
ಮದರಸಗಳಲ್ಲಿ ಈಗಾಗಲೇ ರಾಷ್ಟ್ರಗೀತೆ ಇದ್ದು, ಇದಕ್ಕಾಗಿ ಯಾರೂ ಅಭಿಯಾನ ಮಾಡಬೇಕಾಗಿಲ್ಲ – ಶಾಫಿ ಸ-ಅದಿ
ಉಡುಪಿ: ಬೆಳಗ್ಗಿನ ಪ್ರಾರ್ಥನೆ ಬಗ್ಗೆ ವಕ್ಫ್ ಬೋರ್ಡ್ ನಿರ್ಧಾರ ಮಾಡಲ್ಲ ಆಜಾನ್ ಷರಿಯತ್ ನ ವಿಚಾರ ಉಲಮಾಗಳು, ಧಾರ್ಮಿಕ ಮುಖಂಡರು ಅಭಿಪ್ರಾಯ ಹೇಳಬೇಕು. ಬೆಂಗಳೂರಲ್ಲಿ ಒಗ್ಗಟ್ಟಿನ ತೀರ್ಮಾನ ತೆಗೆದುಕೊಂಡಿದ್ದಾರೆ ಅದರಂತೆ ಕರಾವಳಿ ಭಾಗದ ಉಲಮಾಗಳು ಸಭೆ ಸೇರಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಶಾಫಿ ಸ-ಅದಿ ಎಂದು ಹೇಳಿದರು.
ಅವರು ಭಾನುವಾರ ಉಡುಪಿ ಪ್ರವಾಸಿ ಬಂಗ್ಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಲೌಡ್ ಸ್ಪೀಕರ್ ಬಗ್ಗೆ ಸುಪ್ರೀಂ ಕೋರ್ಟ್ ಆದೇಶದಲ್ಲಿ ಇದ್ದು, ಎಲ್ಲಾ ಮಸೀದಿಗಳಿಗೆ ಆದೇಶ ಕಳುಹಿಸಿದ್ದೇವೆ. ಇನ್ನೆರಡು ದಿನದಲ್ಲಿ ಕರಾವಳಿ ಭಾಗದ ಉಲಮಾಗಳ ಸಭೆ ನಡೆಯಲಿದೆ. ಭಾರತದ ಮುಸಲ್ಮಾನರು ಕೋರ್ಟ್ ತೀರ್ಪು ಗರಿಷ್ಠ ಪಾಲನೆ ಮಾಡುತ್ತಾರೆ ನಮ್ಮಿಂದ ಯಾವುದೇ ಗೊಂದಲಗಳು ಆಗದ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.
ಕರ್ನಾಟಕದ ಮದರಸಾದಲ್ಲಿ ರಾಷ್ಟ್ರಗೀತೆಗೆ ಹಿಂದೂ ಸಂಘಟನೆಗಳ ಒತ್ತಾಯ ಕುರಿತು ಪ್ರತಿಕ್ರಿಯಿಸಿದ ಅವರು ರಾಜ್ಯದ 2000 ಮದರಸದಲ್ಲಿ ರಾಷ್ಟ್ರಗೀತೆಯನ್ನು ಸಿಲೆಬಸ್ ನಲ್ಲಿ ಅಳವಡಿಸಿದ್ದೇವೆ. ವಕ್ಫ್ ಅಧೀನದಲ್ಲಿ 1900 ಮದರಸಗಳಿದ್ದು ಅಲ್ಲಿ ರಾಷ್ಟ್ರಗೀತೆ ಅಳವಡಿಸಲು ಕ್ರಮಗಳನ್ನು ಕೈಗೊಳ್ಳುತ್ತೇವೆ. ಈಗಾಗಲೇ ರಾಷ್ಟ್ರಗೀತೆಯನ್ನು ಹೇಳಲಾಗುತ್ತಿದೆ ಇನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರುತ್ತೇವೆ.
ರಾಷ್ಟ್ರಗೀತೆ ನಮಗಾಗಿಯೇ ಇದೆ ರಾಷ್ಟ್ರಗೀತೆ ಗಿಂತ ದೊಡ್ಡದು ಯಾವುದು ಇಲ್ಲ ನೀನು ಜನ್ಮಪಡೆದ ರಾಷ್ಟ್ರವನ್ನು ಪ್ರೀತಿಸು ಎಂದು ಇಸ್ಲಾಮ್ ಹೇಳುತ್ತದೆ ಎಲ್ಲಾ ಮುಸಲ್ಮಾನ ಮಕ್ಕಳು ರಾಷ್ಟ್ರಗೀತೆಯನ್ನು ಕಡ್ಡಾಯ ಹಾಡಲೇಬೇಕು ಮತ್ತು ಕಡ್ಡಾಯವಾಗಿ ಇದನ್ನು ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ. ವಕ್ಫ್ ಮಂಡಳಿಯ ಸಭೆ ಮೇ 25ರಂದು ನಡೆಯಲಿದೆ ಅಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಈ ಬಗ್ಗೆ ಯಾರೂ ಅಭಿಯಾನ ಮಾಡಬೇಕಾಗಿಲ್ಲ ಯಾರು ಯಾರ ಮೇಲೆ ಏನನ್ನು ಹೇಳಲು ಸಾಧ್ಯವಿಲ್ಲ. ಅಭಿಯಾನ ಮಾಡುವವರಿಗೆ ರಾಷ್ಟ್ರಪ್ರೇಮದ ಗಂಭೀರತೆ ಎಷ್ಟಿದೆ ಗೊತ್ತಿಲ್ಲ ಸಿಂದಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದವರು ಈಗ ರಾಷ್ಟ್ರಪ್ರೇಮದ ಪಾಠ ಮಾಡುತ್ತಿದ್ದಾರೆ ಎಂದರು
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ವಿಚಾರದಲ್ಲಿ ಪ್ರತಿಕ್ರಿಯಿಸಿ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಮಸೀದಿ ದೇವಸ್ಥಾನ ಗುಂಬಜ್ ಗಳನ್ನು ಕಟ್ಟಿಸಿದ್ದಾನೆ. ಟಿಪ್ಪು ಮೈಸೂರಿನ ಹುಲಿ ಎಂದು ಪಾಠದಿಂದ ಕಲಿತಿದ್ದೇವೆ ವ್ಯತಿರಿಕ್ತವಾದ ಅಭಿಪ್ರಾಯಗಳ ಬಗ್ಗೆ ಚರ್ಚೆ ನಡೆಯಲಿ ಇತಿಹಾಸ ಕಳಂಕಗಳ ಬಗ್ಗೆ ಆಲೋಚನೆ ಮಾಡಬಾರದು ಹಾಗೆಯೇ ಇತಿಹಾಸದ ಒಳ್ಳೆಯ ವಿಚಾರಗಳು ಚರ್ಚೆಯಾಗಲಿ. ಇತಿಹಾಸದ ಚರ್ಚೆಗಳಿಂದ ಹಿಂದೂ ಮತ್ತು ಮುಸಲ್ಮಾನರಿಗೆ ಯಾವ ಪ್ರಯೋಜನವಾಗಿಲ್ಲ ಎಂದರು.