ಮಲ್ಯಗೇಟ್, ಟ್ರಕ್‍ಪಾರ್ಕಿಂಗ್ ಟರ್ಮಿನಲ್‍ಗೆ ಶಿಲನ್ಯಾಸ, ಬಿಡಿಸಿ ಕಟ್ಟಡ ಲೋಕಾರ್ಪಣೆ

Spread the love

ಮಲ್ಯಗೇಟ್, ಟ್ರಕ್‍ಪಾರ್ಕಿಂಗ್ ಟರ್ಮಿನಲ್‍ಗೆ ಶಿಲನ್ಯಾಸ, ಬಿಡಿಸಿ ಕಟ್ಟಡ ಲೋಕಾರ್ಪಣೆ

ಮಂಗಳೂರು ಜಿಲ್ಲೆಯ ಪ್ರವಾಸ ಕೈಗೊಂಡಿರುವ ಕೇಂದ್ರ ಬಂದರು, ಹಡಗು ಮತ್ತು ಜಲ ಸಾರಿಗೆ ಸಚಿವ ಹಾಗೂ ಆಯುಷ್ ಖಾತೆ ಸಚಿವ ಸರ್ಬಾನಂದ್ ಸೋನೋವಾಲ್ ಅವರು 2021ರ ಸೆ. 24ರ ಶುಕ್ರವಾರ ನವ ಮಂಗಳೂರು ಬಂದರು ಟ್ರಸ್ಟ್‍ನಲ್ಲಿ ಮಲ್ಯಗೇಟ್‍ನ ಆಧುನೀಕರಣಕ್ಕೆ ಶಿಲನ್ಯಾಸ ನೆರವೇರಿಸಿ, ‌  ಕಟ್ಟಡವನ್ನು ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಅವರೊಂದಿಗೆ ಬಂದರು, ಹಡಗು ಮತ್ತು ಜಲ ಸಾರಿಗೆ ಖಾತೆ ರಾಜ್ಯ ಸಚಿವ ಶ್ರೀಪಾದ್ ಯಸ್ಸೋ ನಾಯಕ್ ಅವರು ಹಾಜರಿದ್ದರು. ಶಿಲನ್ಯಾಸದ ನಂತರ ಬಂದರಿನ ಕಾರ್ಯಕ್ಷಮತೆಯನ್ನು ಪರಾಮರ್ಶಿಸಿದ ಸಚಿವರೊಂದಿಗೆ ಎನ್.ಎಂ.ಪಿ.ಟಿ.ಯ ಅಧ್ಯಕ್ಷ ಡಾ. ಎ.ವಿ. ರಮಣ ಬಂದರಿನ ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಭೂತ ಸೌಕರ್ಯ ಯೋಜನೆಗಳು ಮತ್ತು ಇತರ ಪ್ರಸ್ತಾವನೆಗಳ ಕುರಿತಂತೆ ವಿವರಿಸಿದರು.

ಸಚಿವರ ಈ ಭೇಟಿ, 2021ರ ಜುಲೈನಲ್ಲಿ ಹೊಸ ಖಾತೆಯ ಜವಾಬ್ದಾರಿಯನ್ನು ವಹಿಸಿಕೊಂಡಾಗಿನಿಂದ ದೇಶದ ಎಲ್ಲಾ ಪ್ರಮುಖ ಬಂದರುಗಳಿಗೆ ನೀಡುತ್ತಿರುವ ಸರಣಿ ಭೇಟಿಗಳ ಭಾಗವಾಗಿದ್ದು, ಭೇಟಿಯ ವೇಳೆ ಸೋನೊವಾಲ್ ಬಂದರಿನಲ್ಲಿನ ಅಭಿವೃದ್ಧಿ ಕಾರ್ಯಗಳ ಮೇಲೆ ಪಕ್ಷಿನೋಟ ಬೀರಿ, ಬಂದರಿನ ಬಗ್ಗೆ ಸಂತಸ ವ್ಯಕ್ತಪಡಿಸಿದರು. ನಂತರ ಅವರು ಬಂದರು ಆಡಳಿತದೊಂದಿಗೆ ಸಭೆ ನಡೆಸಿದರು ಮತ್ತು ಬಂದರಿನ ಕಾರ್ಯಕ್ಷಮತೆ ಮತ್ತು ಅದರ ಭವಿಷ್ಯದ ವಿಸ್ತರಣೆ ಕಾರ್ಯಕ್ರಮಗಳನ್ನು ಪರಿಶೀಲಿಸಿದರು.

ಬಂದರಿನಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲು ಶಂಕುಸ್ಥಾಪನೆ:

ಸುಧಾರಿತ ಒಳನಾಡಿನ ಸಂಪರ್ಕದಿಂದಾಗಿ, ಕಂಟೇನರ್ ಮತ್ತು ಇತರ ಸಾಮಾನ್ಯ ಸರಕು ಸಂಚಾರವು ಬಂದರಿನಲ್ಲಿ ಹೆಚ್ಚುತ್ತಿದೆ. ಬಂದರು ಒಳನಾಡು ಮೂರು ಮುಖ್ಯ ರೈಲು ಮಾರ್ಗ ಮತ್ತು ಮೂರು ರಾಷ್ಟ್ರೀಯ ಹೆದ್ದಾರಿಗಳು ಅಂದರೆ ರಾಷ್ಟ್ರೀಯ ಹೆದ್ದಾರಿ -66, ರಾಷ್ಟ್ರೀಯ ಹೆದ್ದಾರಿ -75 ಮತ್ತು ರಾಷ್ಟ್ರೀಯ ಹೆದ್ದಾರಿ-169ರೊಂದಿಗೆ ಸಂಪರ್ಕಿತವಾಗಿದೆ.

ನವ ಮಂಗಳೂರು ಬಂದರಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಹೊರಗಿನ ಮತ್ತು ಕರ್ನಾಟಕ ರಾಜ್ಯದ ಇತರ ದೂರದ ಪ್ರದೇಶಗಳಿಗೆ ಸರಕುಗಳನ್ನು ರವಾನಿಸಲು ಪ್ರತಿದಿನ ಸುಮಾರು 500 ಸಂಖ್ಯೆಯ ಟ್ರಕ್ ಗಳು ಸಂಚರಿಸುವುದನ್ನು ಗಮನಿಸಬಹುದಾಗಿದೆ. ನವ ಮಂಗಳೂರು ಬಂದರು ಕಸ್ಟಮ್ಸ್ ಹೌಸ್ ಬಳಿ ಈ ಟ್ರಕ್ ಗಳಿಗೆ 12,000 ಚದರ ಮೀಟರ್ ಪಾಕಿರ್ಂಗ್ ಸೌಲಭ್ಯಗಳನ್ನು ಒದಗಿಸಿದ್ದು, ಸುಮಾರು 160 ಸಂಖ್ಯೆಯ ಟ್ರಕ್ ಗಳಿಗೆ ಸ್ಥಳಾವಕಾಶ ಕಲ್ಪಿಸುತ್ತಿದೆ, ಆದಾಗ್ಯೂ ಅಸ್ತಿತ್ವದಲ್ಲಿರುವ ನಿಲುಗಡೆ ಪ್ರದೇಶ ಸಾಕಾಗುವುದಿಲ್ಲ ಎಂಬುದು ಕಂಡುಬಂದಿದೆ.

