ಮಲ್ಪೆ : ಇನ್ಸುಲೇಟರ್ ವಾಹನ – ದ್ವಿಚಕ್ರ ವಾಹನ ನಡುವೆ ಅಫಘಾತ – ಸವಾರ ಸಾವು

Spread the love

ಮಲ್ಪೆ : ಇನ್ಸುಲೇಟರ್ ವಾಹನ – ದ್ವಿಚಕ್ರ ವಾಹನ ನಡುವೆ ಅಫಘಾತ – ಸವಾರ ಸಾವು

ಉಡುಪಿ: ಇನ್ಸುಲೇಟರ್ ವಾಹನವೊಂದು ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ವಡಬಾಂಡೇಶ್ವರ ತೊಟ್ಟಂ ರಸ್ತೆಯ ತಿರುವಿನಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ದ್ವಿಚಕ್ರ ವಾಹನ ಸವಾರ ಹೂಡೆ ನಿವಾಸಿ ಇಸಾಕ್ ಎಂದು ಗುರುತಿಸಲಾಗಿದೆ.

ಮಾಹಿತಿಗಳ ಪ್ರಕಾರ ವಡಬಾಂಡೇಶ್ವರ ತೊಟ್ಟಂ ರಸ್ತೆಯ ತಿರುವಿನಲ್ಲಿ ಇನ್ಸುಲೇಟರ್ ವಾಹನ ಎದುರಿನಿಂದ ಬರುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ವಾಹನ ಸವಾರ ಮೃತಪಟ್ಟಿದ್ದಾರೆ.
ಇನ್ಸುಲೇಟರ್ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬಳಿಕ ಇನ್ನೊಂದು ವಾಹನಕ್ಕೆ ಕೂಡ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love