ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ , ವಿಜ್ರಂಭಣೆಯ ಮಕ್ಕಳ ಉತ್ಸವ

Spread the love

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ , ವಿಜ್ರಂಭಣೆಯ ಮಕ್ಕಳ ಉತ್ಸವ

ಮುಂಬಯಿ: ವಿವಿಧ ಸಂಘಟನೆಗಳ ಯುವ ಪ್ರಮುಖರನ್ನು ಒಂದೆಡೆ ಸೇರಿಸಿ ನಡೆಸುತ್ತಿರುವ ಈ ಮಕ್ಕಳ ಉತ್ಸವವು ಇತರ ಯುವ ಸಂಘಟನೆಗಳಿಗೆ ಮಾದರಿಯಾಗಲಿ ಎಂದು ತುಳು ಕೂಟ ಫೌಂಡೇಶನ್ ನಲಾಸೋಪಾರ ದ ಅಧ್ಯಕ್ಷರಾದ ಶಶಿಧರ ಕೆ. ಶೆಟ್ಟಿ ಇನ್ನಂಜೆಯವರು ನುಡಿದರು.

ಮಲಾಡ್ ಪೂರ್ವದ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಯುವ ವಿಭಾಗದ ಆಶ್ರಯದಲ್ಲಿ ಅ. 30ರಂದು ಮಲಾಡ್ ಪೂರ್ವದ ಚಿಲ್ಡ್ರನ್ಸ್ ಅಕಾಡೆಮಿ ಶಾಲೆಯ ಸಭಾಂಗಣದಲ್ಲಿ ನಡೆದ ಮಕ್ಕಳ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಿಂದ ನಡೆಸಲ್ಪಡುವ ಕಾರ್ಯಕ್ರಮದಲ್ಲಿ ತಪ್ಪುಗಳು ಆಗುವ ಸಾಧ್ಯತೆಯಿದೆ. ತಪ್ಪು ಆದರೂ ಅದನ್ನು ತಿದ್ದುಪಡಿ ಮಾಡಿ ಮಕ್ಕಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು ಎಂದರು.

ಬಂಟರ ಸಂಘ ಮುಂಬಯಿಯ ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್ ಡಿ. ಶೆಟ್ಟಿ, ಬಾಂಬೆ ಬಂಟ್ಸ್ ಅಸೋಷಿಯೇಶನಿನ ಯುವ ವಿಭಾಗದ ಕಾರ್ಯಾಧ್ಯಕ್ಷ ಶಶಿಕಾಂತ್ ರೈ, ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಯೂತ್ ವೆಲ್ಫೇರ್ ಉಪಸಮಿತಿಯ ಕಾರ್ಯಾಧ್ಯಕ್ಷ ನೀಲೇಶ್ ಪೂಜಾರಿ ಪಲಿಮಾರು, ಬಾಂಬೆ ಸೌತ್ ಕೇಂದ್ರ ಬ್ರಾಹ್ಮಿಣ್ಸ್ ಅಸೋಷಿಯೇಶನ್ ನ ಯುವ ವಿಭಾಗದ ಕಾರ್ಯಾಧ್ಯಕ್ಷ ದೀಪಕ್ ಶಿವತಾಯ, ಸಾಫಲ್ಯ ಸೇವಾ ಸಂಘ ಯುವ ವಿಭಾಗದ ಕಾರ್ಯಧ್ಯಕ್ಷೆ ಸಂಧ್ಯಾ ಪುತ್ರನ್, ಕರ್ನಾಟಕ ವಿಶ್ವಕರ್ಮ ಅಸೋಷಿಯೇಶನಿನ ಯುವ ವಿಭಾಗದ ಕಾರ್ಯಾಧ್ಯಕ್ಷ ರಾಜೇಶ್ ಆಚಾರ್ಯ, ಕುಲಾಲ ಸಂಘ ವಿದ್ಯಾರ್ಥಿ ಬಳಗದ ಕಾರ್ಯಾಧ್ಯಕ್ಷ ಸಂಜೀವ ಎನ್. ಬಂಗೇರ, ಹೆಗ್ಡೆ ಸೇವಾ ಸಂಘದ ಯುವ ವಿಭಾಗದ ಕಾರ್ಯಧ್ಯಕ್ಷ ಸಾಗರ್ ಹೆಗ್ಡೆ, ಪದ್ಮಶಾಲಿ ಸಮಾಜ ಸೇವಾ ಸಂಘದ ಯುವ ವಿಭಾಗದ ಕಾರ್ಯಧ್ಯಕ್ಷ ಜಯೇಶ್ ಶೆಟ್ಟಿಗಾರ್, ಕರ್ನಾಟಕ ವಿಶ್ವಕರ್ಮ ಅಸೋಷಿಯೇಶನ್ ನ ಅಧ್ಯಕ್ಷರಾದ ಸದಾನಂದ ಆಚಾರ್ಯ, ಕುಲಾಲ ಸಂಘ ಮುಂಬಯಿಯ ಮಾಜಿ ಅದ್ಯಕ್ಷರಾದ ಗಿರೀಷ್ ಸಾಲ್ಯಾನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಯುವ ವಿಭಾಗದ ಕಾರ್ಯದರ್ಶಿ ಸೌಮ್ಯ ಜೆ ಮೆಂಡನ್ ಸ್ವಾಗತಿಸಿದರು.

