ಮಳೆ ಆರ್ಭಟ: ಉಳ್ಳಾಲದಲ್ಲಿ ಮನೆ ಸಂಪರ್ಕದ ಮೋರಿ ದಾಟುವಾಗ ನೀರಿಗೆ ಬಿದ್ದು ವ್ಯಕ್ತಿ ಸಾವು 

Spread the love

ಮಳೆ ಆರ್ಭಟ: ಉಳ್ಳಾಲದಲ್ಲಿ ಮನೆ ಸಂಪರ್ಕದ ಮೋರಿ ದಾಟುವಾಗ ನೀರಿಗೆ ಬಿದ್ದು ವ್ಯಕ್ತಿ ಸಾವು 

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಾರ್ಭಟ ಮುಂದುವರೆದಿದ್ದು ಉಳ್ಳಾಲ ತಾಲೂಕಿನ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ಎಂಬಲ್ಲಿ ಮನೆ ಸಂಪರ್ಕದ ಮೋರಿ ದಾಟುವ ಸಂದರ್ಭ ವ್ಯಕ್ತಿಯೋರ್ವರು ಆಯ ತಪ್ಪಿ ಬಿದ್ದು ಮಳೆ ನೀರಿಗೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ಪಂಜಂದಾಯ ದೈವಸ್ಥಾನದ ಬಳಿಯ ಬಾಡಿಗೆ ಮನೆ ನಿವಾಸಿ ಸುರೇಶ್ ಗಟ್ಟಿ(52)ಮೃತ ವ್ಯಕ್ತಿ.

ಸುರೇಶ್ ಗಟ್ಟಿ ಅವರು ವೃತ್ತಿಯಲ್ಲಿ ಪೈಂಟರ್ ಆಗಿದ್ದು ಕೆಲಸ ಮುಗಿಸಿ ಇಂದು ಸಂಜೆ ಮನೆಗೆ ಹಿಂದಿರುಗಿದ್ದ ವೇಳೆ ಮನೆ ಸಂಪರ್ಕದ ಮೋರಿ ದಾಟುತ್ತಿದ್ದ ವೇಳೆ ಕಾಲು ಜಾರಿ ಮೋರಿಗೆ ಬಿದ್ದು ಧಾರಾಕಾರ ಸುರಿಯುತ್ತಿದ್ದ ಮಳೆ ನೀರಲ್ಲಿ ಮುಳುಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಮೋರಿಯಲ್ಲಿ ಬಿದ್ದಿದ್ದ ಸುರೇಶ್ ಅವರನ್ನ ಪಕ್ಕದ ಮನೆಯ ಮಾಜಿ ಸೋಮೇಶ್ವರ ಗ್ರಾಮ ಪಂಚಾಯತ್ ಸದಸ್ಯ ಪ್ರೇಮಾನಂದ ಮತ್ತು ಅವರ ಸಂಬಂಧಿ ಧನರಾಜ್ ಅವರು ಮೇಲಕ್ಕೆತ್ತಿ ಆಸ್ಪತ್ರೆ ಸಾಗಿಸುವಾಗಲೇ ಸುರೇಶ್ ಅವರು ಮೃತ ಪಟ್ಟಿದ್ದಾರೆ.

ಮೃತ ಸುರೇಶ್ ಅವರ ಪತ್ನಿ ಬೀಡಿ ಕಟ್ಟುತ್ತಿದ್ದು,ಹಿರಿಯ ಮಗಳಿಗೆ ಇತ್ತೀಚಿಗಷ್ಟೆ ಮದುವೆ ಆಗಿತ್ತು.ಕಿರಿಯ ಮಗಳು ಅವಿವಾಹಿತಲಾಗಿದ್ದು ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ತಂದೆಯೇ ಅಕಾಲಿಕ ಮರಣವನ್ನಪ್ಪಿದ್ದು ಬಡ ಅಶಕ್ತ ಕುಟುಂಬಕ್ಕೆ ದಿಕ್ಕೇ ಕಾಣದಂತಾಗಿದೆ.


Spread the love