
Spread the love
ಮಳವಳ್ಳಿಯಲ್ಲಿ ಕಾಯಕ ಬಂಧುಗಳಿಗೆ ಕಾರ್ಯಾಗಾರ
ಮಂಡ್ಯ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಾಯಕ ಬಂಧುಗಳಿಗೆ ಕಾರ್ಯಾಗಾರ ನಡೆಯಿತು.

ಪ್ರಭಾರ ಸಹಾಯಕ ನಿರ್ದೇಶಕರಾದ ಲಿಂಗರಾಜು ರವರು ಕೃಷಿ ಕೂಲಿಗಾರರ ಸಂಘದ ಮೇಟ್ ಗಳಿಗೆ ಮೇಟ್ ಕಾರ್ಡ್ ನ ಮಹತ್ವದ ಬಗ್ಗೆ, ಜಿಲ್ಲಾ ಐಇಸಿ ಸಂಯೋಜಕರಾದ ರೇಖಾ ರವರು ಕಾಯಕ ಬಂಧುಗಳ ಕರ್ತವ್ಯ ಮತ್ತು ಜವಬ್ದಾರಿ ಬಗ್ಗೆ, ಬಂಡೂರು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಕುಮಾರ್ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಇತಿಹಾಸ ಮತ್ತು ಕೂಲಿಗಾರರ ವಿಮೆ ಬಗ್ಗೆ, ತಾಂತ್ರಿಕ ಸಹಾಯಕರಾದ ನಿತಿನ್ ಕಾಮಗಾರಿಯ ಅಳತೆ ಮತ್ತು ಅದಕ್ಕೆ ನೀಡುವ ಹಣದ ಪ್ರಮಾಣದ ಬಗ್ಗೆ ವಿವರಿಸಿದರು.

ಇದೇ ವೇಳೆ ಮೇಟ್ ಗಳಿಗೆ ಕೋವಿಡ್- 19 ಟೆಸ್ಟ್ ಮಾಡಲಾಯಿತು. ಪ್ರಾಂತ ಕೃಷಿ ಕೂಲಿಗಾರರ ಸಂಘದ ಅಧ್ಯಕ್ಷರಾದ ಪುಟ್ಟಮಾದು ಮತ್ತು ಮೇಟ್ ಗಳು, ಪಿಡಿಒ ಪಾರ್ಥಸಾರಥಿ, ಟಿ.ಸಿ. ಸುಹಾಸ್, ತಾಲ್ಲೂಕು ಐಇಸಿ ಸಂಯೋಜಕರಾದ ಸುನಿಲ್ ಕುಮಾರ್.ಹೆಚ್, ಸೋಷಿಯಲ್ ಆಡಿಟರ್ ಮಹೇಶ್ ಟಿಎಇ, ಬಿಎಫ್ ಟಿ ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.
Spread the love