Home Mangalorean News Kannada News ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ 16 ನೇ ವಾರ್ಷಿಕ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ, ಕುಣಿತ...

ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ 16 ನೇ ವಾರ್ಷಿಕ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ, ಕುಣಿತ ಭಜನೆ

Spread the love

ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ 16 ನೇ ವಾರ್ಷಿಕ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ, ಕುಣಿತ ಭಜನೆ

ಮುಂಬಯಿ: ಮಕ್ಕಳು ಭಜನೆ ಹಾಗೂ ಕುಣಿತ ಭಜನೆಯಲ್ಲಿ ಬಾಗವಹಿಸುತ್ತಿರುವದಿಂದ ಮುಂದೆ ಅವರಲ್ಲಿ ಧಾರ್ಮಿಕ ಪ್ರಜ್ನೆ ಮೂಡುವುದು. ಅಂತಹ ಕಾರ್ಯ ನ್ಯಾ. ಜಗನ್ನಾಥ್ ಎನ್ ಶೆಟ್ಟಿ ಹಾಗೂ ದಿನೇಶ್ ಕುಲಾಲ್ ಮತ್ತು ತಂಡದ ಎಲ್ಲರಿಂದ ನಡೆಯುತ್ತಿರುವುದು ಪ್ರಶಂಸನೀಯ. ಈ ಪರಿಸರದ ಎಲ್ಲಾ ಜಾತಿಯ ಬಂಧುಗಳು ಒಗ್ಗಟ್ಟಾಗಿ ಸಂಸ್ಥೆಯನ್ನು ಮುನ್ನಡೆಸಿ ಇರುವುದು ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ನುಡಿದರು.

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ 16 ನೇ ವಾರ್ಷಿಕ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ. 10 ರಂದು ಶ್ರೀ ಸ್ವಾಮಿ ನಾರಾಯಣ ಮಂದಿರ ಸಭಾಗೃಹ, ಶಾರದಾ ಗ್ಯಾನಪೀಠ ಇಂಟರ್ನ್ಯಾಷನಲ್ ಶಾಲೆಯ ಹತ್ತಿರ, ಮಲಾಡ್ ಪೂರ್ವ ಇಲ್ಲಿ ಜರಗಿದ್ದು ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಎನ್ ಶೆಟ್ಟಿ ಪಣಿಯೂರು ಹಾಗೂ ಇತರ ಗಣ್ಯರೊಂದಿಗೆ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಮಲಾಡ್ ಇದೀಗ ಬಹಳ ಅಭಿವೃದ್ದಿಯಾಗಿದ್ದು ಇಲ್ಲಿಯವರಿಗೆ ವರಮಹಾಲಕ್ಷ್ಮಿಯ ಅನುಗ್ರಹವಿದೆ. ಒಂದು ಸಂಸ್ಥೆಯಲ್ಲಿ ನ್ಯಾ. ಜಗನ್ನಾಥ್ ಎನ್ ಶೆಟ್ಟಿ ಯವರಂತಹ ವ್ಯಕ್ತಿ 16 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ಇದು ಅವರ ಸರಳವಾದ ವ್ಯಕ್ತಿತ್ವಕ್ಕೆ ಹಾಗೂ ನಿಸ್ವಾರ್ಥ ಸೇವೆಗೆ ಸಂದ ಗೌರವ. ಸಂಪತ್ತಿನ ಅದಿದೇವತೆಯಾದ ವರಮಹಾಲಕ್ಷ್ಮೀಯ ಪೂಜೆ ಮಾಡಿದವರಿಗೆ ಕಷ್ಟ ಅಸಾಧ್ಯ. ಇದೇ ರೀತಿ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮೂಲಕ ಜನರೊಂದಿಗೆ ಸಂಮಂಧ ಬೆಳೆಯುತ್ತಿರಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಬಂಟರ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಅರ್. ಕೆ. ಶೆಟ್ಟಿಯವರು ಮಾತನಾಡುತ್ತಾ ಪೂಜಾ ಸಮಿತಿಯ ಸದಸ್ಯರ ಮಕ್ಕಳು ಶಿಕ್ಷಣವನ್ನು ಪಡೆದು ಉದ್ಯೋಗ ದೊರೆಯಲು ಸೂಕ್ತ ತರಬೇತಿ ನೀಡುವ ಬಗ್ಗೆ ನನ್ನ ಸಂಜೀವಿನಿ ಸಂಸ್ಥೆಯ ವತಿಯಿಂದ ಸರಕಾರದ ಸಹಾಯದಿಂದ ಟಾಟಾ ಸಂಸ್ಥೆಯೊಂದಿಗೆ ತರಬೇತಿ ನೀಡುವ ಬಗ್ಗೆ ಸೂಕ್ತ ಮಾರ್ಗದರ್ಶನವನ್ನು ಈ ಪರಿಸರದ ತುಳು ಕನ್ನಡಿಗರಿಗೆ ನೀಡಲು ಸಹಕರಿಸುತ್ತೇನೆ ಎಂಬ ಭರವಸೆಯನ್ನು ನೀಡಿದರು,

