
ಮಧುಮೇಹ ಪಾದದ ಸಮಸ್ಯೆ ವಿರುದ್ಧ ಹೋರಾಡಲು ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಕೆಲಸಗಾರರ ತರಬೇತಿ ಇಂದಿನ ಅಗತ್ಯ: ಪಿ.ಸಿ. ನಾಯಕ್
ಮಂಗಳೂರು: ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿನ ಆರೋಗ್ಯ ವಿಜ್ಞಾನಗಳ ಪ್ರಧಾನ ನಿರ್ದೇಶನಾಲಯವು (ರಾಷ್ಟಿಯ ಎನ್ಸಿಡಿ ವಿಭಾಗ) ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಖ್ಯಾತ ಮಧುಮೇಹ ಪಾದ(ಡಯಾಬಿಟಿಕ್ ಫೂಟ್)ದ ಸಮಸ್ಯೆಯ ವಿಶೇಷ ತಜ್ಞರಾದ ಡಾ. ಪ್ರವೀಣ್ ಚಂದ್ರ ನಾಯಕ್ ಅವರನ್ನು ಡಯಾಬಿಟಿಕ್ ಫೂಟ್ ಕುರಿತಂತೆ ಪ್ರಬಂಧವನ್ನು ಪ್ರಸ್ತುತಪಡಿಸಲು ಇತ್ತೀಚೆಗೆ ಆಹ್ವಾನಿಸಲಾಗಿತ್ತು.
ಮಧುಮೇಹ ರೋಗಿಗಳು ಕೆಲವು ರೀತಿಯ ನರಗಳ ಹಾನಿ ಅಥವಾ ಡಯಾಬಿಟಿಕ್ ನ್ಯೂರೋಪಥಿಯಿಂದ ಬಳಲುತ್ತಾರೆ. ರಕ್ತದಲ್ಲಿನ ಅನಿಯಂತ್ರಿತ ಸಕ್ಕರೆಯ ಮಟ್ಟಗಳು ಸೂಕ್ಷ್ಮ ರಕ್ತನಾಳಗಳ ಗೋಡೆಗಳಿಗೆ ಮತ್ತು ಸಂಬAಧಿತ ನರಗಳಿಗೆ ಹಾನಿವುಂಟು ಮಾಡುತ್ತವೆ. ಅದರಲ್ಲಿಯೂ ವಿಶೇಷವಾಗಿ ಕಾಲುಗಳ ಭಾಗಕ್ಕೆ ಇವು ಅಧಿಕ ಪರಿಣಾಮ ಬೀರುತ್ತವೆ. ಇದು ರೋಗಿಗಳಲ್ಲಿ ಸಂವೇದನೆ ನಷ್ಟವಾಗುವ ಲಕ್ಷಣಗಳಿಗೆ ದಾರಿ ಮಾಡಿಕೊಡಬಹುದು. ಅಂದರೆ ರೋಗಿಗಳಿಗೆ ಅತ್ಯಂತ ಕಡಿಮೆ ನೋವಿನ ಅನುಭವವಾಗುತ್ತದೆ. ಇದರಿಂದ ಗೀರುಗಳಿಗೆ ದಾರಿಯಾಗಿ, ಅವು ಗಮನಕ್ಕೆ ಬಾರದೆ ಕಾಲ ಕಳೆದಂತೆ ಸೋಂಕುಗಳಾಗಿ ಪರಿವರ್ತನೆಯಾಗಬಹುದಾಗಿದೆ.
ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಇತರೆ ಗಣ್ಯರಿಗೆ ಮಧುಮೇಹ ಪಾದ ಕುರಿತಂತೆ ವಿವರಿಸಿದ ಕೆಎಂಸಿ ಆಸ್ಪತ್ರೆಯ ಪೋಡಿಯಾಟ್ರಿಕ್(ಪಾದದ) ಶಸ್ತçಚಿಕಿತ್ಸೆ ಸಲಹಾ ತಜ್ಞರಾದ ಡಾ. ಪ್ರವೀಣ್ ಚಂದ್ರ ನಾಯಕ್ ಅವರು ಮಾತನಾಡಿ, “ಮಧುಮೇಹ ರೋಗಿಗಳು ಒಂದು ರೀತಿಯ ನರಗಳಲ್ಲಿ ಉಂಟಾಗುವ ಗಾಯವಾದ ಡಯಾಬಿಟಿಕ್ ನ್ಯೂರೋಪಥಿಗೆ ಮತ್ತು ಅದರ ಸಂಕೀರ್ಣ ತೊಂದರೆಗಳಿಗೆ ತುತ್ತಾಗಬಹುದಾಗಿದೆ. ಆದ್ದರಿಂದ ವ್ಯಕ್ತಿಗಳು ನಿಗದಿತ ಆರೋಗ್ಯ ಪರೀಕ್ಷೆಗಳಿಗೆ ಒಳಗಾಗಬೇಕಾಗಿರುತ್ತದೆ. ಇದರಿಂದ ಮಧುಮೇಹ ಪಾದಕ್ಕೆ ಚಿಕಿತ್ಸೆ ನೀಡುವ ಆರ್ಥಿಕ ಹೊರೆಯಂತಹ ಈ ವೈದ್ಯಕೀಯ ಸ್ಥಿತಿಯ ಪರಿಣಾಮಗಳನ್ನು ನಿಭಾಯಿಸಲು ಅವರಿಗೆ ನೆರವಾಗುತ್ತದೆ. ತೊಂದರೆಗಳನ್ನು ತಡೆಯುವಂತಹ ಪಾದದ ಆರೈಕೆಯ ಕಡೆಗೆ ದೃಢವಾದ ಗಮನವನ್ನು ಅವರು ನೀಡಬೇಕು. ಮಧುಮೇಹ ಪಾದದ ಸಂಕೀರ್ಣ ತೊಂದರೆಗಳಿAದ ಕಂಡುಬರುವ ಕಾಲು ಕತ್ತರಿಸಬೇಕಾದಂತಹ ಪರಿಸ್ಥಿತಿಗಳ ದೇಶದಲ್ಲಿನ ಸರಾಸರಿ ದರವನ್ನು ಕಡಿಮೆ ಮಾಡಲು ಇದು ಅವಕಾಶ ಮಾಡಿಕೊಡುವುದು’’ ಎಂದರು.
ವಿಶೇಷವಾದ ಮಧುಮೇಹ ಪಾದದ ಆರೈಕೆ, ಸೂಕ್ತ ರೀತಿಯ ಪಾದರಕ್ಷೆಗಳ ಸಲಹೆ, ಜೀವನಶೈಲಿ, ಆರೋಗ್ಯಕರ ಆಹಾರಕ್ರಮ, ಮಧುಮೇಹ ಪಾದವನ್ನು ದಿನಾಲೂ ಪರೀಕ್ಷಿಸಿಕೊಳ್ಳುವುದು, ಸೂಕ್ತ ಚಿಕಿತ್ಸೆ ಮತ್ತು ಪಾದದಲ್ಲಿನ ಹುಣ್ಣುಗಳನ್ನು ತಡೆಯುವುದನ್ನು ಸಂಪರ್ಕಿಸಲಾಗಿದೆ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಕೆಲಸಗಾರರಿಗೆ ನಿರ್ದಿಷ್ಟ ತರಬೇತಿ ನೀಡುವಂತಹ ತುರ್ತು ಅಗತ್ಯ ಇದೆ ಎಂಬ ಮಾತನ್ನು ಡಾ. ನಾಯಕ್ ಅವರು ಒತ್ತಿ ಹೇಳಿದರು.
ಆರೋಗ್ಯ ವಿಜ್ಞಾನಗಳ ಪ್ರಧಾನ ನಿರ್ದೇಶನಾಲಯದ (ಡಿಜಿಎಚ್ಎಸ್) ಮುಖ್ಯಸ್ಥರಾದ ಪ್ರೊಫೆಸರ್ ಅತುಲ್ ಗೋಯಲ್, ಎನ್ಸಿಡಿ ವಿಭಾಗದ ಡಿಡಿಜಿ ಡಾ. ಸುದರ್ಶನ್ ಮಂಡಲ್, (ಎನ್ಎಫ್ಎಸ್ಜಿ) ಎನ್ಸಿಡಿ ವಿಭಾಗದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ರಂಗನಾಥ್ ಎ.ಆರ್ ಮತ್ತು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇತರೆ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.