
ಮನೆಗೆ ಬೆಂಕಿಬಿದ್ದು ಲಕ್ಷಾಂತರ ರೂ. ನಷ್ಟ
ಚಾಮರಾಜನಗರ: ಆಕಸ್ಮಿಕ ಬೆಂಕಿ ತಗುಲಿ ಮನೆ ಸುಟ್ಟು ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ನಾಶವಾಗಿರುವ ಘಟನೆ ಸಂತೆಮರಹಳ್ಳಿ ಸಮೀಪದ ತೆಳ್ಳನೂರು ಗ್ರಾಮದಲ್ಲಿ ನಡೆದಿದೆ.
ತೆಳ್ಳನೂರು ಗ್ರಾಮದ ವಿಶ್ವಕರ್ಮ ಬಡಾವಣೆಯ ಶಿವಬಸಪ್ಪ ಎಂಬುವರೇ ಅಗ್ನಿಅನಾಹುತ ಮನೆಕಳೆದುಕೊಂಡವರಾಗಿದ್ದು, ಈ ಘಟನೆಯಿಂದಾಗಿ ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಇದ್ದಕ್ಕಿದ್ದಂತೆ ಮನೆಗೆ ಬೆಂಕಿ ತಗುಲಿ ಉರಿಯಲಾರಂಭಿಸಿದೆ. ಇದರಿಂದಾಗಿ ಮನೆಯಲ್ಲಿದ್ದ ವಸ್ತುಗಳು ಉರಿದು ಭಸ್ಮವಾಗಿದೆ.
ಮನೆ ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದರೆ ಅದನ್ನು ನೋಡಿದ ಕುಟಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಮನೆಯಲ್ಲಿದ್ದ ಬಡ ಕುಟುಂಬಕ್ಕೆ ಆಧಾರವಾಗಿದ್ದ ಎಲ್ ಐ ಸಿ ಬಾಂಡು ಹಾಗೂ ಮಕ್ಕಳ ದಾಖಲಾತಿಗಳು, ಮಕ್ಕಳ ಜೀವನಕ್ಕೆ ಆಧಾರವಾಗಿದ್ದ ಸಣ್ಣ ಪುಟ್ಟ ಒಡವೆಗಳು ಬೆಂಕಿಯಲ್ಲಿ ಕರಗಿ ಹೋಗಿದೆ. ಆದರೆ ಅಕ್ಕಪಕ್ಕದ ಜನರು ಮನೆಯಲ್ಲಿದ್ದ ವಸ್ತುಗಳನ್ನು ತರುವ ಪ್ರಯತ್ನ ಮಾಡಿದ್ದಲ್ಲದೆ, ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.
ಮನೆ ಸೇರಿದಂತೆ ಮನೆಯಲ್ಲಿ ವಸ್ತುಗಳು ನಾಶವಾಗಿದ್ದನ್ನು ಕಂಡ ಕುಟುಂಬಸ್ಥರು ತಲೆಕೈಹೊತ್ತು ಕುಳಿತಿದ್ದು, ಮುಂದೇನು ಎಂಬ ಚಿಂತೆ ಶುರುವಾಗಿದೆ. ಅಲ್ಲದೆ, ಸಂಬಂಧ ಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ಸೂಕ್ತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.