ಬಾಂಬೆ ಬಂಟ್ಸ್ ಅಸೋಸಿಯೇಷನ್ ನಿಕಟಪೂರ್ವ ಅಧ್ಯಕ್ಷ ಸಿ.ಎ. ಸುರೇಂದ್ರ ಶೆಟ್ಟಿ ಮಾತನಾಡುತ್ತಾ ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಕಾರ್ಯಕ್ರಮವು ನನ್ನ ಮನೆಯ ಕಾರ್ಯಕ್ರಮದಂತೆ. ಕಳೆದ 16 ವರ್ಷಗಳಿಂದ ಮಲಾಡ್ ಪರಿಸರದಲ್ಲಿ ನಮ್ಮ ತುಳು ನಾಡಿನ ಸಂಸ್ಕೃತಿಯನ್ನು ಉಳಿಸುತ್ತಾ ನಮ್ಮ ಭವ್ಯ ಭಾರತದ ಪರಂಪರೆಯನ್ನು ಉಳಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ, ಎಲ್ಲಿ ಮಹಿಳೆಯರಿಗೆ ಗೌರವ ಇದೆ ಆ ಸಂಘಟನೆಗೆ ಉತ್ತಮ ಭವಿಷ್ಯವಿದೆ, ಅದು ಇಲ್ಲಿ ಕಾಣುತ್ತಿದೆ ಎಂದರು.

ಇನ್ನೋರ್ವ ಮುಖ್ಯ ಅತಿಥಿ ಬಂಟರ ಸಂಘ ಮುಂಬಯಿಯ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್ ಮಾತನಾಡುತ್ತಾ ಇಂದು ಧರ್ಮ, ಸಂಸ್ಕೃತಿ ಉಳಿದಿದ್ದರೆ ಅದು ಬಡವರಿಂದ ಹಾಗೂ ಮಧ್ಯಮ ವರ್ಗದವರಿಂದ ಅಂತ ಹೇಳಬಹುದು. ಮೀರಾರೋಡ್ ಪರಿಸರದಲ್ಲಿ ವಾರಕ್ಕೆ ಎರಡು ಯಾ ಮೂರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ ಹಾಗೂ ಇಂತಹ ಕಾರ್ಯಕ್ರಮಗಳ ಅಗತ್ಯವೂ ಇದೆ. ಜನಸಾಮಾನ್ಯರಿಂದ ಸ್ಥಾಪನೆಗೊಂಡು ಈ ಸಂಸ್ಥೆ ದೊಡ್ಡ ಮಟ್ಟಕ್ಕೆ ಬೆಳೆದಿದೆ. ಮಹಿಳೆಯರನ್ನು ಒಗ್ಗೂಡಿಸಿ ನಡೆಸುತ್ತಿರುವ ವರಮಹಾಲಕ್ಷ್ಮಿ ಪೂಜಾ ಸಮಿತಿಗೆ ಉತ್ತಮ ಭವಿಷ್ಯವಿದೆ ಎಂದರು.