ಕಾರ್ಯಧ್ಯಕ್ಷೆ ರಶ್ಮಿ ಎಸ್ ಪೂಜಾರಿಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಮಕ್ಕಳು ಆಧುನೀಕರಣದ ಬದುಕು ರೂಪಿಸುವಲ್ಲಿ ಸಮಯದ ಅಭಾವವಿದ್ದೂ ಇಂದಿಲ್ಲಿ ವಿವಿಧ ಸಂಘಟನೆಗಳ ಯುವ ವಿಭಾಗದ ಪ್ರಮುಖರು ಒಂದೇ ವೇದಿಕೆಯಲ್ಲಿ ಸೇರಿದ್ದು ಸಂತೋಷವಾಗುತ್ತಿದೆ. ಮಾತೆ ವರಮಹಾಲಕ್ಷ್ಮಿಯು ಆಶೀರ್ವಾದ ನಮಗಿರಲಿ ಎಂದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನ್ಯಾ. ಜಗನ್ನಾಥ್ ಎನ್ ಶೆಟ್ಟಿ ಯವರು ಬೇದ ಮರೆತು ಎಲ್ಲಾ ಸಮಾಜ ಬಾಂದವರ ಯುವ ಜನಾಂಗವನ್ನು ಒಂದೆಡೆ ಸೇರಿಸಿ ಮಾಡುತ್ತಿರುವ ಈ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸುತ್ತಿರುವೆನು. ಮಕ್ಕಳ ಕಾರ್ಯಕ್ರವನ್ನು ದಿನಪೂರ್ತಿ ನಡೆಸುವ ನಮ್ಮ ಕನಸು ಇಂದು ನೆನಸಾಗುತ್ತಿದೆ. ಎಂದರು.

