
ಮಲ್ಪೆ: ಜೂಜಾಟ ಕೇಂದ್ರಕ್ಕೆ ಪೊಲೀಸರ ದಾಳಿ – 18 ಮಂದಿ ವಶಕ್ಕೆ
ಉಡುಪಿ: ಮಲ್ಪೆ ಠಾಣಾ ವ್ಯಾಪ್ತಿಯ ಕೊಡವೂರು ಬಳಿ ಕಾನೂನು ಬಾಹಿರವಾಗಿ ಜೂಜಾಟವಾಡುತ್ತಿದ್ದಾಗ ಪೋಲಿಸ್ ಅಧಿಕಾರಿಗಳು ದಾಳಿ ನಡೆಸಿ 18 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದ ಆರೋಪಿಗಳನ್ನು ನಾಗೇಶ್, ರಾಜೇಶ್, ಮಧುಸೂಧನ್, ಸತೀಶ್ ಕುಂದರ್, ರಾಧಾಕೃಷ್ಣ ನಾಯರ್, ಶಂಕರ್ ಕೋಟ್ಯಾನ್, ಸಂಗಯ್ಯ, ಶಂಕರಪ್ಪ ರೇವಣ್ಣ ಬ್ಯಾಡಗಿ, ಬಸವರಾಜ್ ಬಸಪ್ಪ ಹೂಡೆದ್, ಮಹಮ್ಮದ್ ಹನೀಫ್, ಜಾಕ್ರಿಯಾ, ಸಂತೋಷ್ ಶೆಟ್ಟಿ, ಯಶವಂತ ಮೊಗವೀರ, ರಾಜೇಶ್ ಸಫಲಿಗ, ಭಾಸ್ಕರ, ಹನುಮಂತ, ಜಗನ್ನಾಥ, ಸಿರಾಜ್ ಎಂದು ಗುರುತಿಸಲಾಗಿದೆ.
ಮಲ್ಪೆ ಠಾಣಾ ವ್ಯಾಪ್ತಿಯ ಕೊಡವೂರು ಮೀನಾಕ್ಷಿ ಹೋಟೆಲ್ ಹಿಂಬದಿಯ ಕಟ್ಟಡದ ರೂಮಿನ ಬಳಿ ಉಡುಪಿ ಸೆನ್ ಪೊಲೀಸ್ ಠಾಣೆಯ ನೀರಿಕ್ಷಕರಾದ ಎಸ್ ಹೆಚ್ ಭಜಂತ್ರಿ ಮತ್ತು ಅವರ ಸಿಬಂದಿಗಳು ದಾಳಿ ನಡೆಸಿ ಕಾನೂನು ಬಾಹಿರವಾಗಿ ಇಸ್ಪೀಟು ಜುಗಾರಿ ಆಟದಲ್ಲಿ ತೊಡಗಿದ 18 ಜನರನ್ನು ವಶಕ್ಕೆ ಪಡೆದು ರೂ 1,72,080 ನಗದು 18 ಮೊಬೈಲ್ ಹಾಗೂ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ.
ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.