ಮರ ಏರಿ ಆತ್ಮಹತ್ಯೆಗೆ ರೈತ ಯತ್ನ

Spread the love

ಮರ ಏರಿ ಆತ್ಮಹತ್ಯೆಗೆ ರೈತ ಯತ್ನ

ಚಾಮರಾಜನಗರ: ಭತ್ತದ ಗದ್ದೆಗೆ ನೀರು ನುಗ್ಗಿ ಬೆಳೆಹಾನಿ ಆಗಿದ್ದರಿಂದ ಬೇಸತ್ತ ರೈತನೊಬ್ಬ ಜಿಲ್ಲೆಯ ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಮರ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಕೊಳ್ಳೇಗಾಲ ತಾಲೂಕಿನ ಮೋಳೆ ಗ್ರಾಮದ ರಾಮಕೃಷ್ಣ ಎಂಬ ರೈತ ಆತ್ಮಹತ್ಯೆಗೆ ಯತ್ನಿಸಿದಾತ. ಕಬಿನಿ ನಾಲೆಯ ನೀರು ಹರಿದು ರೈತ ರಾಮಕೃಷ್ಣ ಅವರ ಮೂರೂವರೆ ಎಕರೆ ಭತ್ತದ ಗದ್ದೆ ಜಲಾವೃತಗೊಂಡು ಬೆಳೆ ಸಂಪೂರ್ಣ ನಾಶ ಆಗಿತ್ತು. ಇದರಿಂದ ಬೇಸತ್ತು ರೈತ ನಗರದ ಎಸಿ ಕಚೇರಿ ಆವರಣದ ಮರ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೋಲಿಸರು ಮತ್ತು ಉಪ ವಿಭಾಗಾಧಿಕಾರಿ ಗೀತಾ ಹುಡೇದ ರೈತನ ಮನವೊಲಿಸಿ ಕೆಳಕ್ಕಿಳಿಸಿ ಅವರೊಂದಿಗೆ ಗದ್ದೆಗೆ ತೆರಳಿ ಬೆಳೆಹಾನಿ ವೀಕ್ಷಿಸಿ ತುರ್ತು ಪರಿಹಾರ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ.


Spread the love

Leave a Reply

Please enter your comment!
Please enter your name here