ಮರುವೂರು ಸೇತುವೆ ಕುಸಿತ – ಐವನ್ ಡಿಸೋಜಾ ಭೇಟಿ, ಪರ್ಯಾಯ ವ್ಯವಸ್ಥೆಗೆ ಒತ್ತಾಯ

Spread the love

ಮರುವೂರು ಸೇತುವೆ ಕುಸಿತ – ಐವನ್ ಡಿಸೋಜಾ ಭೇಟಿ, ಪರ್ಯಾಯ ವ್ಯವಸ್ಥೆಗೆ ಒತ್ತಾಯ

ಮಂಗಳೂರು: ಬಜ್ಪೆ ವಿಮಾನ ನಿಲ್ದಾಣ ರಸ್ತೆಯ 50 ವರ್ಷಗಳ ಹಿಂದಿನ ಮರವೂರು ಬ್ರಿಡ್ಜ್ ಕುಸಿತ, ಸ್ಥಳಕ್ಕೆ ಎಐಸಿಸಿ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಐವನ್ ಡಿ ಸೋಜರವರು ಭೇಟಿ ಮಾಡಿ ಪರ್ಯಾಯ ವ್ಯವಸ್ಥೆಗೆ ಲೋಕಪಯೋಗಿ ಇಲಾಖೆಗೆ ಒತ್ತಾಯ ಮಾಡಿದ್ದಾರೆ.

ಸುಮಾರು 50 ವರ್ಷಗಳ ಹಿಂದೆ ಕಟ್ಟಲ್ಪಟ್ಟ ವಿಮಾನ ನಿಲ್ದಾಣಕ್ಕೆ ಸಂಪರ್ಕ ಒದಗಿಸುವ ಏಕೈಕ ಮಂಗಳೂರು ನಗರದ ರಸ್ತೆ ಮರವೂರು ಬ್ರಿಡ್ಜ್ ಕುಸಿದುಬಿದ್ದು, ವಿಮಾನ ನಿಲ್ದಾಣಕ್ಕೆ ಸಂಪರ್ಕ ಮಾಡುವ ಜನರಿಗೆ ತೊಂದರೆಯಾಗಿದೆ. ಮಾತ್ರವಲ್ಲದೆ ವಿಮಾನ ನಿಲ್ದಾಣ ಕೈ ಸಂಪರ್ಕಿಸುವ ರಸ್ತೆಯ ಕುಸಿತ, ಲೋಕಪಯೋಗಿ ಇಲಾಖೆಯ ಕಳಪೆ ಕಾಮಾಗಾರಿ ಕೈಗನ್ನಡಿಯಾಗಿದೆ. ಪ್ರಸ್ತುತ ಪರ್ಯಾಯ ಬ್ರಿಡ್ಜ್ ಸೇತುವೆ ನಡೆಯುತ್ತಿದ್ದು, ಈ ಕಾಮಗಾರಿ ಸಂದರ್ಭದಲ್ಲಿ ಹಳೆಯ ಬ್ರಿಡ್ಜ್ ಕುಸಿತ ಕಂಡಿರುವುದು, ಹೊಸದಾಗಿ ಕಟ್ಟಲ್ಪಡುವ ಬ್ರಿಡ್ಜ್ ಕಾಮಾಗಾರಿ ಮೇಲೆ ಜನರು ಸಂಶಯ ಪಡೆಯುವಂತಾಗಿದೆ. ಮಾತ್ರವಲ್ಲದೆ, ನೂತನವಾಗಿ ಕಟ್ಟಲ್ಪಡುವ ಬ್ರಿಡ್ಜಿನ ಎರಡು ಪಿಲ್ಲರ್, ನೀರಿನ ಸೆಳೆತಕ್ಕೆ ಕಳಚಿ ಹೋಗಿದೆ. ಆದುದರಿಂದ ಲೋಕೋಪಯೋಗಿ ಇಲಾಖೆ ಈ ಬಗ್ಗೆ ಎಚ್ಚೆತ್ತು, ಸೂಕ್ತ ತಾಂತ್ರಿಕ ಸಲಹೆ ಮತ್ತು ನಿರ್ಮಾಣದ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕತೆ ಇದೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಐವನ್ ಡಿ ಸೋಜರವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಪ್ರಸ್ತುತ ಕುಸಿದಬಿದ್ದ ಬ್ರಿಡ್ಜ್ನ್ನು ಮತ್ತೆ ಪುನರ್ ನಿರ್ಮಾಣಗೊಳಿಸಿ, ಕನಿಷ್ಠ ಲಘು ವಾಹನಗಳಿಗೆ ಸಂಚರಿಸಲು ಅವಕಾಶ ಮಾಡಿಕೊಡಬೇಕೆಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಎಐಸಿಸಿ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಐವನ್ ಡಿ ಸೋಜರವರು ಮನವಿ ಮಾಡಿದ್ದಾರೆ.


Spread the love

1 Comment

  1. This road was reconstructed during Congress regime, remaintained by spending public corpus fund of 65 crores from state infrastructure funds when Ivan Dsouza was state legislature. Sand mining here began in 2016 and went uninterrupted under the congress watch, until in December 2018 a petition was filed and action on the same was intiated in June 2019. So when everything happened under congress regime why ask for compensation from present government. Hig tech dramatics

Comments are closed.