ಮಸೀದಿಯ ನಮಾಝ್ ಸಂದರ್ಭಗಳಲ್ಲಿ ಕೋವಿಡ್ ನಿಯಮ ಪಾಲಿಸಿ – ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಮನವಿ

Spread the love

ಮಸೀದಿಯ ನಮಾಝ್ ಸಂದರ್ಭಗಳಲ್ಲಿ ಕೋವಿಡ್ ನಿಯಮ ಪಾಲಿಸಿ – ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಮನವಿ

ಉಡುಪಿ: ಮಸೀದಿಯ ನಮಾಝ್ ಸಂದರ್ಭಗಳಲ್ಲಿ ಕೋವಿಡ್ ಗೈಡ್ ಲೈನ್ಸ್ ಕಡ್ಡಾಯವಾಗಿ ಪಾಲಿಸುವಂತೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಮನವಿ ಮಾಡಿದೆ

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷರಾದ ಇಬ್ರಾಹಿಂ ಸಾಹೇಬ್‌ ಕೋಟ ಅವರು ರಾಜ್ಯ ಸರಕಾರವು ಜುಲೈ 5 ರಿಂದ ಧಾರ್ಮಿಕ ಕೇಂದ್ರಗಳಲ್ಲಿ ಆರಾಧನಾ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುಮತಿ ನೀಡಿದೆ. ಆದರೂ ಕೊರೊನ ಮಹಾಮಾರಿಯಿಂದ ನಾವು ಸಂಪೂರ್ಣವಾಗಿ ಮುಕ್ತರಾಗಿಲ್ಲ. ಕೋವಿಡ್ 19 ರ 3 ನೇ ಅಲೆ ಯ ಎಚ್ಚರಿಕೆಯ ಘಂಟೆ ಈಗಾಗಲೇ ನಮ್ಮನ್ನು ಕಾಡುತ್ತಿದೆ . ಸರಕಾರವು ಮಸೀದಿಗಳಲ್ಲಿ ನಮಾಝ್ ಆರಂಭಿಸಲು ಅನುಮತಿಸಿದೆಯಾದರೂ, ಕೋವಿಡ್ ನಿಯಮಗಳ ಪಾಲನೆ ಯೊಂದಿಗೆ ಎಂಬ ಶರ್ತವನ್ನೂ ವಿಧಿಸಿದೆ.

ಆದುದರಿಂದ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಮಸೀದಿಗಳಲ್ಲಿ ದೈಹಿಕ ಅಂತರವನ್ನು ಕಾಯ್ದುಕೊಂಡು ಮತ್ತು ಮಾಸ್ಕ್ ಧಾರಣೆ ಯನ್ನು ಕಡ್ಡಾಯವಾಗಿ ಪಾಲಿಸುವುದ ರೊಂದಿಗೆ ಮಸೀದಿಗಳನ್ನು ತೆರೆಯುವ ಮೂಲಕ ಕೋವಿಡ್ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ,ಆರೋಗ್ಯ ಇಲಾಖೆ ಹಾಗೂ ಸರಕಾರದೊಂದಿಗೆ ಸಹಕರಿಸಬೇಕೆಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಕರೆ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.


Spread the love