ಮುಖ್ಯ ಅತಿಥಿ ವೆಲ್ಕಮ್ ಪ್ಯಾಕೇಜಿಂಗ್ ಅಂಡ್ ಇಂಡಸ್ಟ್ರೀಸ್ ನ ಸಿಎಂಡಿ, ರವೀಂದ್ರನಾಥ್ ಎಂ. ಭಂಡಾರಿಯವರು ಮಾತನಾಡುತ್ತಾ ಈ ಸಂಘಟನೆಗೆ 16 ವರ್ಷವಾಗಿದೆ, ಆಗದೆ ಪ್ರಾಯ ಮುಖ್ಯವಲ್ಲ. ಯಾವಾಗಲು ಮನಸ್ಸಿಗೆ ಪ್ರಾಯವಾಗುದಿಲ್ಲ ಆದರೆ ಶರೀರಕ್ಕೆ ಮಾತ್ರ ಪ್ರಾಯವಾಗುತ್ತದೆ. ಧರ್ಮವನ್ನು ರಕ್ಷಿಸಿದಲ್ಲಿ ಆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ನಮ್ಮಲ್ಲಿ ದುಡು ಇದ್ದಲ್ಲಿ ಅದರ ಸ್ವಲ್ಪ ಅಂಶವನ್ನು ಸಮಾಜಕ್ಕೆ ನೀಡುವುದರ ಮೂಲಕ ಸಮಾಜದ ಋಣ ತೀರಿಸಬೇಕು ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಂಟರ ಸಂಘ ಮುಂಬಯಿಯ ಮೀರಾ ಬಾಯಂದರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಕೊಟ್ರಪ್ಪಾಡಿ ಮಾತನಾಡುತ್ತಾ ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಮಹಿಳೆಯರಿಂದ ನಡೆಯುತ್ತಿರುವ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಅಧ್ಯಕ್ಷತೆಯನ್ನು ವಹಿಸಿದ ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಎನ್ ಶೆಟ್ಟಿ ಯವರು ಎಲ್ಲರನ್ನು ಸ್ವಾಗತಿಸಿದರು.

ಸಂಜೆ ಯಕ್ಷಗುರು ನಾಗೇಶ ಪೋಳಲಿಯವರ ನಿರ್ದೇಶನದಲ್ಲಿ ಶ್ರೀ ಶನಿಮಹಾತ್ಮೆ ತಾಳಮದ್ದಳೆ ನಡೆಯಿತು. ವೇದಿಕೆಯಲ್ಲಿ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಕಾರ್ಯ ಅಧ್ಯಕ್ಷ ಶ್ರೀನಿವಾಸ್ ಸಾಪಲ್ಯ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಅಧ್ಯಕ್ಷ ರವೀಶ್ ಆಚಾರ್ಯ, ಭಾರತ್ ಬ್ಯಾಂಕಿನ ನಿರ್ದೇಶಕ ಪೂಜಾ ಸಮಿತಿಯ ಉಪಾಧ್ಯಕ್ಷ ಸಂತೋಷ್ ಕೆ ಪೂಜಾರಿ, ಪೂಜಾ ಸಮಿತಿಯಕಾರ್ಯದರ್ಶಿ ಸನತ್ ಪೂಜಾರಿ, ಖಜಾಂಚಿ ಸುರೇಂದ್ರ ಆಚಾರ್ಯ, ಯುವ ವಿಭಾಗದ ಕಾರ್ಯಾಧ್ಯಕ್ಷ ಸುದೀಪ್ ಡಿ. ಪೂಜಾರಿ, ಸಮಿತಿಯ ಉಪಾಧ್ಯಕ್ಷರುಗಳಾದ ವಿ. ಕುಮಾರೇಶ್ ಆಚಾರ್ಯ, , ಜಗನ್ನಾಥ್ ಎಚ್. ಮೆಂಡನ್, ದಿನೇಶ್ ಪೂಜಾರಿ, ಸಂಚಾಲಕ ದಿನೇಶ್ ಕುಲಾಲ್, ಸಹ ಕಾರ್ಯದರ್ಶಿ ಲಕ್ಷ್ಮಣ್ ರಾವ್, ಸಹ ಖಜಾಂಚಿ ಸುಂದರ್ ಪೂಜಾರಿ,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಕೆ. ಆಚಾರ್ಯ ಪಾಲ್ಗೊಂಡಿದ್ದರು,

