ಮದುವೆ ಸಮಾರಂಭದ ಸಭಾಂಗಣದ ಬಳಿ ಮದ್ಯ ಸೇವನೆ ಮಾಡಿ ಅಸಭ್ಯ ವರ್ತನೆ – ಮೂವರ ಬಂಧನ

Spread the love

ಮದುವೆ ಸಮಾರಂಭದ ಸಭಾಂಗಣದ ಬಳಿ ಮದ್ಯ ಸೇವನೆ ಮಾಡಿ ಅಸಭ್ಯ ವರ್ತನೆ – ಮೂವರ ಬಂಧನ

ಮಂಗಳೂರು: ಮದುವೆ ಸಮಾರಂಭದ ಸಭಾಂಗಣದ ಬಳಿ ಮದ್ಯ ಸೇವನೆ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಮೂವರನ್ನು ಬಜ್ಪೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ವ್ಯಕ್ತಿಗಳನ್ನು ಕಾಸರಗೋಡು ನಿವಾಸಿಗಳಾದ ಶರಣ್‌, ಪ್ರಮೋದ್‌ ಮತ್ತು ಅಜೇಶ್‌ ಎಂದು ಗುರುತಿಸಲಾಗಿದೆ.

ಪೊಲೀಸ್‌ ಮೂಲಗಳ ಪ್ರಕಾರ ತೊಕ್ಕೊಟ್ಟು ಒಳಪೇಟೆ ಬಳಿ ಬಜ್ಪೆ ಠಾಣಾ ಪೊಲೀಸ್‌ ಸಿಬಂದಿ ಮತ್ತು ಹೋಮ್‌ ಗಾರ್ಡ್‌ ಓರ್ವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮದುವೆ ಸಭಾಂಗಣದ ಬಳಿ ಮದ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಅವರುಗಳಿಗೆ ಎಚ್ಚರಿಕೆ ನೀಡಿದ್ದು ಈ ವೇಳೆ ಪೊಲೀಸರನ್ನು ತಳ್ಳಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಕೆಟ್ಟ ಭಾಷೆಯನ್ನು ಬಳಸಿದ್ದು, ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Spread the love