಮ್ಮದ್, ಎಸ್.ಅಪ್ಪಿ, ಬ್ಲಾಕ್ ಅಧ್ಯಕ್ಷರಾದ ಸದಾಶಿವ್ ಉಳ್ಳಾಲ್, ಎಂ.ಬಿ.ವಿಶ್ವನಾಥ ರೈ, ಅಬ್ದುಲ್ ಸಲೀಂ.ಜೆ, ಪ್ರಕಾಶ್ ಸಾಲ್ಯಾನ್, ಸುಧೀರ್ ಕುಮಾರ್ ಶೆಟ್ಟಿ ಕಡಬ, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷರಾದ ಲಾರೆನ್ಸ್ ಡಿಸೋಜ, ಶುಭಾಷ್ ಚಂದ್ರ ಶೆಟ್ಟಿ ಕೊಲ್ನಾಡು, ಅಬ್ಬಾಸ್ ಅಲಿ, ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ನೀರಜ್ ಚಂದ್ರಪಾಲ್, ಶುಭೋದಯ ಆಳ್ವ ಮತ್ತಿತರರು ಉಪಸ್ಥಿತರಿದ್ದರು.


Spread the love