ಮನೆಯಲ್ಲಿ ಜಗಳವಾಡಿ ಮನೆಬಿಟ್ಟು ಹೋದ ಯುವಕ: ಪತ್ತೆಗೆ ಪೊಲೀಸರ ಮನವಿ
ಮಂಗಳೂರು: ಶಕ್ತಿನಗರದ ಕ್ಯಾಸ್ಟೊಲಿನೋ ಕಾಲೋನಿ ನಿವಾಸಿ ಸ್ವರ್ ಭೂಷಣ್ ಸಿಂಗ್ (19 ವರ್ಷ) ಎಂಬವರು ಮನೆಯಲ್ಲಿ ಜಗಳವಾಡಿ ಸ್ಕೂಲ್ ಬ್ಯಾಗ್ ಹಿಡಿದುಕೊಂಡು ಜೂನ್ 29 ರಂದು ಮನೆ ಬಿಟ್ಟು ಹೋದವರು ಕಾಣೆಯಾಗಿದ್ದು, ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಚಹರೆ: ಎತ್ತರ 5.4 ಅಡಿ, ಎಣ್ಣೆಕಪ್ಪು ಮೈಬಣ್ಣ, ಕಪ್ಪು ಕೂದಲು, ಸಪೂರ ಶರೀರ ಹೊಂದಿರುತ್ತಾರೆ. ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಕಾಣೆಯಾದ ದಿನ ಕಪ್ಪು ಬಣ್ಣದ ಟಿ-ಶರ್ಟ್, ಕ್ರೀಮ್ ಬಣ್ಣದ ಪ್ಯಾಂಟ್ ಧರಿಸಿದ್ದರು.
ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಮಂಗಳೂರು ಗ್ರಾಮಾಂತರ ಪೋಲಿಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