ವೇದಿಕೆಯಲ್ಲಿ ಸಮಿತಿಯ ಕೋಶಾಧಿಕಾರಿ ಜಗನ್ನಾಥ್ ಮೆಂಡನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಎಸ್. ವಾಗ್ಲೆ, ಯುವ ವಿಭಾಗದ ಸುದೀಪ್ ಪೂಜಾರಿ, ನವೀನ್ ಸಾಲ್ಯಾನ್, ಜೊತೆ ಕಾರ್ಯದರ್ಶಿಗಳಾದ ದಿಶಾ ಕರ್ಕೇರ, ಯೋಗೇಶ್ವರಿ ಗೌಡ ಉಪಸ್ಥಿತರಿದ್ದರು. ಅತಿಥಿಗಳನ್ನು ರೋಹಿತ್ ಪೂಜಾರಿ, ನಿಧಿ ನಾಯಕ್, ಶಾಕ್ಷಿ ಶೆಟ್ಟಿ, ವೈಷ್ಣವಿ ಸಾಫಲ್ಯ, ಐಶ್ವರ್ಯ ಪೂಜಾರಿ, ಪೂರ್ಣಿಮ, ನಿಧಿ ನಾಯಕ್, ಶೃತಿ ನಾಯಕ್, ನಿಧಿ ಶೆಟ್ಟಿ ಮತ್ತಿತರರು ಪರಿಚಯಿಸಿದರು. ಸಮಿತಿಯ ಎಲ್ಲಾ ಸಮನ್ವಯಕರು, ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರುಗಳು, ಮಹಿಳಾ ವಿಭಾಗದ ಸಂಚಾಲಕಿ ಮೋಹಿನಿ ಜೆ ಶೆಟ್ಟಿ, ಉಪ ಕಾರ್ಯಾಧ್ಯಕ್ಷರುಗಳಾದ ಶೀಲಾ ಎಂ ಪೂಜಾರಿ, ರತ್ನ ಡಿ. ಕುಲಾಲ್, ಲಲಿತ ಎಸ್ ಗೌಡ, ಕಾರ್ಯದರ್ಶಿ ಶ್ರೀಮತಿ ಕೆ ಆಚಾರ್ಯ, ಜೊತೆ ಕಾರ್ಯದರ್ಶಿಗಳಾದ ಗೀತಾ ಜೆ ಮೆಂಡನ್, ಕೃಪಾ ಜೆ ಮೂಲ್ಯ ಹಾಗೂ ಇತರ ಎಲ್ಲಾ ಸದಸ್ಯರುಗಳು ಸಹಕರಿಸಿದರು. ದಿವ್ಯ ಪೂಜಾರಿ ವಂದನಾರ್ಪಣೆಮಾಡಿದರು.

ಕಾರ್ಯಕ್ರಮವನ್ನು ಪ್ರಣಿತಾ ವರುಣ್ ಶೆಟ್ಟಿ, ಸಮಿತಿ ಯ ಸಂಚಾಲಕ ಬಿ ದಿನೇಶ್ ಕುಲಾಲ್ ನಿರೂಪಿಸಿದ್ದು ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಕ್ರಮ್ ಪಾಟ್ಕರ್ , ರುತ್ವಿ ಕುಂದರ್ ನಿರೂಪಿಸಿದರು,

ಸ್ವಾಗತ ನೃತ್ಯ, ಯಕ್ಷಗಾನ ನೃತ್ಯ, ಮಕ್ಕಳಿಂದ ಕನ್ನಡದಲ್ಲಿ ಬಾಷಣ ನಡೆಯಿತು. ಆರೋಗ್ಯದ ಬಗ್ಗೆ ಮನೋರೋಗ ತಜ್ನ ಡಾ. ಹರೀಷ್ ಶೆಟ್ಟಿ ಯವರು ಮಕ್ಕಳಿಗೆ ಸಲಹೆ ನೀಡಿದರು. ಬಂಟರ ಸಂಘ ಮುಂಬಯಿ ಎಸ್. ಎಂ. ಶೆಟ್ಟಿ ಕಾಲೇಜು ಪೊವಾಯಿ ಪ್ರಾಂಶುಪಾಲರಾದ ಡಾ. ಶ್ರೀಧರ ಶೆಟ್ಟಿ ಇವರು ಶಿಕ್ಷಣದ ಮಹತ್ವ ದ ಬಗ್ಗೆ ಮಾತನಾಡಿದರು.

ಸದಸ್ಯರಿಂದ ಪ್ಯಾಷನ್ ಶೋ, ತುಳು ಸ್ಕಿಟ್ “ಒಂಜಿ ಗಳಿಗೆ”, ನೃತ್ಯ ಮತ್ತು ಮಹಿಷ ಮರ್ಧಿನಿ ಯಕ್ಷಗಾನ ನೃತ್ಯ ರೂಪಕ, ನಾದಸ್ವರಂ ಮತ್ತು ಸೆಕ್ಸೋಫೋನ್ ಕಲಾವಿದ ಜರಿಮರಿ ದಿನೇಶ್ ಕೋಟ್ಯಾನ್ ಪ್ರಾಯೋಜಕತ್ವದಲ್ಲಿ ನವೀನ್ ಅಂಚನ್ ಇವರಿಂದ ಪಿಲಿ ನಲಿಕೆ ನಡೆಯಿತು. ಮೆಕ್ ಕೋಯ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಲಕ್ಕೀ ಡಿಪ್ ನಡೆಸಲಾಯಿತು.

