ಮದ್ದೂರು ಕಾಂಗ್ರೆಸ್ ಅಭ್ಯರ್ಥಿ ಪರ ದರ್ಶನ್ ಪ್ರಚಾರ

Spread the love

ಮದ್ದೂರು ಕಾಂಗ್ರೆಸ್ ಅಭ್ಯರ್ಥಿ ಪರ ದರ್ಶನ್ ಪ್ರಚಾರ

ಮಂಡ್ಯ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರವಾಗಿ ನಟ ನಟಿಯರು ಪ್ರಚಾರ ನಡೆಸುವುದು ಸಾಮಾನ್ಯವಾಗಿದ್ದು, ಅದರಂತೆ ಮದ್ದೂರು ಕ್ಷೇತ್ರದ ಅಭ್ಯರ್ಥಿ ಕದಲೂರು ಉದಯ್ ಪರವಾಗಿ ಕೆ.ಎಂ.ದೊಡ್ಡಿಯಲ್ಲಿ ನಟ ದರ್ಶನ್ ಬಿರುಸಿನ ಪ್ರಚಾರ ನಡೆಸಿದರು.

ಬೊಮ್ಮನಹಳ್ಳಿ ಹೊನ್ನಲಗೆರೆ ಚಂದೂಪುರ ಕೆ.ಎಂ.ದೊಡ್ಡಿ ವ್ಯಾಪ್ತಿಯಲ್ಲಿ ನಟ ದರ್ಶನ್ ಅವರನ್ನು ನೋಡಲು ರಸ್ತೆಯ ಎರಡು ಬದಿಗಳಲ್ಲಿ ಹಾಗೂ ರಸ್ತೆ ನಡುವೆ ಜನ ಸೇರಿದ್ದರು. ಈ ವೇಳೆ ಅಭಿಮಾನಿಗಳು ಜೈಕಾರ ಮೊಳಗಿಸಿದರು. ಈ ವೇಳೆ ಮಾತನಾಡಿದ ನಟ ದರ್ಶನ್ ಚುನಾವಣ ಪ್ರಚಾರದಲ್ಲಿ ಸ್ನೇಹಿತನನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು. ಸ್ನೇಹಿತರಿಗೋಸ್ಕರ ಮಾತ್ರ ಚುನಾವಣೆ ಪ್ರಚಾರ ಮಾಡುತ್ತಿದ್ದೇನೆ.

ನಾನು ಉದಯ್ ಅವರು ಕಳೆದ 6ವರ್ಷಗಳಿಂದ ಉತ್ತಮ ಸ್ನೇಹಿತರು ಅವರು ಮಾತು ಕಡಿಮೆ ಕೆಲಸ ಹೆಚ್ಚು ಮಾಡುವ ವ್ಯಕ್ತಿತ್ವ ಅವರದ್ದು, ಉದಯ್ ಅವರು 3ವರ್ಷಗಳಿದ ಸಮಾಜ ಸೇವೆ ಮಾಡಿಕೊಂಡು ಬರುತ್ತಿದ್ದು ಅವರನ್ನು ಅಭೂತಪೂರ್ವ ಗೆಲುವಿನೊಂದಿಗೆ ವಿಧಾನ ಸೌಧಕ್ಕೆ ಕಳುಹಿಸಿಕೊಡಿ ಎಂದರು.

ವಿಧನಾ ಪರಿಷತ್ ಸದಸ್ಯ ಮಧು.ಜಿ.ಮಾದೇಗೌಡ ಮಾತನಾಡಿ ಕಾಂಗ್ರೆಸ್ ಅವಧಿಯಲ್ಲಿ ಕೋಮು ಸೌಹಾರ್ದತೆ ಇತ್ತು. ಡೀಸಲ್, ಪೆಟ್ರೋಲ್, ಸೀಮೆಎಣ್ಣೆ,ಅಡುಗೆ ಅನಿಲದ ದರ ಕಡಿಮೆ ಇತ್ತು. ದಿನಬಳಕೆಯ ವಸ್ತುಗಳ ದರ ಕಡಿಮೆ ಇತ್ತು ಬಡವರು ಕೇವಲ ಹತ್ತು ರೂಪಾಯಿಗೆ ಹೊಟ್ಟೆ ತುಂಬಾ ಅನ್ನ ತಿನ್ನುತ್ತಿರುವ ಕ್ಯಾಂಟಿನ್ ಇತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ 5ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್,ಅಡುಗೆ ಅನಿಲ ದರ ದುಪ್ಪಾಟ್ಟಾಗಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಬಿ.ರಾಮಕೃಷ್ಣ, ತಿಮ್ಮದಾಸ್ ಸಿ.ಟಿ.ಶಂಕರ್, ಸುರೇಶ್ ಕಂಠಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಎಸ್.ರಾಜೀವ್ ಮತ್ತಿತರರು ಇದ್ದರು.


Spread the love