ಮಳೆ ಆರ್ಭಟ: ಕಮಲಶಿಲೆ ದೇವಸ್ಥಾನಕ್ಕೆ ಆಗಮಿಸಿದ ವ್ಯಕ್ತಿ ಕುಬ್ಜಾ ನದಿಯಲ್ಲಿ ಮುಳುಗಿ ಸಾವು

Spread the love

ಮಳೆ ಆರ್ಭಟ: ಕಮಲಶಿಲೆ ದೇವಸ್ಥಾನಕ್ಕೆ ಆಗಮಿಸಿದ ವ್ಯಕ್ತಿ ಕುಬ್ಜಾ ನದಿಯಲ್ಲಿ ಮುಳುಗಿ ಸಾವು

ಕುಂದಾಪುರ: ಭಾರಿ ಮಳೆಗೆ ಜಿಲ್ಲೆಯಲ್ಲಿ ಮತ್ತೊಂದು ಸಾವು ಸಂಭವಿಸಿದ್ದು, ಕಮಲಶಿಲೆ ದೇವಸ್ಥಾನಕ್ಕೆ ಪೂಜೆಗೆ ಆಗಮಿಸಿದ ವ್ಯಕ್ತಿಯೋರ್ವರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಕಮಲಶಿಲೆ ತಪ್ಪಲು ನಿವಾಸಿ ಶೇಷಾದ್ರಿ ಐತಾಳ್ (75) ಎಂದು ಗುರುತಿಸಲಾಗಿದೆ.

ಮಾಹಿತ ಪ್ರಕಾರ ಶೇಷಾದ್ರಿ ಐತಾಳ್ ಕಮಲ ಶಿಲೆ ದೇವಳಕ್ಕೆ ಪೂಜೆಗೆ ಆಮಿಸಿದ್ದು ಈ ಸಂದರ್ಭದಲ್ಲಿ ಕಮಲಶಿಲೆ ದೇವಳದ ಪಕ್ಕದಲ್ಲಿ ಹರಿಯುವ ಕುಬ್ಜಾ ನದಿಗೆ ಕಾಲು ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ.

ನದಿಗೆ ಬಿದ್ದ ಜಾಗದ ಸುಮಾರು ನೂರು ಮೀಟರ್ ದೂರಲ್ಲಿ ಶವ ಪತ್ತೆಯಾಗಿದ್ದು ಮುಳುಗು ತಜ್ಞ ಮಂಜುನಾಥ್ ನಾಯಕ್ ತಂಡದಿಂದ ಶವ ಪತ್ತೆ ಕಾರ್ಯ ನಡೆಸಿದೆ.

ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲು ಆಗಿದೆ,


Spread the love