ಸಮಾರೋಪ ಸಮಾರಂಭ :

ಬಡತನ ನಿರ್ಮೂಲನೆ ಹಾಗೂ ಲಕ್ಷೀಯ ಆರಾದನೆಗೆ ಮಾಡುವ ಪೂಜೆ ವರಮಹಾಲಕ್ಷ್ಮೀ ಪೂಜೆ, ಈ ಪೂಜೆ ಸಾರ್ಥಕವಾಗಲು ಮಹಿಳೆಯರು ತಮ್ಮ ಯಜಮಾನನನ್ನು ತಮ್ಮೊಂದಿಗೆ ಪೂಜೆಗೆ ಕರೆತರಬೇಕು. ಮಹಿಳೆಗೆ ಸ್ವಾತಂತ್ಯ ಇಲ್ಲ ಅನ್ನುತ್ತಾರೆ. ಸಣ್ಣ ಮಗು ಇರುವಾಗ ಆ ಮಗುವನ್ನು ತಾಯಿ ರಕ್ಷಿಸಬೇಕು. ಯೌವನಾವಸ್ತೆಗೆ ಬಂದ ನಂತರ ಆಕೆಯನ್ನು ಗಂಡ ರಕ್ಷಿಸಬೇಕು. ಪ್ರಾಯವಾದ ನಂತರ ವೃದ್ದಾಶ್ರಮಕ್ಕೆ ಸೇರಿಸದೆ ಮಕ್ಕಳು ಆಕೆಯನ್ನು ರಕ್ಷಿಸಬೇಕು. ಎಲ್ಲಿ ಹೆಣ್ಣೆಗೆ ಗೌರವ ಇದೆ ದೇವತೆಗಳು ಅಲ್ಲಿ ಖುಷಿಯಿಂದ ನಲಿಯುತ್ತಾರೆ ಎಂದು ಕಟೀಲು ಕ್ಷೇತ್ರ ದ ಪ್ರಧಾನ ಅರ್ಚಕರಾದ, ಶ್ರೀಹರಿನಾರಾಯಣದಾಸ ಅಸ್ರರಣ್ಣ ರು ನುಡಿದರು.

