ಮಲ್ಪೆ : ಹೊಟೇಲ್ ವ್ಯವಹಾರದಲ್ಲಿ ಪಾಲುದಾರಿಕೆ ನೀಡುವುದಾಗಿ ಲಕ್ಷಾಂತರ ಮೋಸ

Spread the love

ಮಲ್ಪೆ : ಹೊಟೇಲ್ ವ್ಯವಹಾರದಲ್ಲಿ ಪಾಲುದಾರಿಕೆ ನೀಡುವುದಾಗಿ ಲಕ್ಷಾಂತರ ಮೋಸ

ಉಡುಪಿ: ವ್ಯವಹಾದಲ್ಲಿ ಪಾಲುದಾರನಾಗಿ ಮಾಡುತ್ತೇನೆ ಎಂದು ವ್ಯಕ್ತಿಯೋರ್ವರಿಗೆ ಲಕ್ಷಾಂತರ ರೂಪಾಯಿ ಮೋಸ ಮಾಡಿರುವ ಕುರಿತು ಮಲ್ಪೆ ಪೊಲೀಸ್ ಠಾಣೆಯ್ಲಲಿ ಪ್ರಕರಣ ದಾಕಲಾಗಿದೆ.

ಕುಂದಾಪುರ ಕೋಡಿ ನಿವಾಸಿ ಜಗದೀಶ್ ಬಾಬು ಶ್ರೀಯಾನ್ ಎಂಬವರು ದೂರು ದಾಖಲಿಸಿದ್ದು, ಮಲ್ಪೆಯ ಸಂದೀಪ ವಿಠಲ ಕುಂದರ್ ಎಂಬವರರು ಮೋಸ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಂದೀಪ್ ಕುಂದರು ಅವರು ಮಲ್ಪೆಯ ಸಿಟಿ ಸೆಂಟರ್ ಕಟ್ಟಡದಲ್ಲಿ ಹೊಟೇಲ್ ಹಾಗೂ ಇನ್ನಿತರ ಕೆಟರಿಂಗ್ ವ್ಯವಹಾರ ನಡೆಸುತ್ತಿದ್ದು ವ್ಯವಹಾರದಲ್ಲಿ ಜಗದೀಶ್ ಬಾಬು ಶ್ರೀಯಾನ್ ಇವರನ್ನು ಪಾಲುದಾರನಾಗಿ ಮಾಡುತ್ತೇನಂದು ನಂಬಿಸಿದ್ದು ಅದರಂತೆ ಜಗದೀಶ್ ಅವರರು ವಿಠಲ್ ಅವರ ಕೆನರಾ ಬ್ಯಾಂಕ್ ಆದಿ ಉಡುಪಿ ಶಾಖೆಯ ಖಾತೆಗೆ ಮತ್ತು ಆಕ್ಸಿಸ್ ಬ್ಯಾಂಕ್ ಉಡುಪಿ ಶಾಖೆಯ ಖಾತೆಗೆ ಒಟ್ಟು 9,85,000/- ರೂಪಾಯಿಯನ್ನು ನೆಪ್ಟ್ ಮೂಲಕ ಆನ್ ಲೈನ್ ವರ್ಗಾವಣೆ ಮುಖಾಂತರ ಖಾತೆಗಳಿಗೆ ವರ್ಗಾವಣೆ ಮಾಡಿರುತ್ತಾರೆ.

ಅಲ್ಲದೆ 15,000 ರೂಪಾಯಿಯನ್ನು ಜಗದೀಶ್ ಬಾಬು ಶ್ರೀಯಾನ್ ಅವರು ವಿಠಲ್ ಅವರ ಬಾಡಿಗೆ ಮನೆಗೆ ಹೋಗಿ ನೀಡಿರುತ್ತಾರೆ. ವಿಠಲ್ ವ್ಯವಹಾರದ ಬಗ್ಗೆ ಕರಾರನ್ನು ಮಾಡಿಕೊಡುತ್ತೇನೆಂದು ಮನೆಗೆ ಬರುವಂತೆ ತಿಳಿಸಿದ ಮೇರೆಗೆ ಬಾಬು ಅವರು ದಿನಾಂಕ 05/03/2020 ರಂದು ಮಲ್ಪೆಯಲ್ಲಿರುವ ಆರೋಪಿಯ ಬಾಡಿಗೆ ಮನೆಗೆ ಹೋದಾಗ ಆರೋಪಿ ಮನೆಯಲ್ಲಿ ಇರದೆ ನಾಪತ್ತೆಯಾಗಿರುವುದಾಗಿ ನ್ಯಾಯಾಲಯದಲ್ಲಿ ನೀಡಿದ ಖಾಸಗಿ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


Spread the love