ಮದರ್‌ ತೆರೇಸಾರವರ 25ನೇ ಸಂಸ್ಮರಣಾ ದಿನಾಚರಣೆ ; ದ.ಕ.ಜಿಲ್ಲಾ ಮಟ್ಟದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ 

Spread the love

ಮದರ್‌ ತೆರೇಸಾರವರ 25ನೇ ಸಂಸ್ಮರಣಾ ದಿನಾಚರಣೆ ; ದ.ಕ.ಜಿಲ್ಲಾ ಮಟ್ಟದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ 

ಮಂಗಳೂರು: ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾರವರ 25ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ತಾ. 20-08-2022ರಂದು ಶನಿವಾರ ಬೆಳಿಗ್ಗೆ 9.30ಕ್ಕೆ ನಗರದ ಮಿಲಾಗ್ರಿಸ್ ಕಾಲೇಜ್ ನಲ್ಲಿ ದ.ಕ.ಜಿಲ್ಲಾ ಮಟ್ಟದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು  ತಿಳಿಸಿದೆ.

‘ಸಹಾನುಭೂತಿ ಮತ್ತು ಆಧ್ಯಾತ್ಮಿಕತೆ’ ಎಂಬ ವಿಷಯದ ಮೇಲೆ ನಡೆಯುವ ಚಿತ್ರಕಲಾ ಸ್ಪರ್ಧೆಯನ್ನು ಹೈಸ್ಕೂಲ್, ಕಾಲೇಜ್ ಹಾಗೂ ಸಾರ್ವಜನಿಕ ವಿಭಾಗದಲ್ಲಿ ನಡೆಸಲಾಗುತ್ತದೆ. ಪ್ರಬಂಧ ಸ್ಪರ್ಧೆಯನ್ನು ಹೈಸ್ಕೂಲ್, ಕಾಲೇಜ್, ಸಾರ್ವಜನಿಕ ವಿಭಾಗದಲ್ಲಿ ನಡೆಸಲಾಗುತ್ತಿದ್ದು, ‘ಪ್ರಾರ್ಥನೆ ಮಾಡುವ ತುಟಿಗಳಿಗಿಂತ ಇತರರಿಗೆ ಸಹಾಯ ಮಾಡುವ ಕೈಗಳೇ ಲೇಸು’ – ಮದರ್ ತೆರೇಸಾ ಎಂಬ ವಿಷಯವನ್ನು ಹೈಸ್ಕೂಲ್ ವಿಭಾಗಕ್ಕೂ, ‘ಕೋವಿಡ್ 19ರ ಕಾಲದಲ್ಲಿ ಮದರ್ ತೆರೇಸಾ ನೆನಪುಗಳು’ ಎಂಬ ವಿಷಯವನ್ನು ಕಾಲೇಜ್ ವಿಭಾಗಕ್ಕೂ ಹಾಗೂ ‘ವೈವಿಧ್ಯ ಭಾರತದಲ್ಲಿ ಮಾನವೀಯ ಸೇವೆಗಳು’ ಎಂಬ ವಿಷಯವನ್ನು ಸಾರ್ವಜನಿಕ ವಿಭಾಗಕ್ಕೂ ನೀಡಲಾಗಿದೆ.
ಭಾಗವಹಿಸುವ ಎಲ್ಲಾ ಸ್ಪರ್ಧಾಳುಗಳು ಅಂದು ಬೆಳಿಗ್ಗೆ 9.30ಕ್ಕೆ ನಿಗದಿತ ಸ್ಥಳದಲ್ಲಿ ಹಾಜರಿರಬೇಕು.ವಿದ್ಯಾರ್ಥಿಗಳು ತಮ್ಮ ಶಾಲಾ ಕಾಲೇಜಿನ ಗುರುತುಚೀಟಿ ಹಾಗೂ ಶಾಲಾ ಕಾಲೇಜು ಮುಖ್ಯಸ್ಥರಿಂದ ಅನುಮತಿ ಪತ್ರವನ್ನು ತರತಕ್ಕದ್ದು.ಸಾರ್ವಜನಿಕ ವಿಭಾಗದಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ತಮ್ಮ ಆಧಾರ್ ಕಾರ್ಡ್ ನ್ನು ತರತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ 9611876693, 9448503739, 9845084707 ನಂಬರಿಗೆ ಸಂಪರ್ಕಿಸಬೇಕೆಂದು ವಿಚಾರ ವೇದಿಕೆಯ ಮಾಧ್ಯಮ ಸಮಿತಿ ಸಂಚಾಲಕರಾದ ಸುಶೀಲ್ ನೊರೋನ್ಹಾರವರು ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.


Spread the love