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ 16 ನೇ ವಾರ್ಷಿಕ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ. 10 ರಂದು ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಎನ್ ಶೆಟ್ಟಿ ಪಣಿಯೂರು ಇವರ ಅಧ್ಯಕ್ಷತೆಯಲ್ಲಿ ಶ್ರೀ ಸ್ವಾಮಿ ನಾರಾಯಣ ಮಂದಿರ ಸಭಾಗೃಹ, ಮಲಾಡ್ ಪೂರ್ವ ಇಲ್ಲಿ ಜರಗಿದ್ದು ಆಶೀರ್ವಚನ ನೀಡಿದ ಅಸ್ರರಣ್ಣರು ಸನಾತನ ಪದ್ದತಿ ಪ್ರಕಾರ ಮಾತೃ, ಪಿತೃ, ಆಚಾರ್ಯ ಮತ್ತು ಅತಿಥಿ ದೇವೋಭವ ಎಂದಿದ್ದು, ಮಾತೆಗೆ ಇಲ್ಲಿ ಪ್ರಥಮ ಸ್ಥಾನ ನೀಡಲಾಗಿದೆ. ಸ್ವಾಮೀಜಿಗಳು ತಮ್ಮ ತಾಯಿಗೆ ನಮಸ್ಕರಿಸುತ್ತಾರೆ. ತಾಯಿಗೆ ಈ ರೀತಿಯ ಗೌರವ ನೀಡುವಂತಹ ಧರ್ಮ ಇದ್ದರೆ ಅದು ನಮ್ಮ ಸನಾತನ ಧರ್ಮ. ಸಹದರ್ಮಿಣೀಯೊಂದಿಗಿರುವ ಮನೆ ಅದನ್ನು ಮನೆ ಎನ್ನಬಹುದು. ಗಂಡ ಮಾಡಿದ ಪಾಪ ಹೆಂಡತಿಗಿಲ್ಲ. ಹೆಂಡತಿ ಮಾಡಿದ ಪಾಪದಲ್ಲಿ ಗಂಡನಿಗೆ ಸಮಪಾಲು. ಮಹಿಳೆಯನ್ನು ಪೂರ್ಣ ಪ್ರಮಾಣದಲ್ಲಿ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಅಂತಹ ಮಹಿಳೆಯರಿಗೆ ದೇವರ ಧರ್ಮದ ಅಧಿಕಾರವಿದ್ದು ವರಮಹಾಲಕ್ಷ್ಮೀ ವೃತವನ್ನಾಚರಿಸುತ್ತಾರೆ. ದಾನ ಧರ್ಮ ಮಾಡುವುದರಿಂದ ಬಡತನ ನಿರ್ಮೂಲನೆ ಸಾಧ್ಯ. ನಮಗೆ ಸಿಕ್ಕಿದ ಹಣವನ್ನು ಐದು ಪಾಲು ಮಾಡಿ ಅದರಲ್ಲಿ ಒಂದು ಪಾಲನ್ನು ದಾನ ಮಾಡಬೇಕು. ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮನೋರಂಜನೆ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದು ಜನರು ಮನೋರಂಜನೆಯತ್ತ ಸರಿಯುತ್ತಿದ್ದು ದೇವಸ್ಥಾನದ ಪೂಜಾ ಸ್ಥಳದಲ್ಲಿ ಕೇವಲ ಕೆಲವರನ್ನೇ ಕಾಣಬಹುದು. ಇಂದಿಲ್ಲಿ ತಾಳ ಮದ್ದಳೆ ನಡೆದಿದ್ದು ನಿಜಕ್ಕೂ ಇದಕ್ಕೆ ಅರ್ಥವಿದ

ಪೂಜಾ ಸಮಿತಿಯ ಹಿರಿಯ ಸದಸ್ಯ ಜಗನ್ನಾಥ್ ಎಚ್. ಮೆಂಡನ್ ದಂಪತಿ ಮತ್ತು ದಿವಾಕರ್ ಶೆಟ್ಟಿಗಾರ್ (ಗುರುಸ್ವಾಮಿ) ಇವರನ್ನು ವೇದಿಕೆಯ ಎಲ್ಲ ಗಣ್ಯರು ಸನ್ಮಾನಿಸಿದರು. ಪರಿಸರದ ಎಸ್.ಎಸ್.ಸಿ ಮತ್ತು ಎಚ್.ಎಸ್.ಸಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಪೌರೋಹಿತ್ಯದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆಯು ನಡೆಯಿತು. ಸುಮಂಗಲೆಯರು ನೂರಾರು ಸಂಖ್ಯೆಯಲ್ಲಿ ಬಾಗವಹಿಸಿದರು.

ಯಕ್ಷಗುರು ನಾಗೇಶ ಪೋಳಲಿಯವರ ನಿರ್ದೇಶನದಲ್ಲಿ ಸಮಿತಿಯ ಮಹಿಳೆಯರಿಂದ ಶ್ರೀ ಶನಿಮಹಾತ್ಮೆ ತಾಳಮದ್ದಳೆ ನಡೆಯಿತು.

