ಮನೆ ಬಾಡಿಗೆ ನೆಪದಲ್ಲಿ ಚಿನ್ನಾಭರಣ ಕಳ್ಳತನ – ಆರೋಪಿಯ ಬಂಧನ

Spread the love

ಮನೆ ಬಾಡಿಗೆ ನೆಪದಲ್ಲಿ ಚಿನ್ನಾಭರಣ ಕಳ್ಳತನ – ಆರೋಪಿಯ ಬಂಧನ

ಮಂಗಳೂರು: ಮನೆ ಬಾಡಿಗೆಗೆ ಕೇಳಿಕೊಂಡು ಬಂದು ಮನೆಯಲ್ಲಿದ್ದ ಚಿನ್ನಾಭರಣ ದೋಚಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು  ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕಾಸರಗೋಡು ಮಂಜೇಶ್ವರ ಉಪ್ಪಳ ನಿವಾಸಿ ಮುಜೀಬ್ ರೆಹಮಾನ್(30) ಎಂದು ಗುರುತಿಸಲಾಗಿದೆ.

ಮಾರ್ಚ್ 16 ರಂದು ಉಳ್ಳಾಲ ನಿವಾಸಿ ವೀಣಾ ಎಂಬವರು ಠಾಣೆಗೆ ಬಂದು ನೀಡಿದ ಲಿಖಿತ ಪಿರ್ಯಾದಿ ಸಾರಾಂಶವೆನೆಂದರೆ, ಪಿರ್ಯಾದಿದಾರರು ತನ್ನ ಅಕ್ಕ ಅಶ್ವಿನಿ ಎಂಬವರ ಮನೆಯಾದ ಮಂಗಳೂರು ತಾಲೂಕು ಬೆಳ್ಳಿ ಗ್ರಾಮದ ನಿತ್ಯಾನಂದ ನಗರ ಎಂಬಲ್ಲಿಗೆ ಬಂದಿದವರು ತನ್ನ ಅಕ್ಕನ ಜೊತೆಯಲಿ ದೇರಳಕಟ್ಟೆ ಕಣಚೂರು ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿ ಮಧ್ಯಾಹ್ನ 12.00 ಗಂಟೆಗೆ ವಾಪಾಸು ಬಂದಾಗ ಪಿರ್ಯಾದಿದಾರರ ತಾಯಿಯವರು, ಯಾರೋ ಅಪವರಿಚಿತ ವ್ಯಕ್ತಿಯೋರ್ವನು ಮನೆ ಬಾಡಿಗೆ ಕೊಡುತ್ತಿರಾ ಎಂದು ಕೇಳಿಕೊಂಡು ಮನೆಯೊಳಗೆ ಬಂದು ಹೋಗಿರುವುದಾಗಿ ತಿಳಿಸಿದ್ದು, ಬಳಿಕ ಪಿರ್ಯಾದಿದಾರರು ಬೆಡ್ ರೂಮಿನಲ್ಲಿ ಇಟ್ಟಿದ ಬ್ಯಾಗನ್ನು ನೋಡಿದಾಗ ಬ್ಯಾಗ್ ನಲ್ಲಿ ಇಟ್ಟಿದ್ದ ಸುಮಾರು 3.50 ಪವನ್ ತೂಕದ ಚಿನ್ನದ ಕರಿಮಣಿ ಸರ ಮತ್ತು 1 ಪವನ್ ತೂಕದ ಚಿನ್ನದ ಸರ ಕಾಣಿಸದೆ ಇದ್ದು, ಈ ಚಿನ್ನಾಭರಣಗಳನ್ನು ಮನೆ ಬಾಡಿಗೆ ಕೇಳಿಕೊಂಡು ಬಂದಿದ್ದ ವ್ಯಕ್ತಿ ತೆಗೆದುಕೊಂಡು ಹೋಗಿರಬಹುದಾಗಿದ್ದು, ಕಳುವಾದ ಚಿನ್ನಾಭರಣದ ಅಂದಾಜು ಮೌಲ್ಯ 1,40,000/- ರೂ.ಗಳು ಆಗಬಹುದು ಎಂದು ದೂರು ದಾಖಲಿಸಿದ್ದರು.

ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮುಜೀಬ್ ರೆಹಮಾನ್ ನನ್ನು ಬಂಧಿಸಿದ್ದು, ಬಂಧಿತನಿಂದ ಕೃತ್ಯಕ್ಕೆ ಉಪಯೋಗಿಸಿದ ಆಕ್ಟಿವಾ ಹೊಂಡಾ ಕೆಎಲ್.14,ಪಿ.5432ನೇದನ್ನು ಹಾಗೂ ಪ್ರಕರಣದಲ್ಲಿ ಕಳ್ಳತನವಾದ ಸುಮಾರು 36 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಚಿನ್ನಾಭರಣದ ಅಂದಾಜು ಮೌಲ್ಯ 1,40,000/-ರೂ ಮತ್ತು ಆಕ್ಟಿವಾ ಹೊಂಡಾದ ಅಂದಾಜು ಮೌಲ್ಯ 35,000/- ರೂ ಆಗಬಹುದು. ಆರೋಪಿಯಿಂದ ಸ್ವಾಧೀನಪಡಿಸಿದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 1,75,000/-ರೂ ಆಗಬಹುದು, ಆರೋಪಿಯನ್ನು ದಸ್ತಗಿರಿ ಕ್ರಮ ಜರುಗಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.


Spread the love