Home Mangalorean News Kannada News ಮದ್ಯ ನಿಷೇದ ಮಾಡುವ ಯಾವುದೇ ಪ್ರಸ್ತಾಪ ರಾಜ್ಯ ಸರಕಾರದ ಮುಂದಿಲ್ಲ ; ಸಿದ್ದರಾಮಯ್ಯ

ಮದ್ಯ ನಿಷೇದ ಮಾಡುವ ಯಾವುದೇ ಪ್ರಸ್ತಾಪ ರಾಜ್ಯ ಸರಕಾರದ ಮುಂದಿಲ್ಲ ; ಸಿದ್ದರಾಮಯ್ಯ

Spread the love

ಮದ್ಯ ನಿಷೇದ ಮಾಡುವ ಯಾವುದೇ ಪ್ರಸ್ತಾಪ ರಾಜ್ಯ ಸರಕಾರದ ಮುಂದಿಲ್ಲ ; ಸಿದ್ದರಾಮಯ್ಯ

ಉಡುಪಿ: ರಾಜ್ಯದಲ್ಲಿ ಮದ್ಯ ನಿಷೇದ ಮಾಡುವ ಯಾವುದೇ ಪ್ರಸ್ತಾಪ ರಾಜ್ಯಸರಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಅವರು ಭಾನುವಾರ ಉಡುಪಿಯಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ ಅಂತಹ ಯಾವುದೇ ರಿತಿಯ ಚಿಂತನೆ ಇದುವರೆಗೆ ನಡೆಸಿಲ್ಲ  ಎಂದ ಮುಖ್ಯಮಂತ್ರಿಗಳು ಬಡ ರೋಗಿಗಳಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಬಿ ಆರ್ ಶೆಟ್ಟಿಯವರ ಸಹಭಾಗಿತ್ವದಲ್ಲಿ ಆಸ್ಪತ್ರೆ ನಿರ್ಮಿಸಲಾಗಿದ್ದು ಯಾವುದೇ ಖಾಸಗಿ ವೈದ್ಯರಿಗೆ ಕಡಿವಾಣ ಹಾಕುವ ಉದ್ದೇಶ ಸರಕಾಕ್ಕಿಲ್ಲ. ಈ ಆಸ್ಪತ್ರೆಯನ್ನು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಕೊಡುವುದಿಲ್ಲ ಸರಕಾರದ ಕೈಯಲ್ಲೇ ಇರುತ್ತದೆ ಆದರೆ ಅದನ್ನು ಉಚಿತವಾಗಿ ಸರಕಾರದ ಹೆಸರಿನಲ್ಲಿ ಬಿ ಆರ್ ಶೆಟ್ಟಿ ನಡೆಸುತ್ತಾರೆ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿಯಾಗಿ ಐದು ಬಾರಿ ಉಡುಪಿಗೆ ಬಂದರೂ ಕೃಷ್ಣ ಮಠಕ್ಕೆ ಹೋಗದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಈ ಬಾರಿ ಕೃಷ್ಣ ಮಠಕ್ಕೆ ಹೋಗುವ ಚಿಂತನೆ ಇಲ್ಲ ಅಂದ ಮಾತ್ರಕ್ಕೆ ಕೃಷ್ಣ ಮಠದ ವಿರೋಧಿಯೂ ನಾನಲ್ಲ ಎಂದರು. ಪೇಜಾವರ ಶ್ರೀಗಳ ಜೊತೆ ನನಗೇನು ಮನಸ್ತಾಪ ಇಲ್ಲ ನನ್ನ ರಾಜ್ಯದ ಆರು ಕೋಟಿ ಜನರೊಂದಿಗೆ ಕೂಡ ನಾನು ಉತ್ತಮ ಸಂಬಂಧ ಹೊಂದಿದ್ದೇನೆ. ಬಿಜೆಪಿಯವರು ಮಾಡುವ ಆರೋಪಗಳಿಗೆ ಉತ್ತರ ಕೊಡಬೇಕಾಗಿಲ್ಲ ಜನರು ಅದನ್ನು ಗಮನಿಸುತ್ತಾರೆ ಎಂದರು.

ಇತ್ತೀಚೆಗೆ ನಡೆದ ವೈದ್ಯರ ಹೋರಾಟದಲ್ಲಿ ಗೆದ್ದಿರುವುದು ಸರಕಾರ ಅಥವಾ ಖಾಸಗಿ ವೈದ್ಯರಲ್ಲ ಬದಲಾಗಿ ಬಡ ರೋಗಿಗಳು ಎಂದರು.

ಸಚಿವರಾದ ಪ್ರಮೋದ್ ಮಧ್ವರಾಜ್, ಶಾಸಕರಾದ ವಿನಯ್ ಕುಮಾರ್ ಸೊರಕೆ, ಐವನ್ ಡಿಸೋಜಾ ಹಾಗೂ ಇತರರು ಉಪಸ್ಥಿತರಿದ್ದರು.


Spread the love

Exit mobile version