
ಮಲೇಷ್ಯಾದಲ್ಲಿ ತ್ರೋಬಾಲ್ ಪಂದ್ಯಾಕೂಟ: ಉಪ್ಪಿನಕೋಟೆ ಮಸೀದಿಯಿಂದ ವೈಷ್ಣವಿಗೆ ಆರ್ಥಿಕ ನೆರವು
ಬ್ರಹ್ಮಾವರ: ಕ್ರೀಡಾ ಪಟು ವೈಷ್ಣವಿ ಮಲೇಷ್ಯಾದಲ್ಲಿ ನಡೆಯಲಿರುವ ವರ್ಲ್ಡ್ ಕ್ಲಬ್ ತ್ರೋಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಉಪ್ಪಿನಕೋಟೆ ಜಾಮಿಯಾ ಮಸೀದಿ ವತಿಯಿಂದ ಆರ್ಥಿಕ ನೆರವನ್ನು ನೀಡಲಾಯಿತು.
ಹಾರಾಡಿ ಗ್ರಾಮದ ಗೋವಿಂದ ಮೆಂಡನ್ ಮತ್ತು ಬೇಬಿ ಸುವರ್ಣ ದಂಪತಿ ಪುತ್ರಿ ವೈಷ್ಣವಿ ತ್ರೋಬಾಲ್ ಪಂದ್ಯಕೂಟದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿದ್ದರು. ಇವರು ಈಗ ಮಲೇಷ್ಯಾದಲ್ಲಿ ನಡೆಯಲಿರುವ ವರ್ಲ್ಡ್ ಕ್ಲಬ್ ತ್ರೋಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು. ಧನ ಸಹಾಯ ನೀಡುವಂತೆ ಉಪ್ಪಿನಕೋಟೆ ಜಾಮಿಯ ಮಸೀದಿಗೆ ಸಲ್ಲಿಸಿದ್ದರು.
ಈ ಮನವಿಗೆ ಸ್ಪಂದಿಸಿಬಜಾಮಿಯಾ ಮಸೀದಿ ಹಾಗೂ ಜಮಾತ್ ಬಾಂಧವರ ಸಹಾಯದಿಂದ15000 ರೂಪಾಯಿ ಧನ ಸಹಾಯವನ್ನು ಅವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಉಪ್ಪಿನಕೋಟೆ ಜಾಮಿಯಾ ಮಸೀದಿ ಉಪಾಧ್ಯಕ್ಷ ತಾಜುದ್ದೀನ್ ಇಬ್ರಾಹಿಂ, ಕಾರ್ಯದರ್ಶಿ ಮೊಹಮ್ಮದ್ ಕಾಕ ,ತ್ಯಯಬ್ ಅಲಿ ಹಾಗೂ ಆರ್ಷದ್ ಶುಕುರ್ ಉಪಸ್ಥಿತರಿದ್ದರು.