ವೇದಿಕೆಯಲ್ಲಿ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಶ್ರೀನಿವಾಸ್ ಸಾಪಲ್ಯ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಅಧ್ಯಕ್ಷ ರವೀಶ್ ಆಚಾರ್ಯ, ಭಾರತ್ ಬ್ಯಾಂಕಿನ ನಿರ್ದೇಶಕ ಪೂಜಾ ಸಮಿತಿಯ ಉಪಾಧ್ಯಕ್ಷ ಸಂತೋಷ್ ಕೆ ಪೂಜಾರಿ, ಪೆರಾರ ಬಾಬು ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಪೂಜಾ ಸಮಿತಿಯಕಾರ್ಯದರ್ಶಿ ಸನತ್ ಪೂಜಾರಿ, ಖಜಾಂಚಿ ಸುರೇಂದ್ರ ಆಚಾರ್ಯ, ಯುವ ವಿಭಾಗದ ಕಾರ್ಯಾಧ್ಯಕ್ಷ ಸುದೀಪ್ ಡಿ. ಪೂಜಾರಿ, ಸಮಿತಿಯ ಉಪಾಧ್ಯಕ್ಷರುಗಳಾದ ವಿ. ಕುಮಾರೇಶ್ ಆಚಾರ್ಯ, ದಿನೇಶ್ ಪೂಜಾರಿ, ಸಹ ಕಾರ್ಯದರ್ಶಿ ಲಕ್ಷ್ಮಣ್ ರಾವ್, ಸಹ ಖಜಾಂಚಿ ಸುಂದರ್ ಪೂಜಾರಿ,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಕೆ. ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು,

ಕಾರ್ಯಕ್ರಮ ಯಶಸ್ವಿಗೆ, ಪೂಜಾ ಸಮಿತಿಯ , ಸಿದ್ದರಾಮ ಗೌಡ, ಈಶ್ವರ ಕುಲಾಲ್, ಮೃತ್ಯುಂಜಯ್ ಪಳ್ಳಿ, ನಿತ್ಯಾನಂದ ಕೋಟ್ಯಾನ್, ಗೋಪಾಲ ಪೂಜಾರಿ, ದಿನೇಶ್ ಕಾಮತ್, ಪ್ರತಿಕ್ ಜೆ. ಶೆಟ್ಟಿ, ಚಂದ್ರಶೇಖರ ಶೆಟ್ಟಿ, , ಶ್ರೀಪತಿ ಪಾಟ್ಕರ್, ಹರೀಶ್ ಶೆಟ್ಟಿ ಪೆರಾರ, ಸದಾನಂದ ಕೋಟ್ಯಾನ್, ಸುರೇಂದ್ರ ಶೆಟ್ಟಿ ಹೊಸ್ಮಾರು, , ಜಯ ಪೂಜಾರಿ, , ಸದಾನಂದ ರಾವ್, ಹರೀಶ್ ಪೂಜಾರಿ ಕಾರ್ನಾಡ್, , ನಿತ್ಯಾನಂದ ಪೂಜಾರಿ, ಶಶಿಧರ್ ಹೆಗ್ಡೆ, , ಗೋಪಾಲ ಶೆಟ್ಟಿಗಾರ್, ರಘುರಾಂ ನಾಯಕ್, , ಯೋಗೇಶ್ ಬಂಗೇರಾ, ಗಣೇಶ್ ನಾಯ್ಕ್,ಮಹಿಳಾ ವಿಭಾಗ ದ ಉಪಾಧ್ಯಕ್ಷರುಗಳಾದ ಗೀತಾ ಜೆ. ಮೆಂಡನ್, ಲಲಿತಾ ಎಸ್. ಗೌಡ, ಸಂಧ್ಯಾ ಎಸ್. ಪ್ರಭು, ಕಾರ್ಯದರ್ಶಿ ಶೀಲಾ ಎಂ. ಪೂಜಾರಿ, ಕೋಶಾಧಿಕಾರಿ ನಳಿನಿ ಪಿ. ಕಾರ್ಕೇರ, ಜೊತೆ ಕೋಶಾಧಿಕಾರಿಗಳಾದ ಶೋಭಾ ಎಲ್. ರಾವ್, ವಿದ್ಯಾ ಎಸ್. ನಾಯಕ್, ಜೊತೆ ಕಾರ್ಯದರ್ಶಿಗಳಾದ ಭಾರತಿ ಎಸ್. ಆಚಾರ್ಯ, ವಿದ್ಯಾ ಡಿ. ಆಚಾರ್ಯ, ಸಲಹೆಗಾರರಾದ ಮೊಹಿನಿ ಜೆ. ಶೆಟ್ಟಿ ಮತ್ತು ರತ್ನಾ ಡಿ. ಕುಲಾಲ್, ಯುವ ವಿಭಾಗದ ಉಪ ಕಾರ್ಯಾಧ್ಯಕ್ಷರುಗಳಾದ ಪ್ರಣೀತಾ ವಿ. ಶೆಟ್ಟಿ, ನವಿನ್ ಯು. ಸಾಲಿಯನ್, ನಿಧಿ ಜಿ. ನಾಯಕ್, ದಿಶಾ ಪಿ. ಕಾರ್ಕೇರ, ಕಾರ್ಯದರ್ಶಿ ರಾಜೇಶ್ ಕೆ. ಮೂಲ್ಯ, ಕೋಶಾಧಿಕಾರಿ ಶಿವಾನಿ ಎಸ್. ಪ್ರಭು, ಸಂಚಾಲಕ ಡಾ. ಶಶಿನ್ ಕೆ. ಆಚಾರ್ಯ, ಸಾಮಾಜಿಕ ಮಾಧ್ಯಮದ ಹರ್ಷ್ ಎಂ. ಕುಂದರ್ , ಜೊತೆ ಕಾರ್ಯದರ್ಶಿಗಳಾದ ಪ್ರತಮ್ ಆರ್. ಪೂಜಾರ್, ಶ್ವೇತಾ ಎಸ್. ಪೂಜಾರಿ, ಜೊತೆ ಕೋಶಾಧಿಕಾರಿಗಳಾದ ದೀಕ್ಷಿ

