
ಮಲ್ಪೆ: ಸೆಂಟ್ರಿಂಗ್ ಕೆಲಸದ ಸಾಮಾಗ್ರಿಗಳ ಕಳ್ಳತನದ ಆರೋಪಿಗಳ ಬಂಧನ
ಉಡುಪಿ: ಸೆಂಟ್ರಿಂಗ್ ಕೆಲಸದ ಸಾಮಾಗ್ರಿಗಳನ್ನು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿ ಮಲ್ಪೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಪುತ್ತೂರು ಸುಬ್ರಹ್ಮಣ್ಯ ನಗರ ನಿವಾಸಿಗಳಾದ ದೀಪಕ್ (19), ಕಲ್ಯಾಣಪುರ ಮೂಡು ತೋನ್ಸೆ ನಿವಾಸಿ ಸಾಗರ್ (36), ಬಂಟ್ವಾಳ ಫರಂಗೀಪೇಟೆ ನಿವಾಸಿ ಇಮ್ತಿಯಾಜ್ ಎ (39) ಮತ್ತು ಬಜಾಲ್ ನಿವಾಸಿ್ ಮೊಹಮ್ಮದ್ ಇಕ್ಬಾಲ್ (35) ಎಂದು ಗುರುತಿಸಲಾಗಿದೆ.
ಜುಲೈ 19 ರಂದು ಮಲ್ಪೆ ಠಾಣಾ ಸರಹದ್ದಿನ ಉಮೇಶ ತೆಂಕನಿಡಿಯೂರು ಮಲ್ಪೆ ಠಾಣೆಯಲ್ಲಿ ದೂರು ನೀಡಿದ್ದು, ತನ್ನ ದೂರಿನಲ್ಲಿ ತನ್ನ ಬಳಿ 600 ಸೆಂಟ್ರಿಂಗ್ ಶೀಟ್ ಮತ್ತು 5-6 ಸೆಟ್ ಪಿಲ್ಲರ ಬಾಕ್ಸ್ ಇದ್ದು, ತಮ್ಮ ಪಕ್ಕದ ಮನೆಯಾದ ಜಯಂತಿ ರವರ ಮನೆಯ ಸೆಂಟ್ರಿಂಗ್ ಕೆಲಸ ವಹಿಸಿಕೊಂಡಿದ್ದು ಸದ್ರಿ ಸೈಟ್ ಗೆ ಅದನ್ನು ತಂದು ಹಾಕಿದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ 80 ಸೆಂಟ್ರಿಂಗ್ ಶೀಟ್ ಮತ್ತು 4 ಪಿಲರ್ ಬಾಕ್ಸ್ ಸೆಟ್ ಗಳ ಅಂದಾಜು ಮೌಲ್ಯ ರೂಪಾಯಿ 1,10,000/- ಆಗಿರುತ್ತದೆ ಎಂಬುದಾಗಿ ತಿಳಿಸಿದ್ದು, ಅದರಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಎನ್. ವಿಷ್ಣುವರ್ಧನ್ ಐ.ಪಿ.ಎಸ್,ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ ಹಾಗೂ ಎಸ್.ಟಿ. ಸಿದ್ದಲಿಂಗಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ಸುಧಾಕರ ನಾಯ್ಕಪಲೀಸ್ ಉಪಾಧೀಕ್ಷಕರು ಉಡುಪಿ ಉಪವಿಭಾಗರವರ ನಿರ್ದೇಶನದಂತೆ ಹಾಗೂ ಶರಣ ಗೌಡ, ವೃತ್ತ ನಿರೀಕ್ಷಕರು ಮಲ್ಪೆ ವೃತ್ತರವರ ಮಾರ್ಗದರ್ಶನದಲ್ಲಿ ಮಲ್ಪೆ ಠಾಣೆಯ ಪಿ.ಎಸ್.ಐ. ಸಕ್ತೀವೇಲುರವರ ನೇತೃತ್ವದಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡಿ ಅವರು ಕಳ್ಳತನ ಮಾಡಿದ್ದ ಕಟ್ಟಡ ನಿರ್ಮಾಣಕ್ಕೆ ಬಳಸುವ ಕಬ್ಬಿಣದ ಸೆಂಟ್ರಿಗ್ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ ಆರೋಪಿಗಳು ಕೃತ್ಯಕ್ಕೆ ಒಳಸಿದ ಗೂಡ್ಸ್ ವಾಹನ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದು ಅವುಗಳ ಅಂದಾಜು ಮೌಲ್ಯ ರೂಪಾಯಿ 1,80,000 ಆಗಿರುತ್ತದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಈ ಕಾರ್ಯಾಚರಣೆಯಲ್ಲಿ ಮಲ್ಪೆ ಠಾಣೆಯ ಪಿ.ಎಸ್.ಐ ಸಕ್ತಿವೇಲು, ಎಎಸ್ಐರವರಾದ ಜನಾರ್ಧನ ದೇವಾಡಿಗ, ರತ್ನಾಕರ, ರವಿಚಂದ್ರ, ಸಿಬ್ಬಂದಿಯವರಾದ ಲೋಕೇಶ್, ಸಂತೋಷ, ಜಯರಾಮ, ರವಿರಾಜ್, ಗುರುನಿಂಗಪ್ಪ ಜೀಪು ಚಾಲಕರಾದ ಮಹಾಬಲೇಶ್ವರ ರವರು ಭಾಗವಹಿಸಿರುತ್ತಾರೆ.