
ಮತಾಂತರ ನಿಷೇಧ ಕಾಯ್ದೆಯ ಮೂಲಕ ಧಾರ್ಮಿಕ ಸ್ವಾತಂತ್ರ್ಯ ಕಿತ್ತುಕೊಂಡ ಸರಕಾರ – ಪ್ರಶಾಂತ್ ಜತ್ತನ್ನ
ಉಡುಪಿ: ದೇಶದಲ್ಲಿ ರಾಜ್ಯದಲ್ಲಿ ಈಗಾಗಲೇ ಸಂವಿಧಾನದ ಪ್ರಕಾರ ಧಾರ್ಮಿಕ ಸ್ವಾತಂತ್ರ್ಯವನ್ನು ಎಲ್ಲಾ ಧರ್ಮದವರಿಗೆ ಏಕರೀತಿಯಲ್ಲಿ ಕೊಟ್ಟಿರುತ್ತದೆ. ಯಾರು ಬೇಕಾದರೂ ತಾನು ನಂಬಿದ್ದನ್ನು ಜೀವನದಲ್ಲಿ ಅಳವಡಿಸಬಹುದು ಮತ್ತು ಅದನ್ನು ಪ್ರಚಾರ ಮಾಡಬಹುದು ಇದು ಎಲ್ಲರಿಗೂ ಇರುವಂತ ಧಾರ್ಮಿಕ ಸ್ವತಂತ್ರ ಆದರೆ ಕರ್ನಾಟಕ ಸರಕಾರ ಕರ್ನಾಟಕ ಧಾರ್ಮಿಕ ಸ್ವಾತಂತ್ರ ಹಕ್ಕು ಸಂರಕ್ಷಣಾ ವಿಧೇಯಕ ಎಂದು ತಲೆಬರಹ ಕೊಟ್ಟು ಧಾರ್ಮಿಕ ಸ್ವಾತಂತ್ರ್ಯವನ್ನು ಅಲ್ಪಸಂಖ್ಯಾತರಿಂದ ಕಿತ್ತುಹಾಕುವ, ಅಂದರೆ ತಮ್ಮ ಹಬ್ಬಗಳನ್ನು ಕೂಡ ಆಚರಣೆ ಮೊಟಕುಗೊಳಿಸುವ ರೀತಿಯಲ್ಲಿ ಈ ಕಾಯ್ದೆ ತಂದಿದ್ದಾರೆ ಎಂದು ಭಾರತೀಯ ಕ್ರೈಸ್ತ ಒಕ್ಕೂಟ ರಾಜ್ಯಾಧ್ಯಕ್ಷ ಪ್ರಶಾಂತ್ ಜತ್ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಸೋಮವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇಂದು ಮನೆಯಲ್ಲಿ ಕ್ರಿಸ್ಮಸ್ ಆಚರಣೆ ಮಾಡಬೇಕಾದರೂ ಹೈಕೋರ್ಟ್ ಇಂದ ಅನುಮತಿ ಪಡೆದುಕೊಳ್ಳುವ ವಾತಾವರಣ ಸೃಷ್ಟಿಯಾಗಿದೆ. ಕ್ರೈಸ್ತರ ಆಡಳಿತದಲ್ಲಿ ನಡೆಸುವ ಕಾನ್ವೆಂಟ್ ಸ್ಕೂಲ್ ಕಾಲೇಜಿನಲ್ಲಿ ಕ್ರಿಸ್ಮಸ್ ಆಚರಣೆ ಮಾಡಿದರೆ ಅಲ್ಲಿ ಬಂದು ದಾಂದಲೆ ಮಾಡಿ ಅಲ್ಲಿಯ ಸಿಸ್ಟರ್ಸ್ ಅನ್ನು ಅಧ್ಯಾಪಕಿಯರನ್ನು ಬೆದರಿಸುವುದು, ಪುಂಡಾಟಿಕೆ ಮಾಡುವುದು ನಮ್ಮ ದೇವರ ಮೂರ್ತಿಗಳನ್ನು ಇಟ್ಟು ಪೂಜೆ ಮಾಡಬೇಕು ಎಂಬುದಾಗಿ ಒತ್ತಾಯ ಮಾಡುವುದು, ಇಂಥವರ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ತೆಗೆದುಕೊಳ್ಳದೇ ಇರುವುದು ಇದೆಲ್ಲಾ ನೋಡುವಾಗ ಈ ಕಾಯ್ದೆ ಬೇರೆ ಸಂಘಟನೆಯವರಿಗೆ ಪರವಾನಿಗೆ ಕೊಟ್ಟಂತಿದೆ.
