ಮನೋಬಲವಿದ್ದರೆ ಸಂಕಷ್ಟದಿಂದ ಮುಕ್ತರಾಗಬಹುದು: ನಟಿ ಮಾಲಾಶ್ರೀ

Spread the love

ಮನೋಬಲವಿದ್ದರೆ ಸಂಕಷ್ಟದಿಂದ ಮುಕ್ತರಾಗಬಹುದು: ನಟಿ ಮಾಲಾಶ್ರೀ

ಬೆಂಗಳೂರು: ಕ್ಯಾನ್ಸರ್ ವಿರುದ್ಧ ಹೋರಾಟ ಮಾಡಲು ಮಾನಸಿಕವಾಗಿ ಸಿದ್ಧವಾಗಬೇಕು. ಮನೋಬಲದಿಂದ ಎಂತಹ ಸಂಕಷ್ಟದಿಂದ ಬೇಕಾದರೂ ಹೊರ ಬರಬಹುದು ಎಂದು ನಟಿ ಮಾಲಾಶ್ರೀ ಹೇಳಿದರು.

ವಿಶ್ವ ಕ್ಯಾನ್ಸರ್ ದಿನದ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ಕ್ಯಾನ್ಸರ್ ವೈದ್ಯರ ತಂಡ ನಗರದಲ್ಲಿ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾದಲ್ಲಿ ಮಾತನಾಡಿದರು.

ಇದೇ ವೇಳೆ ಜೋಡಿ ರಸ್ತೆಯ ಎಚ್ ಸಿ ಜಿ ಬೆಂಗಳೂರು ಇನ್ಸಿಟಿಟ್ಯೂಟ್ ಆಫ್ ಆಂಕೊಲಾಜಿಯಿಂದ ಲಾಲ್ ಭಾಗ್ ಮತ್ತಿತರ ಪ್ರದೇಶಗಳಲ್ಲಿ ವೈದ್ಯರು, ಕ್ಯಾನ್ಸರ್ ರೋಗಿಗಳು, ರೋಗದಿಂದ ಗುಣಮುಖರಾದವರು, ಸ್ವಯಂ ಸೇವಾ ಸಂಘಟನೆಗಳ ಸದಸ್ಯರು ಜಾಥದಲ್ಲಿ ಪಾಲ್ಗೊಂಡು ಕ್ಯಾನ್ಸರ್ ರೋಗಿಗಳಲ್ಲಿ ಅರಿವು ಮೂಡಿಸಿದರು. ಕ್ಯಾನ್ಸರ್ ರೋಗಿಗಳು ವಿಶ್ವಾಸದ ಹೆಜ್ಜೆ ಹಾಕಿದರು.

ಜಾಥದಲ್ಲಿ ಎಚ್.ಸಿ.ಜಿ ಕಾರ್ಯನಿರ್ವಾಹಕ ಅಧ್ಯಕ್ಷ ಡಾ.ಬಿ.ಎಸ್. ಅಜಯ್ ಕುಮಾರ್, ಬೆಂಗಳೂರು ಸಂಚಾರ ವಿಭಾಗದ ವಿಶೇಷ ಆಯುಕ್ತ ಡಾ. ಎಂಎ ಸಲೀಂ, ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ನ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಭಿತ್ತಿಪತ್ರಗಳನ್ನು ಹಿಡಿದು ಜಾಗೃತಿ ಮೂಡಿಸಿದರು.

ಬೆಂಗಳೂರು – ಐಎಂಎ ಅಧ್ಯಕ್ಷ ಡಾ.ವೆಂಕಟಾಚಲ, ಗೌರವ ಕಾರ್ಯದರ್ಶಿ ಡಾ. ಪ್ರೇಮಿತ. ಆರ್. ಖಜಾಂಚಿ ಡಾ. ಕೆ. ಮಹೇಶ್ ಮತ್ತಿತರು ಭಾಗವಹಿಸಿದ್ದರು.


Spread the love