ಮನೆಗೆ ನುಗ್ಗಿದ ಚರಂಡಿ ನೀರು, ತಕ್ಷಣ ಸ್ಪಂದಿಸಿದ ಪಂಚಾಯತ್ ಸದಸ್ಯರಾದ ಇಕ್ಬಾಲ್ ಕೆ.ಸಿ.ರೋಡ್

Spread the love

ಮನೆಗೆ ನುಗ್ಗಿದ ಚರಂಡಿ ನೀರು, ತಕ್ಷಣ ಸ್ಪಂದಿಸಿದ ಪಂಚಾಯತ್ ಸದಸ್ಯರಾದ ಇಕ್ಬಾಲ್ ಕೆ.ಸಿ.ರೋಡ್

ಮಂಗಳೂರು: ಕೆ.ಸಿ.ರೋಡ್ ವಾರ್ಡ್ ನ 3ನೇ ಅಡ್ಡರಸ್ತೆಗೆ ತಿರುಗುವ ಬಳಿ ಮೋರಿಗೆ ಕಟ್ಟಿದ್ದ ಕಲ್ಲುಗಳು ಜರಿದು ಬಿದ್ದು ಮೋರಿ ಬಂದ್ ಆಗಿ ನೀರು ಹೋಗಲು ವ್ಯವಸ್ಥೆ ಇಲ್ಲದೇ ಮಳೆ ನೀರು ರೊನಾಲ್ಡ್ ಸಿಕ್ವೇರಾ ಎಂಬವರ ಮನೆಗೆ ನುಗ್ಗಿದೆ.

ಇದರ ಬಗ್ಗೆ ಕೆ.ಸಿ.ರೋಡ್ ವಾರ್ಡ್ ಪಂಚಾಯತ್ ಸದಸ್ಯರಾದ ಇಕ್ಬಾಲ್ ಕೆ.ಸಿ.ರೋಡ್ ಅವರನ್ನು ಸಂಪರ್ಕಿಸಿದಾಗ ಅದಕ್ಕೆ ಅವರು ತಕ್ಷಣ ಸ್ಪಂದಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿ ಜೆಸಿಬಿ ಮೂಲಕ ಮೋರಿಯನ್ನು ಎತ್ತಿ, ಪಂಚಾಯತ್ ನಿಧಿಯಿಂದ ಹೊಸ ಮೋರಿಯ ವ್ಯವಸ್ಥೆಯನ್ನು ಮಾಡಿದರು.

ಯಾರಿಗೆ ಏನೇ ತೊಂದರೆ ಆದಾಗ ತನ್ನ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗಿರಿಸಿ ತಕ್ಷಣ ಸ್ಪಂದಿಸುವ ಪಂಚಾಯತ್ ಸದಸ್ಯರು ಸಾರ್ವಜನಿಕರಿಂದ ಪ್ರಶಂಸೆಗೀಡಾದರು.


Spread the love