ಮಲ್ಪೆ: ಮೀನು ಮಾರಾಟಕ್ಕೆ ತೆರಳುತ್ತಿದ್ದ ಮಹಿಳೆಯ ಚಿನ್ನದ ಸರ ಎಳೆದು ಪರಾರಿ

Spread the love

ಮಲ್ಪೆ: ಮೀನು ಮಾರಾಟಕ್ಕೆ ತೆರಳುತ್ತಿದ್ದ ಮಹಿಳೆಯ ಚಿನ್ನದ ಸರ ಎಳೆದು ಪರಾರಿ

ಮಲ್ಪೆ: ಮೀನು ಮಾರಾಟಕ್ಕಾಗಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ 5 ½ ಪವನ್ ತೂಕದ ಚಿನ್ನದ ಸರ ಎಳೆದೊಯ್ದ ಘಟನೆ ಮಲ್ಪೆ ಠಾಣಾ ವ್ಯಾಪ್ತಿಯ ಪಡುಕೆರೆ ಬಳಿ ಮಂಗಳವಾರ ಬೆಳಗಿನ ಜಾವ ನಡೆದಿದೆ.

ಮಂಗಳವಾರ ಬೆಳಗಿನ ಜಾವ 4.40 ಗಂಟೆಗೆ ಪಡುಕೆರೆ ನಿವಾಸಿ ಯುಮುನ ಎಂಬವರು ಮೀನು ಮಾರಾಟದ ಸಲುವಾಗಿ ತನ್ನ ಮನೆಯಿಂದ ಪಡುಕೆರೆ ರಸ್ತೆಯ ಕಡೆಗೆ ಹೊರಟು ರಾಮಕೃಷ್ಣ ರವರ ಮನೆಯ ಎದುರು ತೆಂಗಿನ ತೋಟದಲ್ಲಿ ನಡೆದುಕೊಂಡು ಬರುತ್ತಿರುವಾಗ ವ್ಯಕ್ತಿಯೋರ್ವ ಯುಮುನರನ್ನು ಹಿಂದಿನಿಂದ ಬಂದು ಹಿಡಿದು ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದಿದ್ದು, ಯುಮುನಾ ಅವರನ್ನು ನೆಲಕ್ಕೆ ದೂಡಿ ಹಾಕಿ ಸರ ಎಳೆದುಕೊಂಡು ಸ್ಕೂಟರ್ ನಲ್ಲಿ ಓಡಿ ಹೋಗಿದ್ದಾನೆ. ಕುತ್ತಿಗೆಯಿಂದ ಕಿತ್ತುಕೊಂಡು ಹೋದ ಚಿನ್ನದ ಸರ 5 ½ ಪವನ್ ತೂಕವಿದ್ದು, ಮೌಲ್ಯ ಸುಮಾರು ರೂಪಾಯಿ 1,95,000/- ಆಗಿರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.


Spread the love