ಕೆಕೆ ಗೇಟ್ ಬಳಿ ಗಟ್ಟಿ ಮೇಲ್ಮೈನ ಟ್ರಕ್ ನಿಲುಗಡೆ ಟರ್ಮಿನಲ್ ಅನ್ನು ಪ್ರಸ್ತಾಪಿಸಲಾಗಿದೆ ಮತ್ತು 2 ಕೋಟಿ ರೂ. ವೆಚ್ಚದಲ್ಲಿ 16,000 ಮೀ 2 ಪ್ರದೇಶದಲ್ಲಿ ಪೂರ್ಣಗೊಳಿಸಲಾಗುವುದು. 17000 ಮೀ 2 ಹೆಚ್ಚುವರಿ ಟ್ರಕ್ ನಿಲುಗಡೆ ಪ್ರದೇಶವನ್ನು 1.9 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಟ್ರಕ್ ಟರ್ಮಿನಲ್ ಗೆ 2022-23ರಲ್ಲಿ 5.00 ಕೋಟಿ ರೂ.ಗಳ ಯೋಜನಾ ವೆಚ್ಚದಲ್ಲಿ ಕಾಂಕ್ರೀಟ್ ಪಾದಚಾರಿ ಮಾರ್ಗ, ಗೇಟ್ ಹೌಸ್, ರೆಸ್ಟೋರೆಂಟ್, ಡಾರ್ಮಿಟರಿ ಒದಗಿಸಲಾಗುವುದು. ಇದರಿಂದಾಗುವ ಪ್ರಯೋಜನಗಳು.

ಹೆದ್ದಾರಿ ಬದಿಯಲ್ಲಿ ಟ್ರಕ್ ನಿಲುಗಡೆ ತಪ್ಪುತ್ತದೆ

ಟ್ರಕ್ ಚಾಲಕರಿಗೆ ಮೂಲಭೂತ ಸೌಲಭ್ಯಗಳು ದೊರಕಿ, ಅಪಘಾತಗಳ ಇಳಿಕೆಗೆ ಕಾರಣವಾಗುತ್ತದೆ.

ಬಂದರಿನಲ್ಲಿ ನಿಲುಗಡೆ ಟರ್ಮಿನಲ್ ನಿಂದ ಲೋಡಿಂಗ್ ಪ್ರದೇಶಕ್ಕೆ ಟ್ರಕ್ ಗಳ ವೈಜ್ಞಾನಿಕವಾದ ಚಲನೆ.

ಟ್ರಕ್‍ನ ಬ್ಯಾಟರಿಗಳು ಮತ್ತು ಟೈರ್ ಗಳ ಕಳ್ಳತನವನ್ನು ತಗ್ಗಿಸುತ್ತದೆ.

ರಸ್ತೆಗಳು ಮತ್ತು ಬಂದರು ಆವರಣದಲ್ಲಿ ಸಂಚಾರ ದಟ್ಟಣೆಯನ್ನು ಸುಗಮಗೊಳಿಸುತ್ತದೆ.

ಇದಲ್ಲದೆ ಬಂದರು 2022-23ರ ಬಜೆಟ್ ಅಂದಾಜಿನಲ್ಲಿ ಟ್ರಕ್ ನಿಲುಗಡೆ ಟರ್ಮಿನಲ್‍ಗೆ ಪಿಕ್ಯೂಸಿಯನ್ನು 4 ಕೋಟಿ ರೂ.ಗಳಿಗೆ ಒದಗಿಸಲು ಯೋಜಿಸಿದೆ.

ಎ.ಸಿ.ಐ.ಡಿ.ಇ. (ಅಸೈಡ್) ಯೋಜನೆಯಡಿ ನವ ಮಂಗಳೂರು ಬಂದರಿನಲ್ಲಿ ರಫ್ತು ಮತ್ತು ಪರೀಕ್ಷಾ ಕೇಂದ್ರಕ್ಕಾಗಿ