ಪ್ರಣಿತಾ ಶೆಟ್ಟಿ, ದಿವ್ಯ ಪೂಜಾರಿ, ಸುದೀಪ್ ಪೂಜಾರಿ, ನವೀನ್ ಸಾಲ್ಯಾನ್, ದಿಶಾ ಕರ್ಕೇರ, ಯೋಗೇಶ್ವರಿ ಗೌಡ ಸಮಿತಿಯ ಎಲ್ಲಾ ಸಮನ್ವಯಕರು, ಮೋಹಿನಿ ಜೆ ಶೆಟ್ಟಿ, ಶೀಲಾ ಎಂ ಪೂಜಾರಿ, ರತ್ನ ಡಿ. ಕುಲಾಲ್, ಲಲಿತ ಎಸ್ ಗೌಡ, ಶ್ರೀಮತಿ ಕೆ ಆಚಾರ್ಯ, ಗೀತಾ ಜೆ ಮೆಂಡನ್, ಕೃಪಾ ಜೆ ಮೂಲ್ಯ ಮತ್ತಿತರರು ಸಹಕರಿಸಿದರು. ದಿವ್ಯ ಪೂಜಾರಿ ವಂದನಾರ್ಪಣೆಮಾಡಿದರು.

ಸಮಾರೋಪ ಸಮಾರಂಭ
ಮಕ್ಕಳ ಉತ್ಸವ ದಲ್ಲಿ ಇಂದು ಕನ್ನಡದ ಹಿರಿಯ ಶಿಕ್ಷಕಿಯನ್ನು ಸನ್ಮಾನಿಸಲಾಗಿದ್ದು ಇದು ಅರ್ಥಪೂರ್ಣವಾದ ಸನ್ಮಾನವಾಗಿದೆ. ಒರ್ವ ಶಿಕ್ಷಕಿ ಸಮಾಜಕ್ಕೆ ನೀಡುವ ಕೊಡುಗೆ ಅಪಾರ. ಅವರಿಂದ ಶಿಕ್ಷಣ ಪಡೆದರು. ಉದ್ಯಮಿಗಳಾಗುತ್ತಾರೆ, ಮಂತ್ರಿಗಳಾಗುತ್ತಾರೆ ಹೀಗೆ ಉನ್ನತ ಮಟ್ಟಕ್ಕೇರುತ್ತಾರೆ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪಾಲಕರಿಗಿಂತಲೂ ಶಿಕ್ಷಕರ ಕೊಡುಗೆ ಅಪಾರ ಎಂದು ಮೀರಾ – ಭಾಯಂಧರ್ ನಗರ ಸೇವಕ ಅರವಿಂದ ಶೆಟ್ಟಿ ಯವರು ಅಭಿಪ್ರಾಯಪಟ್ಟರು.

ದೀರ್ಘ ಕಾಲ ಮುಂಬಯಿಯ ಮನಪಾ ಕನ್ನಡ ಶಾಲೆಯಲ್ಲಿ ದುಡಿದು ಮುಖ್ಯ ಅಧ್ಯಾಪಕಿಯಾಗಿ ನಿವೃತ್ತಿಯಾದ ಅಹಲ್ಯ ಎಸ್. ಸಾಲ್ಯಾನ್ ಇವರನ್ನು ಪರಿವಾರದೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರು ಸನ್ಮಾನಿಸಿದರು. ಸನ್ಮಾನಕ್ಕ ಉತ್ತರಿಸಿದ ಅವರು ಕನ್ನಡ ಶಾಲೆಯ ಉಳಿವಿಗಾಗಿ ಮಾಡಿದ ತನ್ನ ಅನುಭವವನ್ನು ತಿಳಿಸಿದರು.

ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಎನ್ ಶೆಟ್ಟಿ ಯವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಪ್ರಣಿತಾ ಶೆಟ್ಟಿಯವರು ಎಲ್ಲರನ್ನು ಸ್ವಾಗತಿಸಿ ಬಾಬಾ ಪ್ರಸಾದ್ ಅರಸ್, ಶಾಕ್ಷಿ ಶೆಟ್ಟಿ ಮತ್ತು ವಿಕ್ರಂ ಭಟ್ ಯವರೊಂದಿಗೆ ಕಾರ್ಯಕ್ರಮವನ್ನು ನಿರೂಪಿಸಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಅಂತರಾಷ್ಟ್ರೀಯ ಖ್ಯಾತಿಯ ಜ್ಯೋತಿಷ್ಯ ಡಾ. ಎಂ. ಜೆ. ಪ್ರವೀಣ್ ಭಟ್ ಅವರು ಮಾತನಾಡುತ್ತಾ ದಿನೇಶ್ ಕುಲಾಲರ ನೇತೃತ್ವದಲ್ಲಿ ಈ ಪರಿಸರದಲ್ಲಿ ಸಮಿತಿಯ ಮೂಲಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿ. ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಇಂತಹ ಕಾರ್ಯಗಳು ಮುಂದುವರಿಯಲಿ. ನಾನು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು ನಿಮ್ಮೆಲ್ಲರ ಸಹಕಾರವಿರಲಿ ಎಂದರು.

ಅಭ್ಯುದಯ ಬ್ಯಾಂಕಿನ ಎಂ. ಡಿ. ಪ್ರೇಮನಾಥ ಸಾಲ್ಯಾನ್ ಅವರು ಮಾತನಾಡುತ್ತಾ ಕಳೆದ ಕೆಲವು ವರ್ಷಗಳಿಂದ ಯುವ ವಿಭಾಗವು ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ನನ್ನ ಯಶಸ್ವಿಗೆ ತಾಯಿಯ ಮಾರ್ಗದರ್ಶನ, ದೇವರ ಹಾಗೂ ಜನರ ಆಶೀರ್ವಾದ ಕಾರಣ. ಮಕ್ಕಳಿಗೆ ಇಂತಹ ವೇದಿಕೆಯನ್ನು ನೀಡಿದ ದಿನೇಶ್ ಕುಲಾಲ್ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸುವೆನು. ನಾನು ಮಲಾಡ್ ನಲ್ಲೇ ಹುಟ್ಟಿ ಬೆಳೆದಿದ್ದು ಈ ಸಮಿತಿಗೆ ಪ್ರಾರಂಭದಿಂದಲೇ ಬಹಳ ಹತ್ತಿರವಾಗಿದ್ದು, ಸಮಿತಿಯನ್ನು ನೋಂದಣಿಗೊಳಿಸುವಲ್ಲಿ ಸಾಧ್ಯವಾದ ಸಹಕಾರವನ್ನು ಮಾಡುವೆನು ಎಂದರು.

ಬಿಲ್ಲವರ ಅಸೋಷಿಯೇಷನ್ ಮಲಾಡ್ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್ ಕೆ. ಪೂಜಾರಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ಸಮಿತಿಯು ಬೆಳೆಯುತ್ತಾ ಇಂದಿನ ಕಾರ್ಯಕ್ರಮವು ಉತ್ಸವಕ್ಕಿಂತಲೂ ಉನ್ನತ ಮಟ್ಟದಲ್ಲಿದೆ. ಮಕ್ಕಳನ್ನು ಒಂದೆಡೆ ಸೇರಿಸಿ ಅವರಿಗೆ ತರಬೇತಿ ನೀಡಿ ವೇದಿಕೆಯಲ್ಲಿ ಕಾರ್ಯಕ್ರಮ ನೀಡುವಲ್ಲಿ ಮಕ್ಕಳ ತಂದೆ ತಾಯಂದಿರ ಪ್ರೋತ್ಸಾಹ ಮೆಚ್ಚತಕ್ಕದ್ದು ಎಂದರು. ಕಿರುತೆರೆ ಹಾಗೂ ಚಲನಚಿತ್ರ ನಟ ಹರೀಶ್ ವಾಸು ಶೆಟ್ಟಿಯವರು ಆಗಮಿಸಿದ್ದು ಮಕ್ಕಳ ಉತ್ಸವಕ್ಕೆ ಶುಭ ಕೋರಿದರು.