ಮಲಾಡ್ ಕುರಾರ್ ವಿಲೇಜ್ ನ ಅಭಿವೃದ್ಧಿಗೆ ಸಮಿತಿಯ ಸೇವಾ ಕಾರ್ಯಗಳು ಪೂರಕವಾಗಿದೆ: ನ್ಯಾಯವಾದಿ ಜಗನ್ನಾಥ್ ಶೆಟ್ಟಿ ಪಣಿಯೂರು .

ಪೂಜಾ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಈ ಪರಿಸರದ ತುಳು ಕನ್ನಡಿಗರು ಮಕ್ಕಳು ಮಹಿಳೆಯರು ತಮ್ಮ ಕಲಾ ಪ್ರತಿಭೆಗಳು ಅನಾವರಣಗೊಳ್ಳಲು ಸಹಕಾರಿಯಾಗಿದೆ.. ಅಲ್ಲದೆ ಧಾರ್ಮಿಕ ಪ್ರಜ್ಞೆ ಹೆಚ್ಚಿಸುವಲ್ಲಿ ನಮ್ಮ ಸಮಿತಿ ಸಕ್ರಿಯವಾಗಿದೆ. 16 ವರ್ಷ ಕಾರ್ಯಗಳು ದಾನಿಗಳ ಸಹಕಾರ ಮತ್ತು ಸದಸ್ಯರ ಬೆಂಬಲ ಮುಖ್ಯ ಕಾರಣವಾಗಿದೆ . ಮಲಾಡ್ ಕುರಾರ್ ವಿಲೇಜ್ ನ ಅಭಿವೃದ್ಧಿಗೆ ಸಮಿತಿಯ ಸೇವಾ ಕಾರ್ಯಗಳು ಪೂರಕವಾಗಿದೆ.

-ನ್ಯಾ. ಜಗನ್ನಾಥ ಎಂ ಶೆಟ್ಟಿ ಪಣಿಯೂರು. ಅಧ್ಯಕ್ಷರು ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ, ಮಲಾಡ್

ವರದಿ : ಈಶ್ವರ ಎಂ. ಐಲ್ / ದಿನೇಶ್ ಕುಲಾಲ್

ಚಿತ್ರ : ಭಾಸ್ಕರ ಕಾಂಚನ್


Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
Inline Feedbacks
View all comments
wpDiscuz
0
0
Would love your thoughts, please comment.x
()
x
Exit mobile version