
Spread the love
ಮಲ್ಪೆ: ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ರೂ 4 ಲಕ್ಷ ವಶಕ್ಕೆ
ಉಡುಪಿ: ಕಾರೊಂದರಲ್ಲಿ ದಾಖಲೆಗಳು ಇಲ್ಲದೆ ಸಾಗಿಸುತ್ತಿದ್ದ 4 ಲಕ್ಷ ರೂ ಹಣವನ್ನು ಪೊಲೀಸರು ಮಾರ್ಚ್ 24 ರಂದು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರು ಚೆಕ್ ಪೋಸ್ಟಿನಲ್ಲಿ ವಶಪಡಿಸಿಕೊಂಡಿದ್ದಾರೆ.
ಚುನಾವಣಾ ಹಿನ್ನಲೆಯಲ್ಲಿ ನೇಜಾರು ಚೆಕ್ ಪೋಸ್ಟ್ ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ಕೆಮ್ಮಣ್ಣು ಕಡೆಯಿಂದ ಸಂತೆಕಟ್ಟೆ ಕಡೆಗೆ ಸಂತೋಷ್, ಕಿರಣ್ ಲೋಬೊ ಮತ್ತು ರೇಖಾ ಲೋಬೊ ಎಂಬವರು ಪ್ರಯಾಣಿಸುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಕಾರಿನ ಹಿಂಬದಿಯ ಡಿಕ್ಕಿಯಲ್ಲಿ ಒಟ್ಟು ರೂ 4 ಲಕ್ಷ ಹಣ ಪತ್ತೆಯಾಗಿದೆ. ಈ ಪತ್ತೆ ವಿಚಾರಿಸಿದಾಗ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಸೂಕ್ತ ದಾಖಲಾತಿ ಇಲ್ಲದೆ ಇದ್ದು ಆ ಹಿನ್ನಲೆಯಲ್ಲಿ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Spread the love