
ಮನಪಾ ವಿಪಕ್ಷ ನಾಯಕರಾಗಿ ನವೀನ್ ಆರ್.ಡಿಸೋಜಾ ಅಧಿಕಾರ ಸ್ವೀಕಾರ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿ ನವೀನ್ ಆರ್.ಡಿಸೋಜಾ ಅವರು ಗುರುವಾರ ಮ.ನ.ಪಾ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಜನತೆಗೆ ಯಾವ ರೀತಿಯಲ್ಲಿ ಮೂಲಭೂತ ಸೌಕರ್ಯದ ಅಗತ್ಯವಿದೆ ಎಂಬುದನ್ನು ಗಮನದಲ್ಲಿರಿಸಿಕೊಂಡು ಆಡಳಿತದಲ್ಲಿನ ನ್ಯೂನ್ಯತೆಗಳ ಬಗ್ಗೆ ಪ್ರತಿ ಪಕ್ಷದ ನಾಯಕನಾಗಿ ಸಂವಿಧಾನ ರೀತ್ಯಾ ಕರ್ತವ್ಯ ನಿರ್ವಹಿಸುವುದಾಗಿ ಅವರು ಪ್ರತಿಜ್ಞೆಗೈದರು.
ಈ ಸಂದರ್ಭ ಮಾಜಿ ಶಾಸಕರುಗಳಾದ ಜೆ.ಆರ್.ಲೋಬೊ, ಮೊಯ್ದೀನ್ ಬಾವ, ಮಾಜಿ ಮೇಯರ್ ಗಳಾದ ಶಶಿಧರ್ ಹೆಗ್ಡೆ, ಮಾಹಬಲ ಮಾರ್ಲ, ಭಾಸ್ಕರ್.ಕೆ, ಬ್ಲಾಕ್ ಅಧ್ಯಕ್ಷರುಗಳಾದ ಅಬ್ದುಲ್ ಸಲೀಂ, ಪ್ರಕಾಶ್ ಸಾಲ್ಯಾನ್, ಮ.ನ.ಪಾ ಸದ್ಯರುಗಳಾದ ಲ್ಯಾನ್ಸ್ ಲೋಟ್ ಪಿಂಟೊ, ಅಬ್ದುಲ್ ರವೂಫ್, ಎ.ಸಿ. ವಿನಯರಾಜ್, ಸಂಶುದ್ದೀನ್ ಕುದ್ರೋಳಿ, ಕೇಶವ ಮರೋಳಿ, ಅಬ್ದುಲ್ ಲತೀಫ್ ಕಂದಕ್, ಪ್ರವೀಣ್ ಚಂದ್ರ ಆಳ್ವ, ಅಶ್ರಫ್ ಬಜಾಲ್, ಅನಿಲ್ ಕುಮಾರ್, ಜೆಸಿಂತಾ ವಿಜಯ್ ಆಲ್ಫ್ರೆಡ್, ಝೀನತ್ ಸಂಶುದ್ದೀನ್, ಹಯಾತುಲ್ ಖಾಮಿಲ್, ಶುಭೋದಯ ಆಳ್ವ, ಸಬಿತಾ ಮಿಸ್ಕಿತ್ ಭಾಗವಹಿಸಿ ಶುಭ ಹಾರೈಸಿದರು.