
Spread the love
ಮದುವೆ ಆಗಲ್ಲ ಎಂದಿದ್ದಕ್ಕೆ ಕೆರೆ ಬಳಿ ಕರೆದೊಯ್ದು ಯುವತಿಯ ಉಸಿರು ನಿಲ್ಲಿಸಿದ ಪಾಗಲ್ ಪ್ರೇಮಿ
ಬೀದರ್: ಮದುವೆಗಯಾಗಲು ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಯುವತಿಯನ್ನು ಕೊಲೆ ಮಾಡಿರುವ ಆತಂಕಕಾರಿ ಘಟನೆ ಬೀದರ್ ತಾಲೂಕಿನ ಸೋಲಪೂರ್ ಕೆರೆಯ ಬಳಿ ನಡೆದಿದೆ.
ಶಿವಲೀಲಾ (18) ಕೊಲೆಯಾದ ಯುವತಿ. ಆರೋಪಿ ಶ್ರೀನಿವಾಸ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಶಿವಲೀಲಾ ಪ್ಯಾರಾ ಮೆಡಿಕಲ್ ಓದುತ್ತಿದ್ದಳು. ಮದುವೆಯಾಗಲು ಇಷ್ಟವಿಲ್ಲ ಎಂದು ಹೇಳಿದ್ದಕ್ಕೆ ಸೋಲಪೂರ್ ಕೆರೆಯ ಬಳಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಆರೋಪಿ ಶ್ರೀನಿವಾಸ ಚಾಂಬೋಳ ಗ್ರಾಮದ ನಿವಾಸಿ. ಶಿವಲೀಲಾ ಮಲ್ಲಿಕ್ ಮಿರ್ಜಾಪೂರ್ ಗ್ರಾಮದ ಹುಡುಗಿ. ಬೀದರ್ ನಗರದ ಮಂಗಲ್ ಪೇಟೆಯಲ್ಲಿ ತಾಯಿ ಜೊತೆ ವಾಸವಾಗಿದ್ದಳು. ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಶ್ರೀನಿವಾಸನನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಘಟನೆ ಸಂಬಂಧ ಬೀದರ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Spread the love