ಈ ಕಾಯ್ದೆಯು ಮೇಲ್ನೋಟಕ್ಕೆ ಮತಾಂತರ ಎನ್ನುವಂತದ್ದು ದೊಡ್ಡ ಕ್ರಿಮಿನಲ್ ಅಪರಾಧ ಎಂದು ಬಿಂಬಿಸಿ ತಾನು ನಂಬಿದ್ದನ್ನು ಇತರರಿಗೆ ಹೇಳದಂತೆ ಭಯ ಹುಟ್ಟಿಸುವುದು, ಬಡವರಿಗೆ ಅಶಕ್ತರಿಗೆ ಸಹಾಯ ಅಥವಾ ಉಚಿತ ಶಿಕ್ಷಣ ಕೊಟ್ಟಲ್ಲಿ ಇದು ಮತಾಂತರ ಎಂದು ಬಿಂಬಿಸುವ ಕಾಯ್ದೆ. ಮತಾಂತರ ಆದ ವ್ಯಕ್ತಿ ಅವನ ಬಗ್ಗೆ ದೂರು ಕೊಡುವವರು ಸಹವರ್ತಿ ಅಥವಾ ಸಹೋದ್ಯೋಗಿ ಇತರ ಯಾರು ಬೇಕಾದರೂ ದೂರು ದಾಖಲಿಸಬಹುದು. ಇಲ್ಲಿ ಈ ಕಾಯ್ದೆ ದುರುಪಯೋಗ ಆಗಬಹದು ಇದು ಕೂಡ ಸಂವಿಧಾನಕ್ಕೆ ವಿರುದ್ಧವಾದದ್ದು. ಸರಕಾರದ ಆಡಳಿತ ಪಕ್ಷದಲ್ಲಿರುವ ಶಾಸಕರು ಸಚಿವರು ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ನೀಡುವ ಹೇಳಿಕೆಯನ್ನು ತಕ್ಷಣ ನಿಲ್ಲಿಸಬೇಕು.
ಇತ್ತೀಚೆಗೆ ಶ್ರೀ ತೇಜಸ್ವಿ ಸೂರ್ಯ ಇವರು ಉಡುಪಿಗೆ ಬಂದಾಗ ಕ್ರೈಸ್ತರನ್ನು ಮುಸಲ್ಮಾನರನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡಬೇಕು. ಅದಕ್ಕೆ ವಾರ್ಷಿಕ ಯೋಜನೆಗಳನ್ನು ಹಾಕಬೇಕು ಎಂದು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಹೇಳಿಕೆಯನ್ನು ನಿಲ್ಲಿಸಬೇಕು. ಹಿಂದೆ ಹೇಳಿದಂತೆ ನಾವು ಬಲವಂತದ ಆಮಿಷದ ಮತಾಂತರವನ್ನು ಈಗಲೂ ವಿರೋಧಿಸುತ್ತೇವೆ. ಇದು ನಮ್ಮ ಧರ್ಮ ಗ್ರಂಥವಾಗಿರುವ ಬೈಬಲ್ ಕೂಡ ಒಪ್ಪುವುದಿಲ್ಲ. ಈ ಎಲ್ಲಾ ವಿಚಾರಗಳು ನೋಡುವಾಗ ಈ ಕಾಯ್ದೆ ಕೆಲವೊಂದು ಸಂಘಟನೆಗಳಿಗೆ ದಾಳಿ ಮಾಡಲು ಕಾನೂನು ಕೈಗೆತ್ತಿಕೊಳ್ಳಲು ಲೈಸೆನ್ಸ್ ಕೊಟ್ಟಂತಿದೆ. ಅದರಿಂದ ಈಗಲಾದರೂ ಸರಕಾರ ಎಚ್ಚೆತ್ತುಕೊಂಡು ಈ ಕಾಯ್ದೆಯನ್ನು ಕೈಬಿಡಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕ್ರೈಸ್ತ ಸಂಘ ಸಂಸ್ಥೆಗಳ ಅಂತರಾಷ್ಟ್ರೀಯ ಒಕ್ಕೂಟ ಇದರ ಜಿಲ್ಲಾಧ್ಯಕ್ಷರಾದ ಡಾ. ನೇರಿ ಕರ್ನೆಲಿಯೊ, ಕಾನೂನು ಸಲಹೆಗಾರರಾದ ನೊಯೇಲ್ ಕರ್ಕಡ, ರಾಜ್ಯ ಸಂಚಾಲಕ ಗ್ಲ್ಯಾಡ್ಸನ್ ಕರ್ಕಡ ಉಪಸ್ಥಿತರಿದ್ದರು.
neevu kithukollabahudu adare sarakara yenu madabaradu