ವ್ಯಾಪಾರ ಅಭಿವೃದ್ಧಿ ಪಾರ್ಕ್:
ಬಂದರಿನಲ್ಲಿ ನಿರ್ವಹಿಸಲಾಗುವ ರಫ್ತು ಸರಕುಗಳಿಗೆ ರಫ್ತು ಮಾಡುವ ಮೊದಲು ವಿವಿಧ ಪ್ರಾಧಿಕಾರಗಳಿಂದ ಪರೀಕ್ಷೆ ಮತ್ತು ಪ್ರಮಾಣೀಕರಣದ ಅಗತ್ಯವಿರುತ್ತದೆ. ಪ್ರಸ್ತುತ, ಪರೀಕ್ಷಾ ಕೇಂದ್ರಗಳು ಮೈಸೂರು, ಮುಂಬೈ ಮತ್ತು ಇತರ ಸ್ಥಳಗಳಲ್ಲಿವೆ ಮತ್ತು ಸಾಗಣೆಗೆ ಮೊದಲು ಏಜೆನ್ಸಿಗಳು ಪರೀಕ್ಷೆಗಳನ್ನು ನಡೆಸುತ್ತವೆ. ನವ ಮಂಗಳೂರು ಬಂದರು ಟ್ರಸ್ಟ್ ನಲ್ಲಿ ಸಾಗಣೆಗೆ ಅನುಕೂಲವಾಗುವಂತೆ ಮತ್ತು ಎಲ್ಲಾ ಸೌಲಭ್ಯಗಳನ್ನು ಒಂದೇ ಛಾವಣಿಯಡಿಯಲ್ಲಿ ತರಲು, ರಫ್ತು ಮತ್ತು ಪರೀಕ್ಷಾ ಕೇಂದ್ರಕ್ಕಾಗಿ ವ್ಯಾಪಾರ ಅಭಿವೃದ್ಧಿ ಉದ್ಯಾನವನ್ನು ಪ್ರಸ್ತಾಪಿಸಲಾಗಿದೆ.

ಆ ಪ್ರಕಾರವಾಗಿ, ಈ ಪ್ರಸ್ತಾಪವನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ವಾಣಿಜ್ಯ ಇಲಾಖೆಗೆ ಅಸೈಡ್ (ರಫ್ತುಗಳ ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯಗಳಿಗೆ ನೆರವು) ಯೋಜನೆಯಡಿ ನೆರವು ನೀಡಲು ಸಲ್ಲಿಸಲಾಗಿದೆ. ವಾಣಿಜ್ಯ ಸಚಿವಾಲಯವು ಬಂದರಿನ ಪ್ರಸ್ತಾಪವನ್ನು ಪರಿಗಣಿಸಿದ್ದು, ಯೋಜನೆಯ ವೆಚ್ಚದ ಶೇ. 75 ಅಂದರೆ 15.00 ಕೋಟಿಗಳ ನೆರವನ್ನು ಒದಗಿಸಲು ಅನುಮೋದನೆ ನೀಡಿದೆ. ಯೋಜನೆಗೆ ಮಾಡಿದ ಒಟ್ಟು ವೆಚ್ಚ 25 ಕೋಟಿ ರೂ. ಆಗಿದೆ.

ವ್ಯಾಪಾರ ಅಭಿವೃದ್ಧಿ ಪಾರ್ಕ್ ಪೈಲ್ ಫೌಂಡೇಷನ್ ನಲ್ಲಿ ಎರಡು ಲಿಫ್ಟ್ ಗಳು, ಅಗ್ನಿ ಶಾಮಕ ವ್ಯವಸ್ಥೆ ಮತ್ತು ಲ್ಯಾಂಡ್ ಸ್ಕೇಪಿಂಗ್ ಇತ್ಯಾದಿಗಳ ಜೊತೆಗೆ ಈ ಕೆಳಕಂಡವುಗಳನ್ನೂ ಒಳಗೊಂಡಿದೆ.
ಎ)ಮಹಡಿಗಳ ನಿಲುಗಡೆ
ಬಿ)ಸಮಾವೇಶ ಸಭಾಂಗಣ,
ಸಿ)ರೆಸ್ಟೋರೆಂಟ್
ಡಿ)ಅಂಚೆ ಕಚೇರಿ, ಬ್ಯಾಂಕ್
ಇ)ಕಸ್ಟಮ್ಸ್ ಮತ್ತು ಬಂದರು ಕಚೇರಿಗಳು
ಎಫ್)ಕಸ್ಟಮ್ ಹೌಸ್ ಏಜೆಂಟ್ ಗಳು
ಜಿ)ಸಾಗಣೆ ಕಚೇರಿಗಳು
ಎಚ್)ಪರೀಕ್ಷಾ ಕೇಂದ್ರ ಕಟ್ಟಡ


Spread the love