ಯುವ ವಿಭಾಗದ ಕಾರ್ಯಧ್ಯಕ್ಷೆ ರಶ್ಮಿ ಎಸ್ ಪೂಜಾರಿ ಯವರು ಮಾತನಾಡುತ್ತಾ ಮಕ್ಕಳ ಉತ್ಸವ ಉತ್ಸವವಾಗಿ ನಡೆಸಲು ಅದಕ್ಕೆ ದಾನಿಗಳ ಸಹಾಯ ಮರೆಯುವಂತಿಲ್ಲ. ನಮ್ಮ ಕಾರ್ಯಕ್ರಮದ ಯಶಸ್ಸಿಗೆ ಕಾರ್ಯಕಾರಿ ಸಮಿತಿ ಮತ್ತು ಮಹಿಳಾ ವಿಭಾಗ ರಾತ್ರಿ ಹಗಲು ದುಡಿದಿದೆ. ಸಮಿತಿಯಲ್ಲಿ ಉನ್ನತ ಜವಾಬ್ಧಾರಿಯನ್ನು ಹೊಂದಿದ ನಂತರ ನಾನು ಧೈರ್ಯದಿಂದ ಇಂತಹ ಸಭೆಯಲ್ಲಿ ಮಾತನಾಡಬಲ್ಲೆ. ನನ್ನ ಟೀಮ್ ನ ಎಲ್ಲಾ ಸದಸ್ಯರು ನನಗೆ ತುಂಬಾ ಪ್ರೋತ್ಸಾಹ ನೀಡಿದ್ದು ನನ್ನ ಯಶಸ್ಸಿಗೆ ಕಾರಣರಾಗಿದ್ದಾರೆ ಎನ್ನುತ್ತಾ ಎಲ್ಲರಿಗೂ ಕೃತಜ್ನತೆ ಸಲಿಸಿದರು.

ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಅವರು ದೈವಾರಾದನೆ ಮಕ್ಕಳು ಹೇಗೆ ಪಾಲಿಸಬೇಕು ಈ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಉಪಸಮಿತಿಗಳ ಪ್ರಮುಖರು, ಸಮಿತಿಯ ಪದಾಧಿಕಾರಿಗಳು, ಯುವ ವಿಭಾಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಯುವ ವಿಭಾಗದಿಂದ ಧರ್ಮದ ಬಾಲೆ ತುಳು ಧೈವ ನಾಟಕ ಪ್ರದರ್ಶನ, ನೃತ್ಯ ಕಾರ್ಯುಕ್ರಮ ಹಾಗೂ ಬಹುಮಾನ ವಿತರಣೆ ನಡೆಯಿತು.

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ ಇದರ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಎನ್ ಶೆಟ್ಟಿ ಮಾತನಾಡುತ್ತಾ ಮಕ್ಕಳ ಹೆಗಲಿಗೆ ಒಂದು ದೊಡ್ಡ ಜವಾಬ್ಧಾರಿಯನ್ನು ನೀಡಿದ್ದು ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎನ್ನುದರಲ್ಲಿ ಸಂದೇಶವಿಲ್ಲ. ಈ ಸಮಿತಿಯು ಒಂದು ಪರಿವಾರದಂತೆ. ಕಿರಿಯರು ಕೂಡಾ ಈ ಸಮಿತಿಯಲ್ಲಿದ್ದು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಯುವ ವಿಭಾಗವನ್ನು ಸ್ಥಾಪಿಸಿದ್ದೇವೆ. ಇಂದು ಯುವ ವಿಭಾಗವು ನಾವು ಎಣಿಸಿದ್ದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಕಾರ್ಯನಿರ್ವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಎಂದರು.

