ಮಲ್ಪೆ: ಏರ್ ಗನ್ ನಿಂದ ಸಾಕು ನಾಯಿಯ ಹತ್ಯೆ – ಬಂಧನ

Spread the love

ಮಲ್ಪೆ: ಏರ್ ಗನ್ ನಿಂದ ಸಾಕು ನಾಯಿಯ ಹತ್ಯೆ – ಬಂಧನ

ಉಡುಪಿ: ಸಾಕು ನಾಯಿಯನ್ನು ಗುಂಡಿಟ್ಟು ಕೊಂದ ಆರೋಪದ ಮೇಲೆ ವ್ಯಕ್ತಿಯೋರ್ವರನ್ನು ಮಲ್ಪೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಕೆಮ್ಮಣ್ಣು ಮೂಡು ತೋನ್ಸೆ ನಿವಾಸಿ ಗುಂಡಪ್ಪ ಪೂಜಾರಿಯವರು ಶುಕ್ರವಾರ ಬೆಳಿಗ್ಗೆ   ಕೆಮ್ಮಣ್ಣುವಿನ ಹಾಲು ಡೈರಿಯಿಂದ ವಾಪಸ್ಸು ಮನೆಯಾದ ಮೂಡುತೋನ್ಸೆಗೆ ನಡೆದುಕೊಂಡು ಹೋಗುವಾಗ ಅವರ ಸಾಕು ನಾಯಿಯು ಅವರನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದು, ಕೆಮ್ಮಣ್ಣು ನಿಡಂಬಳ್ಳಿ ಕಲ್ಯಾಣಪುರ ಸಾರ್ವಜಿನಿಕ ರಸ್ತೆಯಲ್ಲಿ ಹೋಗುತ್ತಿರುವಾಗ ನಿಡಂಬಳ್ಳಿ ನಿವಾಸಿಯಾದ ಬ್ರಾನ್ ಡಿಸೋಜಾ ಎಂಬವರು ಅವರ ಮನೆಯ ಎದುರು ರಸ್ತೆಯ ಬದಿಯಲ್ಲಿ ನಿಂತುಕೊಂಡು ಆವರ ಕೈಯಲ್ಲಿದ್ದ ಏರ್ ಗನ್ ನಿಂದ ಗುಂಡಪ್ಪ ಪೂಜಾರಿಯವರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಅವರ ಸಾಕು ನಾಯಿಗೆ ಶೂಟ್ ಮಾಡಿದ ಪರಿಣಾಮ ನಾಯಿಯ ಬಲಬದಿಯ ಹೊಟ್ಟೆಗೆ ಗಾಯ ಉಂಟಾಗಿ ನಾಯಿಯು ಬೊಬ್ಬೆ ಹೊಡೆಯುತ್ತಾ ಅಲ್ಲೆ ಸಮೀಪದ ತೆರೇಸಾ ರವರ ಮನೆಯ ಅಂಗಳದಲ್ಲಿ ಮೃತ ಪಟ್ಟಿರುತ್ತದೆ ಎಂದು ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಗುಂಡಪ್ಪ ಪೂಜಾರಿಯವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಮಲ್ಪೆ ಪೊಲೀಸರು ಬ್ರಾನ್ ಡಿಸೋಜಾರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.


Spread the love