ಮದುವೆಯಾಗುವುದಾಗಿ ನಂಬಿಸಿ ಯುವತಿಯ ಅತ್ಯಾಚಾರ: ವೈದ್ಯನ ವಿರುದ್ದ ದೂರು ದಾಖಲು

Spread the love

ಮದುವೆಯಾಗುವುದಾಗಿ ನಂಬಿಸಿ ಯುವತಿಯ ಅತ್ಯಾಚಾರ: ವೈದ್ಯನ ವಿರುದ್ದ ದೂರು ದಾಖಲು

ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯೊಂದರ ನರ್ಸ್ ಗೆ ಕೇರಳ ಮೂಲದ ದಂತ ವೈದ್ಯ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಮಾಡಿ ಅತ್ಯಾಚಾರ ಎಸಗಿದ ದಂತ ವೈದ್ಯನ ವಿರುದ್ದ ನರ್ಸ್ವೊಬ್ಬರು ಮಂಗಳೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.

23ರ ಹರೆಯದ ಯುವತಿಯು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿದ್ದು, ಈಕೆಗೆ ಮಂಗಳೂರಿನ ದಂತ ವೈದ್ಯಕೀಯ ಕಾಲೇಜಿನಲ್ಲಿ ಬಿಡಿಎಸ್ ಫೈನಲ್ ಡಿಗ್ರಿ ಓದುತ್ತಿದ್ದ ಕೇರಳ ಮೂಲದ ದಂತ ವೈದ್ಯ ನ ಪರಿಚಯವಾಗಿತ್ತು ಎಂದು ಹೇಳಲಾಗಿದೆ. ಆತ ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ದೈಹಿಕ ಸಂಬಂಧ ನಡೆಸಿದ್ದು, ಗರ್ಭವತಿಯಾದಾಗ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ

ವಂಚನೆಗೊಳಗಾದ ನರ್ಸ್ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಆರೋಪಿ ದಂತ ವೈದ್ಯನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love

Leave a Reply

Please enter your comment!
Please enter your name here