ಮದುವೆ ದಿಬ್ಬಣದ ಅಲಂಕಾರ ಮಾಡಿ ಇನ್ನೋವಾ ವಾಹನದಲ್ಲಿ ಗೋಸಾಗಾಟ- ಗೋವುಗಳ ರಕ್ಷಣೆ

Spread the love

ಮದುವೆ ದಿಬ್ಬಣದ ಅಲಂಕಾರ ಮಾಡಿ ಇನ್ನೋವಾ ವಾಹನದಲ್ಲಿ ಗೋಸಾಗಾಟ- ಗೋವುಗಳ ರಕ್ಷಣೆ

ಉಡುಪಿ: ಇನ್ನೋವಾ ಕಾರಿಗೆ ಮದುವೆ ದಿಬ್ಬಣದ ಅಲಂಕಾರ ಮಾಡಿ ಹಿಂಸಾತ್ಮಕವಾಗಿ ಗೋವುಗಳನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದ   ಶಿರ್ವ ಪೊಲೀಸರು ದಾಳಿ ನಡೆಸಿ ಗೋವುಗಳನ್ನು ರಕ್ಷಣೆ ಮಾಡಿದ ಘಟನೆ ನಡೆದಿದೆ.

ಪೋಲಿಸ್‌ ಮಾಹಿತಿಗಳ ಪ್ರಕರಾರ ಶನಿವಾರ ಬೆಳಗ್ಗಿನ ಜಾವ ಬಾತ್ಮೀದಾರರ ಮಾಹಿತಿಯಂತೆ ಅಂಗಾರಕಟ್ಟೆ ಕಡೆಯಿಂದ ಎಡ್ಮೇರು ಕಡೆಗೆ ಪಿಕಪ್‌ ಮತ್ತು ಇನ್ನೋವಾ ಕಾರಿನಲ್ಲಿ ದನ ಸಾಗಾಟ ನಡೆಯಿದೆ ಎಂಬ ಕುರಿತು ಬಾತ್ಮೀದಾರರ ಮಾಹಿತಿಯಂತೆ ಸಿಬಂದಿಯೊಂದಿಗೆ ತೆರಳಿ ಎಡ್ಮೇರು ಕೋಚರಪ್ಪು ಸೇತುವೆ ಬಳಿ ತಡೆದಿದ್ದು ಪೊಲೀಸ್‌ ವಾಹನವನ್ನು ನೋಡಿದ ವಾಹವನ್ನು ರಸ್ತೆ ಬದಿ ಇರುವ ಕಲ್ಲಿಗೆ ತಾಗಿಸಿ ಬಿಟ್ಟು ಹಾಡಿಯಲ್ಲಿ ಪರಾರಿಯಾಗಿದ್ದಾರೆ. ಬಳಿಕ ಪಿಕಅಪ್‌ ಮತ್ತು ಇನ್ನೋವಾ ವಾಹನವನ್ನು ಪರಿಶೀಲಿಸಿದಾಗ ಪಿಕಅಪ್‌ ನಲ್ಲಿ 13 ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿರುವುದು ಕಂಡು ಬಂತು ನಂತರ ಇನ್ನೋವಾ ನೋಡಿದಾಗ ಅದರಲ್ಲಿ 2 ದನ ಹಿಂಸಾತ್ಮಕ ರೀತಿಯಲ್ಲಿ ಹಾಕಿದ್ದು ಕಂಡು ಬಂದಿದ್ದು ಅವುಗಳನ್ನು ರಕ್ಷಣೆ ಮಾಡಿದ್ದಾರೆ.

ಈ ಕುರಿತು ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love