ಮುಖ್ಯ ಅತಿಥಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಜೊತೆ ಕಾರ್ಯದರ್ಶಿ ಪ್ರವೀಣ್ ಬೋಜ ಶೆಟ್ಟಿ, ಮಕ್ಕಳ ಕಾರ್ಯಕ್ರಮವನ್ನು ನೋಡಿ ಅತೀವ ಸಂತೋಷವಾಗಿದೆ. ಮಕ್ಕಳಿಗೆ ಅಭಿನಂದನೆಗಳು. ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಯುವ ವಿಭಾಗದ ಮಕ್ಕಳ ಉತ್ಸವವು ಮಕ್ಕಳ ವಿಕಸನಕ್ಕೆ ಹಾಗೂ ಮಕ್ಕಳ ಪ್ರತಿಭಾ ವಿಕಸನಕ್ಕೆ ಪೂರಕವಾಗಲಿ ಎಂದರು.

ಕಾರ್ಯಕ್ರಮದ ಯಶಸ್ಸಿಗೆ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಯ ಕೋಶಾಧಿಕಾರಿ ಜಗನ್ನಾಥ ಮೆಂಡನ್, ಸಂಚಾಲಕ ಬಿ ದಿನೇಶ್ ಕುಲಾಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ಭಾರತಿ ಎಸ್. ವಾಗ್ಲೆ ಮತ್ತು ಎಲ್ಲಾ ಸದಸ್ಯರುಗಳು, ಯುವ ವಿಭಾಗದ ಸಂಚಾಲಕಿ ಪ್ರಣಿತಾ ಶೆಟ್ಟಿ, ಕಾರ್ಯದರ್ಶಿ ಸೌಮ್ಯ ಜೆ ಮೆಂಡನ್, ಉಪಕಾರ್ಯಾಧ್ಯಕ್ಷರುಗಳಾದ ದಿವ್ಯ ಪೂಜಾರಿ, ಸುದೀಪ್ ಪೂಜಾರಿ, ನವೀನ್ ಸಾಲ್ಯಾನ್, ಜೊತೆ ಕಾರ್ಯದರ್ಶಿಗಳಾದ ದಿಶಾ ಕರ್ಕೇರ, ಯೋಗೇಶ್ವರಿ ಗೌಡ ಸಮಿತಿಯ ಸಮನ್ವಯಕರುಗಳಾದ ಡಾ. ಶಶಿನ್ ಆಚಾರ್ಯ, ಪವನ್ ರಾವ್, ದೀಕ್ಷಿತ್ ಪೂಜಾರಿ, ವಿಕ್ರಮ್ ಪಾಟ್ಕರ್, ಲಾಸ್ಯಾ ಕುಲಾಲ್, ಸ್ವೇತಾ ಪೂಜಾರಿ, ರುಥ್ವಿ ಕುಂದರ್, ರಥನ್ ಪೂಜಾರಿ, ಹರೀಶ್ ಕುಂದರ್, ರಾಜೇಶ್ ಮೂಲ್ಯ, ವಿನಿತ್ ಪೂಜಾರಿ, ಪ್ರಥಮ್ ಪೂಜಾರಿ, ರೋನಿತ್ ಪೂಜಾರಿ, ಶಿವಾನಿ ಪ್ರಭು, ನಿಧಿ ನಾಯ್ಕ್, ಸಾಕ್ಷಿ ಶೆಟ್ಟಿ, ವೈಷ್ಣವಿ ಸಾಫಲ್ಯ, ಪೂರ್ಣಿಮಾ ಸಾಲ್ವನ್ಕರ್, ಶ್ರುತಿ ನಾಯಕ್, ಡಾ. ನವಿತ ಸುವರ್ಣ, ನಿಧಿ ಶೆಟ್ಟಿ, ಐಶ್ವರ್ಯ ಪೂಜಾರಿ ಸದಸ್ಯರುಗಳಾದ ಸೌಮ್ಯ ಪ್ರಭು, ಲಹರಿ ಸಾಲ್ಯಾನ್, ಸ್ಮ್ರುತಿ ವಾಗ್ಲೆ, ಅಕ್ಷಯ ನಾಯಕ್, ಪ್ರಿಯಾಂಕ ಮರಕಳ, ದರ್ಶನ್ ಸಾಲ್ಯಾನ್, ನಿಶಾ ಸುವರ್ಣ, ಆದಿತ್ಯ ಸುವರ್ಣ, ಮಿತೇಶ್ ಸಾಲ್ಯಾನ್, ಆಶ್ಮಿಕಾ ಪೂಜಾರಿ, ಪ್ರಜ್ವಲ್ ನಾಯಕ್, ಸಾಕ್ಷಿ ಆಚಾರ್ಯ, ಸುಪಾಶ್ ಕುಲಾಲ್, ರಕ್ಷಿತಾ ಸುವರ್ಣ, ಪ್ರಾಜ್ನ್ಯಾ ಕುಂದರ್, ಆದಿತ್ಯ ಅಂಚನ್, ಅಶಿಶ್ ಪೂಜಾರಿ ಸಮಿತಿಯ ಸದಸ್ಯರಾದ ಸತೀಶ್ ಭಟ್, ಕುಮರೇಶ್ ಆಚಾರ್ಯ, ಮಹಾಬಲ ಪೂಜಾರಿ, ಸುಂದರ ಪೂಜಾರಿ, ದಿನೇಶ್ ಪೂಜಾರಿ ,ಸನತ್ ಪೂಜಾರಿ, ಸಿದ್ದರಾಮ ಗೌಡ, ಸುರೇಂದ್ರ ಆಚಾರ್ಯ ,ಚಂದ್ರಶೇಖರ ಶೆಟ್ಟಿ, ನಿತ್ಯಾನಂದ ಕೋಟ್ಯಾನ್, ಶೈಲೇಶ್ ಪೂಜಾರಿ, ದಿನೇಶ್ ಕುಂಬ್ಳೆ, ಗೋಪಾಲ್ ಎಂ ಪೂಜಾರಿ, ಹರೀಶ್ ಶೆಟ್ಟಿ ಪೆರಾರ , ಸುರೇಂದ್ರ ಶೆಟ್ಟಿ, ರಾಮ ಪೂಜಾರಿ, ಜಯ ಪೂಜಾರಿ, ಸೋಮನಾಥ್ ವಾಗ್ಲೆ, ಹರೀಶ್ ಪೂಜಾರಿ ಕಾರ್ನಾಡ್, ಸದಾನಂದ ಕೋಟ್ಯಾನ್, ದಿನೇಶ್ ಕಾಮತ್, ಸದಾನಂದ ರಾವ್, ಸೂರಪ್ಪ ಕುಂದರ್, ಮಂಜು ಗೌಡ, ಉಮೇಶ್ ಸಿ ಪೂಜಾರಿ, ಶಶಿಧರ್ ಹೆಗ್ಡೆ ,ಮೃತ್ಯುಂಜಯ ಪಲ್ಲಿ, ರವಿ ಮೂಲ್ಯ, ಲಕ್ಷಣ ರಾವ್, ಈಶ್ವರ ಕುಲಾಲ್, ಮಹಿಳಾ ವಿಭಾಗದ ಸಂಚಾಲಕಿ ಮೋಹಿನಿ ಜೆ ಶೆಟ್ಟಿ, ಉಪ ಕಾರ್ಯಾಧ್ಯಕ್ಷರುಗಳಾದ ಶೀಲಾ ಎಂ ಪೂಜಾರಿ, ರತ್ನ ಡಿ. ಕುಲಾಲ್, ಲಲಿತ ಎಸ್ ಗೌಡ, ಕಾರ್ಯದರ್ಶಿ ಶ್ರೀಮತಿ ಕೆ ಆಚಾರ್ಯ, ಜೊತೆ ಕಾರ್ಯದರ್ಶಿಗಳಾದ ಗೀತಾ ಜೆ ಮೆಂಡನ್, ಕೃಪಾ ಜೆ ಮೂಲ್ಯ ಹಾಗೂ ಇತರ ಎಲ್ಲಾ ಸದಸ್ಯರುಗಳು ಸಹಕರಿಸಿದರು.

– ಈಶ್ವರ ಎಂ. ಐಲ್


Spread the love